AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಮುಖದ ಆಕಾರವು ಬಹಿರಂಗಪಡಿಸುತ್ತೆ ನಿಮ್ಮ ಗುಣ ಸ್ವಭಾವ ಹೇಗಿದೆಯೆಂದು

ಕೆಲವರ ಮುಖ ದುಂಡಗಾಗಿದ್ದರೆ, ಕೆಲವರು ಮುಖ ಅಂಡಾಕಾರದಲ್ಲಿರುತ್ತದೆ. ಹೀಗೆ ಮುಖದ ಆಕಾರವು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ. ಈ ಭಿನ್ನ ವಿಭಿನ್ನವಾಗಿರುವ ಮುಖದ ಆಕಾರದಿಂದಲೂ ಸಹ ಒಬ್ಬ ವ್ಯಕ್ತಿಯ ಗುಣ ಸ್ವಭಾವ, ರಹಸ್ಯ ವ್ಯಕ್ತಿತ್ವ ಹೇಗಿದೆಯೆಂಬುದನ್ನು ತಿಳಿಯಬಹುದಂತೆ. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಮ್ಮ ಮುಖದ ಆಕಾರದ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ಹೇಗಿದೆಯೆಂಬುದನ್ನು ತಿಳಿಯೋಣ.

Personality Test: ನಿಮ್ಮ ಮುಖದ ಆಕಾರವು ಬಹಿರಂಗಪಡಿಸುತ್ತೆ ನಿಮ್ಮ ಗುಣ ಸ್ವಭಾವ ಹೇಗಿದೆಯೆಂದು
ವ್ಯಕ್ತಿತ್ವ ಪರೀಕ್ಷೆImage Credit source: okdario.com
ಮಾಲಾಶ್ರೀ ಅಂಚನ್​
|

Updated on: May 14, 2025 | 3:22 PM

Share

ಕಣ್ಣು, ಕಿವಿ, ಮೂಗು, ಕೂದಲು, ಪಾದದ ಆಕಾರ ಸೇರಿದಂತೆ ದೇಹಾಕಾರಾದ (body Shape) ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality) ತಿಳಿಯಬಹುದು ಎಂಬುದನ್ನು ನೀವು ಕೇಳಿರಬಹುದು ಅಲ್ವಾ. ಅಷ್ಟೇ ಯಾಕೆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ ಸಹ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವು ತಿಳಿಯಬಹುದು. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲೂ ಕೂಡಾ ಹರಿದಾಡುತ್ತಿರುತ್ತವೆ. ಇಷ್ಟು ಮಾತ್ರವಲ್ಲದೆ ಮುಖದ ಆಕಾರದಿಂದಲೂ ಒಬ್ಬ ವ್ಯಕ್ತಿಯ ಗುಣ ಸ್ವಭಾವ ಹೇಗಿದೆಯೆಂಬುದನ್ನು ತಿಳಿಯಬಹುದಂತೆ. ಹೌದು ಮುಖದ ಆಕಾರ (Face Shape) ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ. ಈ ಭಿನ್ನ ವಿಭಿನ್ನ ಮುಖದ ಆಕಾರದ ಮೂಲಕವೂ ಸಹ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಪರೀಕ್ಷಿಸಬಹುದು.

ಮುಖದ ಆಕಾರವೂ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ತಿಳಿಸುತ್ತೆ:

