AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಭಾವನೆಗಳನ್ನು ಹೇಗೆ ನಿಭಾಯಿಸುತ್ತೀರಿ? ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣ ಸಿಗುತ್ತಿರುತ್ತವೆ. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಫೋಟೋಗಳು ಮೆದುಳಿಗೆ ವ್ಯಾಯಾಮ ನೀಡುವುದರ ಜೊತೆಗೆ ನಮ್ಮ ವ್ಯಕ್ತಿತ್ವದ ರಹಸ್ಯವನ್ನು ಸಹ ತಿಳಿಸುತ್ತದೆ. ಇದೀಗ ಅಂತಹದ್ದೊಂದು ಫೋಟೋ ವೈರಲ್‌ ಆಗಿದ್ದು, ನರಿ, ಪಕ್ಷಿ ಅಥವಾ ಮಹಿಳೆಯ ಮುಖ ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ಒತ್ತಡ ಮತ್ತು ಭಾವನೆಗಳನ್ನು ಯಾವ ರೀತಿ ನಿರ್ವಹಿಸುತ್ತೀರಿ ಎಂಬುದನ್ನು ತಿಳಿಯಿರಿ.

Personality Test: ನೀವು ಭಾವನೆಗಳನ್ನು ಹೇಗೆ ನಿಭಾಯಿಸುತ್ತೀರಿ? ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆImage Credit source: Instagram
ಮಾಲಾಶ್ರೀ ಅಂಚನ್​
|

Updated on:May 18, 2025 | 3:45 PM

Share

ಸಾಮಾನ್ಯವಾಗಿ ವ್ಯಕ್ತಿಯ ವರ್ತನೆ, ಮಾತನಾಡುವ ರೀತಿ, ಇನ್ನೊಬ್ಬರ ಜೊತೆ ನಡೆದುಕೊಳ್ಳುವ ರೀತಿಯಿಂದ ಆತನ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ದೇಹದ ಮೇಲಿರುವ ಮಚ್ಚೆಗಳು, ಕಣ್ಣಿನ ಬಣ್ಣ, ಮೂಗಿನ ಆಕಾರ, ಪಾದದ ಆಕಾರ, ಕೈ ಬೆರಳುಗಳ ಆಕಾರದ ಮೂಲಕ ನಮ್ಮ ರಹಸ್ಯ ಗುಣ  ಸ್ವಭಾವವನ್ನು ನಾವೇ ತಿಳಿದುಕೊಳ್ಳಬಹುದಾಗಿದೆ. ಅಷ್ಟೇ ಏಕೆ ಈಗೀಗ ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಆಪ್ಟಿಕಲ್‌ ಇಲ್ಯೂಷನ್‌ (Optical illusion) ಚಿತ್ರಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷಿಸಬಹುದು. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅದೇ ರೀತಿಯ ಚಿತ್ರವೊಂದು ವೈರಲ್‌ ಆಗಿದ್ದು, ನರಿ, ಪಕ್ಷಿ ಅಥವಾ ಮಹಿಳೆಯ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನೀವು ಒತ್ತಡ ಮತ್ತು ಭಾವನೆಯನ್ನು ಯಾವ ರೀತಿ ನಿಭಾಯಿಸುವವರಾಗಿರುತ್ತೀರಿ ಎಂಬುದನ್ನು ಪರೀಕ್ಷಿಸಿ.

ನರಿ, ಪಕ್ಷಿ, ಅಥವಾ ಮಹಿಳೆಯ ಮುಖ ನಿಮಗೆ ಮೊದಲು ಕಂಡಿದ್ದೇನು?

