AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಕಿವಿ, ಹಾವು; ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲದೆ, ಇದು ನಿಮ್ಮ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವಗಳ ಬಗ್ಗೆ ಅನ್ವೇಷಿಸಲಿರುವ ಒಂದು ಉತ್ತಮ ಮಾರ್ಗವಾಗಿದೆ. ಇಂತಹ ವ್ಯಕ್ತಿತ್ವ ಪರೀಕ್ಷೆಯ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಹಾವು ಅಥವಾ ಕಿವಿ ಈ ಫೋಟೋದಲ್ಲಿ ಮೊದಲು ನಿಮಗೆ ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನೀವು ಸ್ವತಂತ್ರ್ಯವಾಗಿ ಬದುಕಲು ಇಷ್ಟಪಡುವವರೇ ಅಥವಾ ಸಹಾನುಭೂತಿಯುಳ್ಳವರೇ ಎಂಬುದನ್ನು ಪರೀಕ್ಷಿಸಿ.

Personality Test: ಕಿವಿ, ಹಾವು; ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು?  ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ವ್ಯಕ್ತಿತ್ವ ಪರೀಕ್ಷೆImage Credit source: okdario.com
ಮಾಲಾಶ್ರೀ ಅಂಚನ್​
|

Updated on: May 16, 2025 | 3:17 PM

Share

ಮೊದಲೆಲ್ಲಾ ಒಬ್ಬ ವ್ಯಕ್ತಿ ಹೇಗೆ ಮಾತನಾಡುತ್ತಾನೆ, ಆತ ಇತರರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ, ಯಾವ ರೀತಿ ಬಟ್ಟೆ ಹಾಕಿಕೊಳ್ಳುತ್ತಾನೆ ಎಂಬ ಆಧಾರದ ಮೇಲೆ ಅವನ ವ್ಯಕ್ತಿತ್ವವನ್ನು (Personality)  ಅಳೆಯುತ್ತಿದ್ದರು. ಈಗಂತೂ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ, ಕಣ್ಣಿನ ಬಣ್ಣ, ಪಾದದ ಆಕಾರ, ಮೂಗಿನ ಆಕಾರ ಸೇರಿದಂತೆ ದೇಹಾಕಾರದ ಮೂಲಕವೂ ನಮ್ಮ ನಿಗೂಢ ವ್ಯಕ್ತಿತ್ವ ಮತ್ತು ಗುಣ ಸ್ವಭಾವವನ್ನು ನಾವೇ ಪರೀಕ್ಷಿಸಿಕೊಳ್ಳಬಹುದಾಗಿದೆ. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಅಂತಹದ್ದೇ ಫೋಟೋವೊಂದು ಇದೀಗ ವೈರಲ್‌ ಆಗಿದ್ದು, ಹಾವು (Snake) ಅಥವಾ ಕಿವಿ (Ear) ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬ ಆಧಾರದ ಮೇಲೆ ನೀವು ಸಹಾನುಭೂತಿ ವ್ಯಕ್ತಿತ್ವದವರೇ ಅಥವಾ ಸ್ವತಂತ್ರ್ಯವಾಗಿ ಬದುಕಲು ಇಷ್ಟಪಡುವ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಹಾವು ಅಥವಾ ಕಿವಿ ನಿಮಗೆ ಈ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು?

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೀಗ ಅಂತಹದ್ದೇ ಚಿತ್ರವೊಂದು ಹರಿದಾಡುತ್ತಿದೆ. ಕಣ್ಣಿಗೆ ಭ್ರಮೆಯನ್ನುಂಟು ಮಾಡುವ ಈ ಚಿತ್ರದಲ್ಲಿ ಕೆಲವರಿಗೆ ಮೊದಲು ಹಾವು ಕಾಣಿಸಿದರೆ, ಇನ್ನೂ ಕೆಲವರಿಗೆ ಈ ಚಿತ್ರದಲ್ಲಿ ಕಿವಿ ಕಾಣಿಸುತ್ತದೆ. ಹೀಗೆ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ.

