ಓಟಕ್ಕಿಂತ 2 ಕಿಲೋಮೀಟರ್ ನಡೆಯುವುದು ಉತ್ತಮ
ನಮ್ಮ ದೇಹಕ್ಕೆ ಯಾವುದು ಹೆಚ್ಚು ಆರೋಗ್ಯವನ್ನು ನೀಡುತ್ತದೆ. ಅದನ್ನು ಮೊದಲು ಮಾಡಬೇಕು, ನಮ್ಮಲ್ಲಿ ಅನೇಕ ವ್ಯಾಯಾಮಗಳಿದೆ, ಅದರಲ್ಲಿ ನಡೆಯುವುದು ಅಥವಾ ಓಡುವುದು ಪ್ರಮುಖವಾಗಿರುತ್ತದೆ. ಆದರೆ ಇರದಲ್ಲಿ ಯಾವುದು ಉತ್ತಮ. ಓಡುವುದಕ್ಕಿಂತ ನಡೆಯುವುದು ಉತ್ತಮವಾಗಿರುತ್ತದೆ. ಓಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ನಡೆಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ

ದೇಹದ ಆರೋಗ್ಯ ಒಂದಲ್ಲ ಒಂದು ರೀತಿಯ ವ್ಯಾಯಾಮಗಳನ್ನು ಮಾಡುತ್ತೇವೆ. ಆದರೆ ಅದರಲ್ಲಿ ಸರಿಯಾದ ನಿಯಮ ಯಾವುದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಪ್ರತಿದಿನ ಮಾಡುವ ವ್ಯಾಯಾಮದಲ್ಲಿ ಓಡುವುದು ಅಥವಾ ನಡೆಯುವುದು (Walking) ಪ್ರಮುಖವಾಗಿರುತ್ತದೆ. ಆದರೆ ಇದರಲ್ಲಿ ಯಾವುದು ಒಳ್ಳೆಯದು ಎನ್ನುವುದು ತಿಳಿದುಕೊಳ್ಳಬೇಕು. ನಡಿಗೆ ಮತ್ತು ಓಟ ಎರಡೂ ಗಮನಾರ್ಹ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಈ ಎರಡರಲ್ಲೂ ತೀವ್ರತೆ ಮತ್ತು ಪ್ರಭಾವದಲ್ಲಿ ಭಿನ್ನವಾಗಿರುತ್ತದೆ. ಓಟವು ಹೆಚ್ಚು ಸಮಯದವರೆಗೆ ಪರಿಣಾಮ ಬೀರುವ ಅಂಶವಾಗಿದೆ. ಹೆಚ್ಚಿನ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ ಮತ್ತು ನಡಿಗೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೃದಯರಕ್ತನಾಳದ ಫಿಟ್‌ನೆಸ್ ಅನ್ನು ಹೆಚ್ಚಿಸುತ್ತದೆ. ಇದು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ, ಇದರ ಜತೆಗೆ ಕಾಲಿನಲ್ಲಿ ಆಗಿರುವ ಗಾಯಗಳ ಅಪಾಯವನ್ನು ಕೂಡ ಹೆಚ್ಚು ಮಾಡುತ್ತದೆ.
ಆದರೆ ನಡಿಗೆ ಹೆಚ್ಚು ಮೃದುವಾಗಿರುತ್ತದೆ, ಇದು ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಸಹಾಯಕವಾಗಿದೆ ಹಾಗೂ ವ್ಯಾಯಾಮ ಮಾಡಲು ಹೊಸಬರಿಗೆ ಸೂಕ್ತ ಉತ್ತಮ ವ್ಯಾಯಾಮವಾಗಿದೆ. ನಡಿಗೆ ಮತ್ತು ಓಟದ ನಡುವಿನ ಆಯ್ಕೆಯು ವೈಯಕ್ತಿಕ ಆದ್ಯತೆ ಮತ್ತು ಫಿಟ್‌ನೆಸ್ ಗುರಿಯಾಗಿರುತ್ತದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ವಾಕಿಂಗ್ ಅಥವಾ ಓಟದ ಮೂಲಕ ವಾರದ ದೈಹಿಕ ಚಟುವಟಿಕೆ ನಡೆಸಬೇಕು ಎನ್ನುವುದು ಫಿಟ್‌ನೆಸ್ ತಜ್ಞರ ಸಲಹೆಯಾಗಿದೆ. ನಡೆಯುವುದು ಮತ್ತು ಓಡುವುದು ಎರಡೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿವೆ. ಎರಡು ಕೂಡ ಅಧಿಕ ತೂಕ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಇನ್ನೂ ಹೆಚ್ಚಿನ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಪ್ರಯೋಜನ ನೀಡುವ ಅಭ್ಯಾಸ ಯಾವುದು ಎನ್ನುವುದನ್ನು ತಿಳಿದುಕೊಳ್ಳಬೇಕು.
ಇದನ್ನೂ ಓದಿ: ಸ್ನಾನಗೃಹದಿಂದ ಆಧುನಿಕ ಬಳಕೆವರೆಗೆ, ಟರ್ಕಿಶ್ ಟವೆಲ್ ಇಂಟರೆಸ್ಟಿಂಗ್ ಸ್ಟೋರಿ
ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗಳ ಸಲಹೆಗಾರ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಹೇಳುವ ಪ್ರಕಾರ, ನಡೆಯುವುದು ಓಡುವುದಕ್ಕಿಂತ ಉತ್ತಮವೇ ಎಂಬುದನ್ನು ಉತ್ತರಿಸುವುದು ಕಷ್ಟ, ಓಟವು ಸಮಯ-ಪರಿಣಾಮಕಾರಿ, ಅದು ಹೇಗೆಂದರೆ 1 ಕಿಮೀ ಓಟವು 6-8 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, 2 ಕಿಮೀ ನಡಿಗೆಗೆ ಹೋಲಿಸಿದರೆ, ಇದು 20-25 ನಿಮಿಷಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ಓಡುವುದು ನಡೆಯುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ನಡೆಯುವಾಗ ಅಥವಾ ಓಡುವಾಗ ಕಳೆದ ಅದೇ ಸಮಯ ಅಥವಾ ಸಮಾನ ದೂರಕ್ಕೆ ಹೋಲಿಸಿದರೆ ಓಟವು ನಡೆಯುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೃದಯರಕ್ತನಾಳದ ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ. ಟವು ಕೀಲುಗಳು, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಮತ್ತು ಆದ್ದರಿಂದ, ನಡೆಯುವುದಕ್ಕಿಂತ ಗಾಯಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ. ಮೊಣಕಾಲಿನ ಅಸ್ಥಿಸಂಧಿವಾತ, ಬೊಜ್ಜು ಅಥವಾ ತೀವ್ರ ಹೃದಯ ಕಾಯಿಲೆಯಂತಹ ಸಮಸ್ಯೆಗಳನ್ನು ಹೊಂದಿರುವ ಜನರು ಓಡಲು ಸಾಧ್ಯವಾಗದಿರಬಹುದು, ಆದರೆ ಸುಲಭವಾಗಿ ನಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Thu, 15 May 25