AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವದ್ಗೀತೆಯ ಈ ಪಾಠಗಳು ಸಂಬಂಧವನ್ನು ಬಲಪಡಿಸಲು ಸಹಕಾರಿ

ಇಂದಿನ ಕಾಲದಲ್ಲಿ, ಪ್ರೀತಿ ಆಗಿರಲಿ ಅಥವಾ ದಾಂಪತ್ಯ ಜೀವನವೇ ಆಗಿರಲಿ ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟಕರವಾಗಿದೆ. ಸಂಗಾತಿಗಳ ನಡುವೆ ಜಗಳ, ಅಪನಂಬಿಕೆ ಮನಸ್ತಾಪಗಳ ಕಾರಣದಿಂದಾಗಿ ಸಂಬಂಧಗಳು ಮುರಿದು ಬೀಳುತ್ತಿವೆ. ಹೀಗಿರುವಾಗ ಭಗವದ್ಗೀತೆಯ ಈ ಕೆಲವೊಂದು ಉಪದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು. ಹೌದು ಭಗವದ್ಗೀತೆಯಲ್ಲಿ ನಾವು ಯಾವ ರೀತಿ ಯಶಸ್ವಿ ಜೀವನವನ್ನು ನಡೆಸಬೇಕು, ಸವಾಲುಗಳನ್ನು ಯಾವ ರೀತಿ ಎದುರಿಸಬೇಕು ಹೀಗೆ ನಮ್ಮ ಜೀವನಕ್ಕೆ ಬೇಕಾದ ಅನೇಕ ಒಳ್ಳೆಯ ವಿಷಯಗಳಿವೆ. ಅದೇ ರೀತಿ ಭಗವದ್ಗೀತೆಯ ಈ ಕೆಲವು ಉಪದೇಶಗಳನ್ನು ಪಾಲಿಸುವ ಮೂಲಕ ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು.

ಮಾಲಾಶ್ರೀ ಅಂಚನ್​
|

Updated on: May 14, 2025 | 8:13 PM

ನಂಬಿಕೆ: ಸಂಬಂಧಗಳ ಅಡಿಪಾಯವೇ ನಂಬಿಕೆ. ಹೀಗಿರುವಾಗ ಸಂಗಾತಿಗಳ ನಡುವೆ ಪರಸ್ಪರ ನಂಬಿಕೆ ಇಲ್ಲದೆ ಹೋದರೆ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ಒಂದು ಬಂಧ ಬಿಗಿಯಾಗಬೇಕೆಂದರೆ ಅಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯ.

1 / 6
ನಿರ್ಧಾರಗಳಿಗೆ ಗೌರವಕೊಡಿ: ನಿಮ್ಮ ಸಂಗಾತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ಮಾಡಬೇಡಿ. ಬದಲಿಗೆ ನಿಮ್ಮ ಸಂಗಾತಿ ಅವರ ಇಷ್ಟಾನಿಷ್ಟಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಇಬ್ಬರೂ ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ.  ಹೀಗೆ ಒಬ್ಬರಿಗೊಬ್ಬರು ಪ್ರಾಮುಖ್ಯತೆ ನೀಡಿದಾಗ, ಸಂಬಂಧದ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

2 / 6
ಯಾವುದಕ್ಕೂ ಅಡ್ಡಿಪಡಿಸಬೇಡಿ:  ನೀವು ನಿಮ್ಮ ಸಂಗಾತಿಗೆ ಅಡ್ಡಿಪಡಿಸುತ್ತಲೇ ಇದ್ದರೆ ಮತ್ತು ಅವರು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಕೆಲಸಗಳನ್ನು ಮಾಡಲು ಬಿಡದಿದ್ದರೆ, ಅದು ಅವರಿಗೆ ಸಂಬಂಧದಲ್ಲಿ ಉಸಿರುಗಟ್ಟಿದ ಭಾವನೆಯನ್ನು ಮೂಡಿಸುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಅವರ ಆಯ್ಕೆಯ ಪ್ರಕಾರ ಬದುಕಲು ಬಿಡಿ. ಅದು ಮಾಡಬೇಡ, ಈ ಕೆಲಸ ಮಾಡಬೇಡ ಎಂದು ಅವರಿಗೆ ಯಾವತ್ತೂ ಅಡ್ಡಿಪಡಿಸಬೇಡಿ.

3 / 6
ನಿಷ್ಠೆ ತುಂಬಾ ಮುಖ್ಯ: ಸಂಗಾತಿ ಮತ್ತು ನಿಮ್ಮ ಪ್ರೀತಿಗೆ ಯಾವಾಗಲೂ ನಿಷ್ಠರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡುವಂತಹದ್ದು ಅಥವಾ ಸುಳ್ಳು ಹೇಳುವಂತಹದ್ದು ಮಾಡಲು ಹೋಗಬೇಡಿ. ಈ ನಡವಳಿಕೆ ಖಂಡಿತವಾಗಿಯೂ ಸಂಬಂಧವನ್ನು ಹಾಳು ಮಾಡುತ್ತದೆ. ಹಾಗಾಗಿ ನೀವು ಸಂಗಾತಿಯೊಂದಿಗೆ ನಿಷ್ಠೆಯಿಂದ ಇರುವುದು ಬಹಳ ಮುಖ್ಯ.

4 / 6
ಸಂಗಾತಿಯನ್ನು ಗೌರವಿಸಿ: ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯನ್ನು ಕೀಳಾಗಿ ಕಾಣಬೇಡಿ. ಅವರಿಗೆ ಗೌರವ ಕೊಡಿ. ಸಂಗಾತಿಗೆ ಹಾಗೂ ಪ್ರೀತಿ ಗೌರವ ಕೊಟ್ಟರೆ ಮಾತ್ರ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿರುತ್ತದೆ.

5 / 6
ಅಹಂಕಾರ: ಸಂಬಂಧದಲ್ಲಿ ಅಹಂಕಾರದ ಭಾವನೆ ಬಂದರೆ  ಸಂಬಂಧವು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹೌದು ನೀವು ನಾನೇ ಶ್ರೇಷ್ಠ, ನನ್ನಿಂದಲೇ ಎಲ್ಲ  ಎಂಬ ಅಹಂಕಾರದ ಭಾವನೆಯನ್ನು ಇಟ್ಟುಕೊಂಡರೆ ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಆದ್ದರಿಂದ ನಾವಿಬ್ಬರು ಸಮಾನರು ಎಂಬುದನ್ನು ನೆನಪಿಟ್ಟುಕೊಳ್ಳಿ.

6 / 6
Follow us