AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಹುಬ್ಬಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ, ದೇಹಾಕಾರದ ಮೂಲಕ ನಿಮ್ಮ ಸ್ವಭಾವ ಹೇಗಿದೆ, ನೀವು ಕೋಪಿಷ್ಟರೇ ಅಥವಾ ಶಾಂತ ಸ್ವಭಾವದವರೇ ಎಂಬುದನ್ನೆಲ್ಲಾ ತಿಳಿದಿರುತ್ತೀರಿ ಅಲ್ವಾ. ಅದೇ ರೀತಿ ನಿಮ್ಮ ಹುಬ್ಬಿನ ಆಕಾರ ಹೇಗಿದೆ ಎಂಬುದರ ಮೇಲೂ ನೀವು ನಿಮ್ಮ ವ್ಯಕ್ತಿತ್ವ ಪರೀಕ್ಷೆ ಮಾಡಬಹುದಾಗಿದೆ. ಹೌದು ನೀವು ದೃಢ ನಿಶ್ಚಯವನ್ನು ಹೊಂದಿರುವವರೇ, ನಾಯಕತ್ವ ಗುಣ ಹೊಂದಿರುವವರೇ ಅಥವಾ ತರ್ಕಬದ್ಧ ವ್ಯಕ್ತಿತ್ವದವರೇ ಎಂಬುದನ್ನು ನಿಮ್ಮ ಹುಬ್ಬಿನ ಆಕಾರದ ಆಧಾರದ ಮೇಲೆ ಪರೀಕ್ಷಿಸಿ.

Personality Test: ನಿಮ್ಮ ಹುಬ್ಬಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ
ವ್ಯಕ್ತಿತ್ವ ಪರೀಕ್ಷೆImage Credit source: okdario.com
ಮಾಲಾಶ್ರೀ ಅಂಚನ್​
|

Updated on: May 15, 2025 | 3:19 PM

Share

ಮುಖದ ಕಳೆಯನ್ನು ಹೆಚ್ಚಿಸುವಲ್ಲಿ ಹುಬ್ಬುಗಳ (Eyebrows) ಪಾತ್ರ ಬಹಳ ಮುಖ್ಯವಾದದ್ದು. ಹುಬ್ಬು ಮುಖದ ಸೌಂದರ್ಯ, ಆಕರ್ಷಣೆಯನ್ನು ಹಿಮ್ಮಡಿಗೊಳಿಸುತ್ತದೆ. ಆದ್ರೆ ಒಬ್ಬೊಬ್ಬರ ಹುಬ್ಬಿನ ಆಕಾರ ಬೇರೆ ಬೇರೆಯಾಗಿರುತ್ತದೆ. ಕೆಲವರ ಹುಬ್ಬು ದಪ್ಪಗಾಗಿದ್ದರೆ, ಕೆಲವರ ಹುಬ್ಬು ತುಂಬಾನೇ ತೆಳ್ಳಗಾಗಿರುತ್ತದೆ. ಈ ಹುಬ್ಬಿನ ಆಕಾರದ ಆಧಾರದ ಮೇಲೂ ನೀವು ನಿಮ್ಮ ನಿಗೂಢ ವ್ಯಕ್ತಿತ್ವ (Personality) ಹೇಗಿದೆಯೆಂದು ಪರೀಕ್ಷಿಸಬಹುದು. ಹೌದು, ಕಣ್ಣಿನ  ಬಣ್ಣ, ಮೂಗಿನ ಆಕಾರ, ಪಾದಗಳ ಆಕಾರ, ಮುಖದ ಆಕಾರದ ಮೂಲಕ ಗುಣ ಸ್ವಭಾವವನ್ನು ಪರೀಕ್ಷಿಸುವಂತೆ ಐಬ್ರೋ ಆಕಾರದ ಮೂಲಕವೂ ನೀವು ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದು. ನೀವು ತರ್ಕ ಬದ್ಧ ವ್ಯಕ್ತಿಯೇ, ಶಾಂತ ಸ್ವಭಾವದವರೇ, ನಾಯಕತ್ವ ಗುಣವನ್ನು ಹೊಂದಿದವರೇ ಎಂಬುದನ್ನು ನಿಮ್ಮ ಹುಬ್ಬಿನ ಆಕಾರದ ಆಧಾರದ ಮೇಲೆ ತಿಳಿಯಿರಿ.

ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಪರೀಕ್ಷಿಸಿ:

ದಪ್ಪದಾದ ಹುಬ್ಬು:

ನೀವು ದಪ್ಪ ಹುಬ್ಬುಗಳನ್ನು ಹೊಂದಿದ್ದರೆ ನೀವು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುವವರು ಮತ್ತು ಸ್ವಾತಂತ್ರ್ಯವನ್ನು ಬಯಸುವವರಾಗಿರುತ್ತೀರಿ. ನೀವು ಬೇರೆಯವರ ಅಭಿಪ್ರಾಯಗಳಿಗೆ ತಲೆ ಕೆಡೆಸಿಕೊಳ್ಳುವುದಿಲ್ಲ, ಬದಲಾಗಿ ನೀವು ನಿಮ್ಮ ತತ್ವವನ್ನು ಮಾತ್ರ ಅನುಸರಿಸುತ್ತೀರಿ. ದೃಢ ನಿಶ್ಚಯವನ್ನು ಹೊಂದಿರುವ ನೀವು ಯಾವಾಗಲೂ ತಾರ್ಕಿಕವಾಗಿ ಯೋಚಿಸುತ್ತೀರಿ ಮತ್ತು ಇತರರ ಭಾವನೆಗಳಿಂದ ಪ್ರಭಾವಿತರಾಗುವುದನ್ನು ತಪ್ಪಿಸುತ್ತೀರಿ. ಹೀಗಾಗಿ ಇತರರೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವುದು ನಿಮಗೆ ಸವಾಲಿನ ಕೆಲಸವಾಗಿರಬಹುದು. ಅದಾಗ್ಯೂ ನಿಮ್ಮ ಆತ್ಮ ವಿಶ್ವಾಸ, ಗುರಿಯ ಸ್ಪಷ್ಟತೆಯ ಸ್ವಭಾವ ಇತತರಿಗೂ ಸ್ಫೂರ್ತಿಯನ್ನು ನೀಡುತ್ತದೆ.