ಅಂಡಾಕಾರದ ಮುಖ: ಅಂಡಾಕಾರದ ಮುಖ ಹೊಂದಿರುವ ಜನರು ತಮ್ಮ ಮಾತುಗಳಿಗೆ ಯಾವತ್ತೂ ತಪ್ಪುವುದಿಲ್ಲ. ಎಲ್ಲಿ ಹೇಗೆ ಮಾತನಾಡಬೇಕು ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬುದು ಇವರಿಗೆ ಚೆನ್ನಾಗಿ ತಿಳಿದಿದೆ. ಜನರು ಇವರ ಮಾತನಾಡುವ ಶೈಲಿಯಿಂದಲೇ ಇವರನ್ನು ಗೌರವಿಸುತ್ತಾರೆ. ಹೀಗೆ ಇವರು ತಮ್ಮ ಪರಿಣಾಮಕಾರಿ ಸಂವಹನ ಕೌಶಲ್ಯದಿಂದ ಎಲ್ಲರೊಂದಿಗೂ ಉತ್ತಮ ರೀತಿಯಲ್ಲಿ ಬೆರೆಯುತ್ತಾರೆ. ಅಲ್ಲದೆ ಇವರು ಮೃದು ಸ್ವಭಾವ, ಆತ್ಮವಿಶ್ವಾಸ, ಸೃಜನಶೀಲತೆಯನ್ನು ಹೊಂದಿರುವವರಾಗಿದ್ದಾರೆ. ಇದಲ್ಲದೆ ಅಂಡಾಕಾರದ ಮುಖ ಹೊಂದಿರುವ ಮಹಿಳೆಯರು ತಮ್ಮ ಕುಟುಂಬಕ್ಕಿಂತ ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಯೋಚಿಸುತ್ತಾರೆ.

ಚೌಕಕಾರದ ಮುಖ: ಚೌಕಕಾರದ ಮುಖವನ್ನು ಹೊಂದಿರುವವರು ಪ್ರಾಮಾಣಿಕ ಮತ್ತು ನೇರ ನುಡಿಯ ವ್ಯಕ್ತಿಗಳಾಗಿರುತ್ತಾರೆ. ತುಂಬಾನೇ ಸೃಜನಶೀಲರಾಗಿರುವ ಇವರಿಗೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಚೆನ್ನಾಗಿ ತಿಳಿದೆ. ಇವರು ತಮ್ಮ ವ್ಯಕ್ತಿತ್ವದಿಂದಲೇ ಸಹದ್ಯೋಗಿಗಳು ಮತ್ತು ಸ್ನೇಹಿತರ ನಡುವೆ  ಒಬ್ಬ ನಾಯಕನಂತೆಯೇ ಇರುತ್ತಾರೆ. ಹಠಮಾರಿ, ಕ್ರಿಯಾಶೀಲರಾಗಿರುವ ಇವರು  ತಮ್ಮ ಸಕ್ರಿಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪರಿಸ್ಥಿತಿಗಳನ್ನು ನಿಯಂತ್ರಿಸುತ್ತಾರೆ.

ಇದನ್ನೂ ಓದಿ
Image
ಮುಖೇಶ್‌ ಅಂಬಾನಿಯವರಿಂದ ಕಲಿಯಬೇಕಾದ ಯಶಸ್ಸಿನ ಪಾಠಗಳಿವು
Image
ಮಹಾಭಾರತ ಕಾಲದಲ್ಲಿ ಅಖಂಡ ಭಾರತ ಹೇಗಿತ್ತು ಗೊತ್ತಾ?
Image
ನಿಮ್ಮಿಷ್ಟದ ಬಣ್ಣದ ಲೆಹೆಂಗಾದಿಂದ ತಿಳಿಯಿರಿ ನಿಮ್ಮ ವ್ಯಕ್ತಿತ್ವ
Image
7 ದಿನ ರಾತ್ರಿ ವೈ-ಫೈ ರೂಟರ್ ಮಾಡಿದ್ರೆ ತಲೆನೋವು ಬರುವುದಿಲ್ಲ

ದುಂಡು ಮುಖ: ದುಂಡಗಿನ ಮುಖ ಹೊಂದಿರುವ ಜನರು ದಯಾಳುಗಳಾಗಿರುತ್ತಾರೆ. ಅವರು ಇತರರಿಗೆ ಸಹಾಯ ಮಾಡುವುದು ಮತ್ತು ದಾನ ಮಾಡುವುದರಲ್ಲಿ ಇವರು ಹೆಚ್ಚಿನ ನಂಬಿಕೆ ಇಟ್ಟಿರುತ್ತಾರೆ. ವಿಶಾಲ  ಹೃದಯವನ್ನು ಹೊಂದಿರುವ ಇವರು ಯಾವಾಗಲೂ ಇತರರಿಗೆ ಸಹಾಯ ಮಾಡುವಲ್ಲಿ ಮುಂದಿರುತ್ತಾರೆ. ಅಲ್ಲದೆ ತುಂಬಾನೇ ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಇವರು ತಮ್ಮ ಹಾಸ್ಯ ಮತ್ತು ಸೃಜನಶೀಲ ಗುಣಗಳಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ದಯೆ, ಸಹಿಷ್ಣುತೆ, ಸರಳ ಸ್ವಭಾವದವವರಾದ ಇವರು ತಮ್ಮ ಸಂತೋಷಕ್ಕಿಂತ ಇತರರ ಸಂತೋಷಕ್ಕೆ  ಹೆಚ್ಚು ಆದ್ಯತೆ ನೀಡುತ್ತಾರೆ.

