AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ಗುಣಗಳಿರುವ ಗಂಡನಿದ್ದರೆ ಹೆಂಡತಿಯ ಬಾಳು ಬಂಗಾರವಂತೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಉಪಯುಕ್ತವಾದ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಜೀವನ, ದಾಂಪತ್ಯ, ಗಂಡು ಹೆಣ್ಣಿನ ಸಂಬಂಧದ ಪ್ರತಿಯೊಂದು ಅಂಶದ ಬಗ್ಗೆಯೂ ಆಳವಾಗಿ ವಿವರಿಸಿದ್ದಾರೆ. ಎಂತಹ ಹೆಣ್ಣನ್ನು ಮದುವೆಯಾದರೆ ಉತ್ತಮ, ಎಂತಹ ಹೆಣ್ಣಿನಿಂದ ಗಂಡನ ನೆಮ್ಮದಿ ಹಾಳಾಗುತ್ತದೆ ಹೀಗೆ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಗಂಡನಾದವನಲ್ಲಿ ಎಂತಹ ಗುಣಗಳಿದ್ದರೆ ಹೆಂಡತಿಯಾದವಳ ಜೀವನ ಬಂಗಾರದಂತಿರುತ್ತದೆ ಎಂಬುದನ್ನು ಕೂಡಾ ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ. ಹಾಗಿದ್ದರೆ, ಗಂಡನಲ್ಲಿ ಯಾವ ಗುಣಗಳಿದ್ದರೆ ಹೆಂಡತಿಯ ಜೀವನ ಸುಖಕರವಾಗಿರುತ್ತದೆ ಎಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
|

Updated on: May 19, 2025 | 6:41 PM

Share
ಆದರ್ಶ ಪತಿಗೆ ಯಾವ ಗುಣಗಳು ಇರಬೇಕು, ಗಂಡನಿಗೆ ಈ ಕೆಲವು ವಿಶೇಷ ಗುಣಗಳಿದ್ದರೆ ದಾಂಪತ್ಯ ಜೀವನ ಯಾವಾಗಲೂ ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.  ಚಾಣಕ್ಯ ನೀತಿಯ ಪ್ರಕಾರ ಬುದ್ಧಿವಂತ ಗಂಡನಿದ್ದರೆ ಹೆಂಡತಿಯ ಬಾಳು ಬಂಗಾರದಂತಿರುತ್ತದೆ.  ಹೌದು ಆತನಿಗೆ ಕುಟುಂಬವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಾನೆ.

1 / 7
ತಾಳ್ಮೆ: ಚಾಣಕ್ಯರ ಪ್ರಕಾರ, ಒಬ್ಬ ಆದರ್ಶ ಪತಿ ತನ್ನ ಹೆಂಡತಿಯನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಆಕೆಯೊಂದಿಗೆ ತಾಳ್ಮೆಯಿಂದ ವರ್ತಿಸುತ್ತಾನೆ. ಕೋಪಗೊಂಡಾಗಲೂ ಅವನು ಯೋಚಿಸಿ ಮಾತನಾಡುತ್ತಾನೆ. ಅವನು ತನ್ನ ಹೆಂಡತಿ ಹೇಳುವುದನ್ನು ಗಮನವಿಟ್ಟು ಕೇಳುತ್ತಾನೆ, ಯಾವುದೇ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳುವುದಿಲ್ಲ. ಹೀಗೆ ತಾಳ್ಮೆಯಿಂದ ವರ್ತಿಸುವ ಗಂಡನಿದ್ದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

2 / 7
ಪ್ರಾಮಾಣಿಕತೆ, ವಿಶ್ವಾಸ: ಗಂಡನು ಯಾವಾಗಲೂ ತನ್ನ ಹೆಂಡತಿಗೆ ಪ್ರಾಮಾಣಿಕ ಮತ್ತು ನಿಷ್ಠನಾಗಿರಬೇಕು. ಪ್ರಾಮಾಣಿಕತೆ ಮತ್ತು ನಂಬಿಕೆ ಸಂಬಂಧಗಳನ್ನು ಬಲಪಡಿಸುತ್ತದೆ. ಆದ್ದರಿಂದ ಯಾವುದೇ ವಿಷಯದಲ್ಲಿ ಸುಳ್ಳು ಹೇಳದೆ ಹೆಂಡತಿಯೊಂದಿಗೆ ಪ್ರಾಮಾಣಿಕತೆಯಿಂದ ಇದ್ದರೆ ಸಂಬಂಧ ಸುಖಕರವಾಗಿರುತ್ತದೆ ಎನ್ನುತ್ತಾರೆ ಚಾಣಕ್ಯ.