ತೆಳುವಾದ ಹುಬ್ಬು:

ತೆಳ್ಳಗಿನ ಹುಬ್ಬುಗಳನ್ನು ಹೊಂದಿರುವವರು ಆತ್ಮಾವಲೋಕನ ಮಾಡುವವರು ಮತ್ತು ಯಾವಾಗಲೂ ಜಾಗರೂಕರಾಗಿರುವವರಾಗಿರುತ್ತಾರೆ. ಇವರು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಇತರರ ಅಭಿಪ್ರಾಯಗಳನ್ನು ಕೇಳುತ್ತಾರೆ. ಮತ್ತು ನಿರ್ಧಾರ ತೆಗೆದುಕೊಳ್ಳಯವ ಸಮಯದಲ್ಲಿ ಅತಿಯಾಗಿ ಯೋಚಿಸುವ, ಚಿಂತಿಸುವ ಸ್ವಭಾವವನ್ನು ಕೂಡಾ ಹೊಂದಿರುತ್ತಾರೆ. ಜೊತೆಗೆ ಸಹಾನುಭೂತಿಯನ್ನು ಹೊಂದಿರುವ ಇವರು ಒಬ್ಬ ವಿಶ್ವಾಸಾರ್ಹ ಸ್ನೇಹಿತ ಮತ್ತು ವಿಶ್ವಾಸಾರ್ಹ ವ್ಯಕ್ತಿಯಾಗಿರುತ್ತಾರೆ.

ಇದನ್ನೂ ಓದಿ
Image
ಓಟಕ್ಕಿಂತ 2 ಕಿಲೋಮೀಟರ್ ನಡೆಯುವುದು ಉತ್ತಮ
Image
ಸ್ನಾನಗೃಹದಿಂದ ಆಧುನಿಕ ಬಳಕೆವರೆಗೆ, ಟರ್ಕಿಶ್ ಟವೆಲ್‌ ಇಂಟರೆಸ್ಟಿಂಗ್ ಸ್ಟೋರಿ
Image
ಗರ್ಭಿಣಿಯಾಗಿದ್ದರೂ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ದಿಟ್ಟ ಹೆಣ್ಣು
Image
ಮುಖದ ಆಕಾರವೂ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ತಿಳಿಸುತ್ತೆ

ಇದನ್ನೂ ಓದಿ: ನಿಮ್ಮ ಮುಖದ ಆಕಾರವು ಬಹಿರಂಗಪಡಿಸುತ್ತೆ ನಿಮ್ಮ ಗುಣ ಸ್ವಭಾವ ಹೇಗಿದೆಯೆಂದು

ಬಾಗಿದ ಹುಬ್ಬು:

ಬಾಗಿದ ಹುಬ್ಬನ್ನು ಹೊಂದಿರುವವರು ಮಹತ್ವಾಕಾಂಕ್ಷೆ, ಆತ್ಮವಿಶ್ವಾಸ, ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ತುಂಬಾನೇ ಧೈರ್ಯಶಾಲಿಯಾಗಿರುವ ಇವರ ಸ್ವಭಾವವನ್ನು ಕೆಲವರು ಇದು ಇವರ ದುರಹಂಕಾರ ಎಂದು ತಪ್ಪು ತಿಳಿದುಕೊಳ್ಳುವ ಸಾಧ್ಯತೆ ಕೂಡಾ ಇರುತ್ತದೆ.  ಜೊತೆಗೆ ಇವರ ಆತ್ವವಿಶ್ವಾಸ, ನಾಯಕತ್ವದ ಗುಣ, ರೋಮಾಂಚನಕಾರಿ ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸುತ್ತದೆ. ಇನ್ನೊಂದು ಏನೆಂದರೆ ಇವರು ಇತರರಿಗೆ ಬಹುಬೇಗ ಹತ್ತಿರವಾಗುವುದಿಲ್ಲ.

ನೇರ ಹುಬ್ಬು:

ನೇರ ಹುಬ್ಬುಗಳನ್ನು ಹೊಂದಿರುವವರು ತರ್ಕಬದ್ಧ ವ್ಯಕ್ತಿಗಳಾಗಿರುತ್ತಾರೆ. ಇವರುಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ಯಾವುದೇ ಕಾರ್ಯಗಳನ್ನು ಮಾಡುವ ಮೊದಲು ಆ ಬಗ್ಗೆ ತಾರ್ಕಿಕವಾಗಿ ಯೋಚಿಸುತ್ತಾರೆ.  ಇವರು ಅಷ್ಟಾಗಿ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ಸತ್ಯದ ಮೇಲೆ ಮಾತ್ರ ಇವರು ನಂಬಿಕೆಯನ್ನು ಇಟ್ಟಿರುತ್ತಾರೆ. ನೇರ ಸ್ವಭಾವದವರಾದ ಇವರು ಭಾವನೆಗಳಿಗೆ ಅಷ್ಟಾಗಿ ಬೆಲೆ ಕೊಡುವುದಿಲ್ಲ, ಆದರೆ ಇವರು ದಕ್ಷ ಮತ್ತು ಹಠಮಾರಿಗಳಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್