ಇದನ್ನೂ ಓದಿ: ವಧು ಆಯ್ಕೆ ಮಾಡುವ ಲೆಹೆಂಗಾದ ಬಣ್ಣವು ಬಹಿರಂಗ ಪಡಿಸುತ್ತೆ ಆಕೆಯ ವ್ಯಕ್ತಿತ್ವ, ಗುಣ ಸ್ವಭಾವ

ಆಯತಾಕಾರದ ಮುಖ: ಆಯತಾಕಾರದ ಮುಖವನ್ನು ಹೊಂದಿರುವವರು ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಚಿಂತನಶೀಲ ಮನಸ್ಸಿನವರಾಗಿರುತ್ತಾರೆ. ಇವರು ಪ್ರತಿಯೊಂದು ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಇವರು ಬುದ್ಧಿವಂತಿಕೆ, ಕಠಿಣ ಪರಿಶ್ರಮ, ವಿಶ್ವಾಸಾರ್ಹತೆಯ ಗುಣಗಳನ್ನು ಹೊಂದಿದ್ದಾರೆ.

ಹೃದಯಾಕಾರದ ಮುಖ: ಹೃದಯಾಕಾರದ ಮುಖವನ್ನು ಹೊಂದಿರುವ ಜನರು ಬಲವಾದ ಮನಸ್ಥಿತಿಯನ್ನು ಹೊಂದಿದವರಾಗಿರುತ್ತಾರೆ. ಕೆಲವೊಮ್ಮೆ ತುಂಬಾ ಹಠಮಾರಿ ಸ್ವಭಾವವನ್ನು ತೋರಿಸುವ ಇವರು ಪ್ರತಿಯೊಂದು ಕೆಲಸವನ್ನು ನಿರ್ಧಿಷ್ಟ ರೀತಿಯಲ್ಲೇ ಮಾಡುತ್ತಾರೆ. ಅಂದುಕೊಂಡದ್ದನ್ನು ಸಾಧಿಸಲು ಇವರು ಯಾವ ಹಂತಕ್ಕೂ ಬೇಕಾದರೂ ಹೋಗುತ್ತಾರೆ. ಅಲ್ಲದೆ ಇವರು ಜನರ ಮನಸ್ಥಿತಿ ಮತ್ತು ಸನ್ನಿವೇಶಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಸಾಮಾರ್ಥ್ಯವನ್ನು ಕೂಡಾ ಹೊಂದಿದ್ದಾರೆ.

ವಜ್ರಕಾರ ಮುಖ: ವಜ್ರಕಾರದ ಮುಖವನ್ನು ಹೊಂದಿರುವ ಜನರು ತಮ್ಮ ಜೀವನದ ಮೇಲೆ ಹಿಡಿತ ಸಾಧಿಸಲು ಇಷ್ಟಪಡುತ್ತಾರೆ. ಯಾವುದೇ ರೀತಿಯ ಪರಿಸ್ಥಿತಿ, ಅದು ಕೆಟ್ಟದ್ದಾಗಿರಲಿ ಅಥವಾ ಒಳ್ಳೆಯದಾಗಿರಲಿ ಅದನ್ನು ಸಂಪೂರ್ಣ ನಿಯಂತ್ರಿಸಲು ಇಷ್ಟಪಡುತ್ತಾರೆ. ಇವರಲ್ಲಿ ಸೃಜನಶೀಲತೆ ಮತ್ತು ಬುದ್ಧಿವಂತಿಕೆ ಈ ಎರಡೂ ಗುಣಗಳನ್ನು ಹೊಂದಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