ಇದೀಗ ವೈರಲ್‌ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು marina_neuralean ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಈ ಚಿತ್ರದಲ್ಲಿ ಕೆಲವರಿಗೆ ಮೊದಲಿಗೆ ಮಹಿಳೆಯ ಮುಖ ಕಾಣಿಸಿದರೆ, ಇನ್ನು ಕೆಲವರಿಗೆ ಪಕ್ಷಿ ಕಾಣಿಸಬಹುದು, ಮತ್ತೂ ಕೆಲವರಿಗೆ ನರಿ ಕಾಣಿಸಬಹುದು. ಹೀಗೆ ಇದರಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬ ಆಧಾರದ ಮೇಲೆ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ
Image
ಪತಿಯ ಮುಂದೆ ವಧುದಕ್ಷಿಣೆ ಬೇಡಿಕೆಯಿಟ್ಟ ವಾಯುಪಡೆಯ ಮಹಿಳಾ ಅಧಿಕಾರಿ
Image
ಮುಖ ಕಾಂತಿಯುತವಾಗಿರಲು ಈ ಆಹಾರಗಳ ಸೇವನೆ ಮಾಡಬೇಡಿ
Image
ಈ ವೃತ್ತದಲ್ಲಿ ನಿಮಗೆ ಕಾಣಿಸಿದ ಬಣ್ಣ ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವ
Image
ಮನೆಯಲ್ಲೇ ಥಟ್ಟಂತ ಮಾಡಿ ರುಚಿಕರವಾದ ದ್ರಾಕ್ಷಿ ಉಪ್ಪಿನಕಾಯಿ

ವಿಡಿಯೋ ಇಲ್ಲಿದೆ ನೋಡಿ:

ಮೊದಲು ನರಿಯನ್ನು ನೋಡಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ನರಿ ಕಾಣಿಸಿದರೆ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಶಾಂತ ವ್ಯಕ್ತಿಯಾಗಿರುತ್ತೀರಿ. ನೀವು ಪ್ರಚೋದನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ತೀರಾ ವಿರಳವಾಗಿ ಕೆಲವೊಂದು ಸನ್ನಿವೇಶಗಳಲ್ಲಿ ನಾಟಕೀಯವಾಗಿ ವರ್ತಿಸುತ್ತೀರಿ.

ಇದನ್ನೂ ಓದಿ: ಈ ವೃತ್ತದಲ್ಲಿ ನಿಮಗೆ ಕಾಣಿಸಿದ ಬಣ್ಣ ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವ

ಮೊದಲ ಪಕ್ಷಿಯನ್ನು ನೋಡಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೇನಾದರೂ ಮೊದಲು ಪಕ್ಷಿ ಕಾಣಿಸಿದರೆ, ನೀವು ಹೆಚ್ಚು ನಾಟಕೀಯವಾಗಿ ವರ್ತಿಸುವವರಾಗಿರಬಹುದು. ಸಣ್ಣ ಅನಾನುಕೂಲತೆ ಕೂಡಾ ನಿಮಗೆ ಅಸಮತೋಲನವನ್ನು ಅಥವಾ ಕಸಿವಿಸಿ ಉಂಟುಮಾಡಬಹುದು. ಅಷ್ಟೇ ಅಲ್ಲದೆ ನೀವು ಪ್ರತಿಯೊಂದು ವಿಷಯದಲ್ಲೂ ಆಗಾಗ್ಗೆ ಅತೃಪ್ತಿಯನ್ನು ಕಾಣುತ್ತೀರಿ.

ಮಹಿಳೆಯ ಮುಖವನ್ನು ನೋಡಿದರೆ: ನಿಮಗೇನಾದರೂ ಈ ಚಿತ್ರದಲ್ಲಿ ಮೊದಲಿಗೆ ಮಹಿಳೆಯ ಮುಖ ಕಾಣಿಸಿದರೆ ನೀವು ತರ್ಕಬದ್ಧ ಚಿಂತಕರಾಗಿರುತ್ತೀರಿ. ತರ್ಕಬದ್ಧ ಚಿಂತನೆ ಮತ್ತು ಸಾಮಾನ್ಯ ಜ್ಞಾನವನ್ನು ಹೊಂದಿರುವ ನೀವು ಜೀವನವು ಕಷ್ಟಕರವಾದ ಹಾದಿಯಲ್ಲಿ ಸಾಗುತ್ತಿದೆ ಎಂದಾಗ ಮಾತ್ರ ಹೆಚ್ಚು ಭಾವುಕರಾಗುತ್ತೀರಿ. ಉಳಿದ ಸಂದರ್ಭಗಳಲ್ಲಿ ಅಷ್ಟಾಗಿ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ. ಜೊತೆಗೆ ನೀವು ಹೆಚ್ಚಾಗಿ ನಿಮ್ಮನ್ನು ನೀವು ನಿಯಂತ್ರಣದಲ್ಲಿಡಲು ಮತ್ತು ನಿಮ್ಮ ಜೀವನವನ್ನು ಸಮತೋಲನದಲ್ಲಿಡಲು ಬಯಸುವವರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Sun, 18 May 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