ಮೊದಲು ಮನುಷ್ಯನದ ಕಿವಿ ಕಾಣಿಸಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಫೋಟೋದಲ್ಲಿ ನಿಮಗೇನಾದರೂ ಮೊದಲು ಮಾನವನ ಕಿವಿ ಕಾಣಿಸಿದರೆ, ನೀವು ತುಂಬಾನೇ ದಯೆ ಮತ್ತು ಸಹಾನುಭೂತಿಯನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ಸೌಮ್ಯ ಸವಭಾವದ ವ್ಯಕ್ತಿಯಾಗಿರುವ ನೀವು ಇತರರ ಭಾವನೆಗಳಿಗೆ ಬಹು ಬೇಗನೆ ಹೊಂದಿಕೊಳ್ಳುತ್ತೀರಿ. ಜೊತೆಗೆ ಬಲವಾದ ನ್ಯಾಯ ಪ್ರಜ್ಞೆಯನ್ನು ಹೊಂದಿರುವ ನೀವು ಯಾವುದೇ ಕಾರಣಕ್ಕೂ ಅನ್ಯಾಯವನ್ನು ಸಹಿಸುವುದಿಲ್ಲ. ಏನಾದರೂ ತಪ್ಪು ಕಂಡರೆ, ಅದರ ಬಗ್ಗೆ ಧೈರ್ಯದಿಂದ ಪ್ರಶ್ನೆ ಮಾಡುವ ಸ್ವಭಾವವನ್ನು ನೀವು ಹೊಂದಿದ್ದೀರಿ. ಇತರರ ಸಹಾಯಕ್ಕೆ ಸದಾ ಸಿದ್ಧರಿರುವ ನಿಮ್ಮನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರು ನಂಬಿಕಸ್ಥ ವ್ಯಕ್ತಿಯಾಗಿ ನೋಡುತ್ತಾರೆ. ಒಟ್ಟಾರೆಯಾಗಿ ಸಹಾನುಭೂತಿ ನಿಮ್ಮ ಬಹು ದೊಡ್ಡ ಶಕ್ತಿ ಅಂತಾನೇ ಹೇಳಬಹುದು.

ಇದನ್ನೂ ಓದಿ
Image
ಅಪ್ಪಿ ತಪ್ಪಿಯೂ ದೇಹದ ಈ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಡಿ
Image
ಜಂಕ್ ಫುಡ್ ತಿನ್ನುವುದರಿಂದ ಈ ಒತ್ತಡಗಳು ಕಾಡಬಹುದು!
Image
ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಪರೀಕ್ಷಿಸಿ
Image
ಓಟಕ್ಕಿಂತ 2 ಕಿಲೋಮೀಟರ್ ನಡೆಯುವುದು ಉತ್ತಮ

ಇದನ್ನೂ ಓದಿ: ನಿಮ್ಮ ಹುಬ್ಬಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ

ಮೊದಲು ಹಾವು ಕಾಣಿಸಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ಹಾವು ಕಾಣಿಸಿದರೆ, ನೀವು ತೀಕ್ಷ್ಣ, ಸ್ವತಂತ್ರ ಮತ್ತು ದಿಟ್ಟ ಮನಸ್ಸು ಹಾಗೂ ಸಾಹಸಮಯ ಮನೋಭಾವವನ್ನು ಹೊಂದಿರುವವರು ಎಂದು ಅರ್ಥ. ಸ್ವತಂತ್ರವಾಗಿ ಬದುಕಲು ಇಷ್ಟ ಪಡುವ ನೀವು ಯಾವುದೇ ಕಾರಣಕ್ಕೂ ಯಾವುದೇ ವಿಷಯದಲ್ಲೂ ಇತರರನ್ನು ಅನುಸರಿಸಲು ಇಷ್ಟಪಡುವುದಿಲ್ಲ. ನೀವು ನಿಮ್ಮಿಷ್ಟದ ಪ್ರಕಾರ ಬದುಕನ್ನು ಸಾಗಿಸಲು ಬಯಸುವವರಾಗಿರುತ್ತೀರಿ. ಹೊಸ ಹೊಸ ಅನುಭವಗಳ ಮೂಲಕವೇ ನೀವು ಯಶಸ್ಸಿನತ್ತ ಸ್ವಂತ ಮಾರ್ಗಗಳನ್ನು ರೂಪಿಸುವವರಾಗಿರುತ್ತೀರಿ. ಒಟ್ಟಾರೆಯಾಗಿ ನೀವು ಸ್ವತಂತ್ರ್ಯವಾಗಿ ಬದಲುಕಲು ಇಷ್ಟಪಡುವವರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!