3 / 7
ಹೆಂಡತಿಗೆ ಗೌರವ ನೀಡುವುದು: ಚಾಣಕ್ಯರ ಪ್ರಕಾರ, ತನ್ನ ಹೆಂಡತಿಯನ್ನು ಗೌರವಿಸುವ ಪತಿಯೇ ನಿಜವಾದ ಜೀವನ ಸಂಗಾತಿ. ಯಾರು ಹೆಂಡತಿಯನ್ನು ಗೇಲಿ ಮಾಡುತ್ತಾನೋ, ಬೈಯುತ್ತಾನೋ ಅಥವಾ ಅವಮಾನ ಮಾಡುತ್ತಾನೋ ಅಂತಹವನೊಂದಿಗೆ ಆತನ ಪತ್ನಿ ಎಂದಿಗೂ ಸಂತೋಷದಿಂದ ಇರಲು ಸಾಧ್ಯವಿಲ್ಲ. ಯಾರು ಹೆಂಡತಿಯನ್ನು ಗೌರವದಿಂದ ನಡೆಸಿಕೊಳ್ಳುತ್ತಾನೋ, ಆತನ ಸಂಸಾರವೂ ಸುಖಮಯವಾಗಿರುತ್ತದೆ.

4 / 7
ಜವಾಬ್ದಾರಿ: ಗಂಡ ಮನೆಯ ಪ್ರತಿಯೊಂದು ವಿಷಯದಲ್ಲೂ ಬೇಜವಾಬ್ದಾರಿತನವನ್ನು ತೋರದೆ ಜವಾಬ್ದಾರಿ ತೆಗೆದುಕೊಳ್ಳುವವನಾಗಿರಬೇಕು.  ಆಗ ಮಾತ್ರ ಕುಟುಂಬವು ಸಂತೋಷವಾಗಿರುತ್ತದೆ. ಚಾಣಕ್ಯರ ಪ್ರಕಾರ ಜವಾಬ್ದಾರಿ ಆದರ್ಶ ಪತಿಯ ಲಕ್ಷಣವಾಗಿದೆ.

5 / 7
ಸಹಾಯ: ಮನೆ ಕೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುವ ಗಂಡನಿದ್ದರೆ, ದಾಂಪತ್ಯ ಜೀವನವು ಸುಖಕರವಾಗಿರುತ್ತದೆ. ಅಂತಹ ಪತಿಯನ್ನು ಪಡೆದ ಪತ್ನಿಯೇ ಅದೃಷ್ಟವಂತೆ ಎನ್ನುತ್ತಾರೆ ಚಾಣಕ್ಯ. ಮನೆ ಕೆಲಸಗಳನ್ನು ಕ್ಷುಲ್ಲಕ ಎಂದು ಪರಿಗಣಿಸದೆ, ಪ್ರತಿ ಕೆಲಸದಲ್ಲೂ ಹೆಂಡತಿಗೆ ಸಹಾಯವಾಗಿ ನಿಲ್ಲುವುದು, ಕಷ್ಟದ ಸಮಯದಲ್ಲಿ ಹೆಂಡತಿಗೆ ಬೆಂಬಲವಾಗಿ ನಿಲ್ಲುವುದು ಆದರ್ಶ ಪತಿಯ ಲಕ್ಷಣವಾಗಿದೆ.

6 / 7
ದಯೆ: ದಯಾಳು ಮನೋಭಾವದ ಪತಿಯನ್ನು ಪಡೆದ ಹೆಂಡತಿ ತುಂಬಾನೇ ಅದೃಷ್ಟವಂತೆ ಎನ್ನುತ್ತಾರೆ ಚಾಣಕ್ಯ. ಏಕೆಂದರೆ ದಯಾಳು ಗಂಡನು ತನ್ನ ಹೆಂಡತಿ ಮತ್ತು ಮಕ್ಕಳ ಭಾವನೆಗಳನ್ನು ಗೌರವಿಸುತ್ತಾನೆ. ಅವರ ಭಾವನೆಗಳಿಗೆ ಬೆಲೆ ಕೊಡುತ್ತಾನೆ. ಗಂಡನ ಈ ಗುಣ ದಾಂಪತ್ಯ ಜೀವನವನ್ನು ಸುಖಕರವಾಗಿ ಸಾಗುವಂತೆ ಮಾಡುತ್ತದೆ.

Husband And Wife (6)

7 / 7
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ

ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!

ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ

ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ

ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್

ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್

ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?

ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