ಚಿಯಾನ್ ವಿಕ್ರಮ್ ವಿರುದ್ಧ ತನಿಖೆಗೆ ಮುಂದಾದ ಅರಣ್ಯಾಧಿಕಾರಿಗಳು, ನಟ ಮಾಡಿದ್ದೇನು?
Chiyaan Vikram: ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ವಿಕ್ರಂ ಅವರಿಗೆ ಈಗ ಅರಣ್ಯ ಇಲಾಖೆಯಿಂದ ಸಂಕಷ್ಟ ಎದುರಾಗಿದೆ. ಚಿಯಾನ್ ವಿಕ್ರಂ ಅವರು ಇತ್ತೀಚೆಗಷ್ಟೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋನಲ್ಲಿ ಅವರು ಅಪರೂಪದ ಪ್ರಾಣಿಯೊಂದನ್ನು ಹಿಡಿದುಕೊಂಡಿದ್ದರು. ಇದೀಗ ಆ ವಿಡಿಯೋ ಇಂದಲೇ ಚಿಯಾನ್ ವಿಕ್ರಂಗೆ ಸಂಕಷ್ಟ ಶುರುವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸಲು ಮುಂದಾಗಿದೆ.

ಚಿಯಾನ್ ವಿಕ್ರಮ್ (Chiyaan Vikram) ತಮಿಳಿನ ಸ್ಟಾರ್ ನಟ. ‘ಅನ್ನಿಯನ್’, ‘ಸೇತು’ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ವಿಕ್ರಂ ಅವರಿಗೆ ಈಗ ಅರಣ್ಯ ಇಲಾಖೆಯಿಂದ ಸಂಕಷ್ಟ ಎದುರಾಗಿದೆ. ಚಿಯಾನ್ ವಿಕ್ರಂ ಅವರು ಇತ್ತೀಚೆಗಷ್ಟೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋನಲ್ಲಿ ಅವರು ಅಪರೂಪದ ಪ್ರಾಣಿಯೊಂದನ್ನು ಹಿಡಿದುಕೊಂಡಿದ್ದರು. ಇದೀಗ ಆ ವಿಡಿಯೋ ಇಂದಲೇ ಚಿಯಾನ್ ವಿಕ್ರಂಗೆ ಸಂಕಷ್ಟ ಶುರುವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸಲು ಮುಂದಾಗಿದೆ.
ವಿಡಿಯೋನಲ್ಲಿ ಚಿಯಾನ್ ವಿಕ್ರಂ ಅವರು ಅಪರೂಪದ ಕೋತಿಯೊಂದನ್ನು ಹಿಡಿದುಕೊಂಡಿದ್ದರು. ಆ ಕೋಪಿ ಪ್ರಭೇದದ ಪ್ರಾಣಿಯ ಹೆಸರು ‘ಲಾರ್ ಗಿಬ್ಬನ್’. ಭಾರತದಲ್ಲಿ ಇಂತಹ ಅಪರೂಪದ ಪ್ರಾಣಿಯನ್ನು ಸಾಕುವುದು ನಿಯಮಬಾಹಿರ. ಈ ಕುರಿತು ಚಿಯಾನ್ ಅವರ ವಿಡಿಯೋಕ್ಕೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದರು. ಕೂಡಲೇ ಚಿಯಾನ್ ಅವರು ವಿಡಿಯೋ ಡಿಲೀಟ್ ಮಾಡಿದ್ದಾರಾದರೂ, ವಿಡಿಯೋ ತಮಿಳುನಾಡು ಅರಣ್ಯ ಇಲಾಖೆಯ ಗಮನ ಸೆಳೆದಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ತನಿಖೆಗೆ ಮುಂದಾಗಿದೆ.
ಕೆಲ ಮಾಧ್ಯಮ ವರದಿಗಳ ಪ್ರಕಾರ, ಚಿಯಾನ್ ಹಿಡಿದುಕೊಂಡಿದ್ದ ಆ ಪ್ರಾಣಿಯು ಕ್ಯಾವಿನ್ ಕೇರ್ (CavinKare) ಸಂಸ್ಥಾಪಕ ಸಿ.ಕೆ. ರಂಗನಾಥನ್ ಅವರಿಗೆ ಸೇರಿದ್ದು ಎನ್ನಲಾಗಿದೆ. ರಂಗನಾಥ್, ಅವರು ವಿಕ್ರಮ್ ಅವರ ಮಗಳು ಅಕ್ಷಿತಾ ಅವರ ಪತಿಯಾದ ಮನು ರಂಜಿತ್ ಅವರ ತಂದೆಯಾಗಿದ್ದಾರೆ. ಈ ರೀಲ್ ಅನ್ನು ರಂಗನಾಥನ್ ಅವರ ಈಸ್ಟ್ ಕೋಸ್ಟ್ ರೋಡ್‌ನ ಫಾರ್ಮ್‌ಹೌಸ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ವನ್ಯಜೀವಿ ಅಧಿಕಾರಿಗಳು ಈಗ ಈ ಪ್ರಾಣಿಯ ಮಾಲೀಕತ್ವ ಮತ್ತು ಕಾನೂನುಬದ್ಧತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್ಜಿವಿ
ಲಾರ್ ಗಿಬ್ಬನ್ ಎಂಬುದು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ ಕಂಡುಬರುವ ಒಂದು ಕಾಡು ಪ್ರಾಣಿಯಾಗಿದ್ದು, ಈ ರೀತಿಯ ಅಪರೂಪದ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವುದು, ಸಾಕು ಪ್ರಾಣಿಯಾಗಿ ಇರಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ಸಾಕಷ್ಟು ಕಠಿಣವಾದ ಕಟ್ಟಳೆಗಳು ಕಾನೂನಿನಲ್ಲಿವೆ. ಈಗ ಚಿಯಾನ್ ವಿಕ್ರಂ ವಿಡಿಯೋನಲ್ಲಿರುವ ಲಾರ್ ಗಿಬ್ಬನ್ ಪ್ರಾಣಿಯು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ವರ್ಗೀಕೃತವಾಗಿದೆ. ಹಾಗಾಗಿ ಚಿಯಾನ್ ವಿಕ್ರಂ ಅಥವಾ ಆ ಪ್ರಾಣಿಯನ್ನು ಹೊಂದಿರುವ ಯಾರೇ ಆಗಲಿ ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ. ಈ ಹಿಂದೆ ನಟ ದರ್ಶನ್ ಫಾರಂ ಹೌಸ್ನಲ್ಲಿ ಸಹ ಅಪರೂಪದ ಪಕ್ಷಿಗಳು ಪತ್ತೆ ಆಗಿತ್ತು, ಅರಣ್ಯ ಇಲಾಖೆಯು ನೊಟೀಸ್ ನೀಡಿ ಪಕ್ಷಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಲಯಾಳಂ ಸ್ಟಾರ್ ಮೋಹನ್ಲಾಲ್ ಸಹ ಇಂಥಹುದೇ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




