June Calendar 2025: ಜೂನ್ ತಿಂಗಳಲ್ಲಿ ಆಚರಿಸುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ವಿವರ ಇಲ್ಲಿದೆ
ಪ್ರತಿ ದಿನಗಳು ಧಾರ್ಮಿಕ ಹಬ್ಬ ಆಚರಣೆಗಳಿರುವಂತೆ, ಕೆಲವೊಂದು ವಿಶೇಷ ರಾಷ್ಟ್ರೀಯ ಮತ್ತು ಅಮತಾರಾಷ್ಟ್ರೀಯ ದಿನಾಚರಣೆಗಳನ್ನು ಸಹ ಆಚರಿಸಲಾಗುತ್ತದೆ. ಇದೇ ರೀತಿ ವರ್ಷದ ಆರನೇ ತಿಂಗಳಾದ ಜೂನ್ ತಿಂಗಳಿನಲ್ಲಿಯೂ ಕೂಡಾ ಜನ ಜಾಗೃತಿಯನ್ನು ಮೂಡಿಸುವ ಹಲವಾರು ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನದಿಂದ ಹಿಡಿದು ವಿಶ್ವ ಸಾಗರ ದಿನದವರೆಗೆ ಮೇ ತಿಂಗಳಿನಲ್ಲಿ ಯಾವೆಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ನೋಡೋಣ ಬನ್ನಿ.

ಪ್ರತಿಯೊಂದು ತಿಂಗಳಿನಲ್ಲಿಯೂ ಒಂದೊಂದು ಉದ್ದೇಶಗಳನ್ನಿಟ್ಟುಕೊಂಡು, ಜನರಲ್ಲಿ ಜಾಗೃತಿಯನ್ನು ಮೂಡಿಸುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು (National and International Days) ಆಚರಿಸುವಂತೆ ವರ್ಷದ 6 ನೇ ತಿಂಗಳಾದ ಜೂನ್‌ನಲ್ಲಿಯೂ ಹಲವಾರು ವಿಶೇಷ ದಿನಾಚರನೆಗಳನ್ನು ಆಚರಿಸಲಾಗುತ್ತದೆ. ಈ ಪ್ರತಿಯೊಂದು ದಿನಾಚರಣೆಯೂ ಒಂದೊಂದು ಸದುದ್ದೇಶವನ್ನು ಹೊಂದಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಅದರ ಮಹತ್ವವನ್ನು ತಿಳಿಸುವ ಸಲುವಾಗಿ ಈ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನದಿಂದ ಹಿಡಿದು ವಿಶ್ವ ಸಾಗದ ದಿನದ ವರೆಗೆ ಜೂನ್ ತಿಂಗಳಿನಲ್ಲಿ (May Month Event Calendar) ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:
- ಜೂನ್ 1, 2025: ವಿಶ್ವ ಹಾಲು ದಿನ
- ಜೂನ್ 1, 2025: ಜಾಗತಿಕ ಪೋಷಕರ ದಿನ
- ಜೂನ್ 2, 2025: ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನ
- ಜೂನ್ 3, 2025: ವಿಶ್ವ ಬೈಸಿಕಲ್ ದಿನ
- ಜೂನ್ 4, 2025: ಅಂತಾರಾಷ್ಟ್ರೀಯ ಮುಗ್ಧ ಮಕ್ಕಳ ದೌರ್ಜನ್ಯ ವಿರೋಧಿ ದಿನ
- ಜೂನ್ 5, 2025: ವಿಶ್ವ ಪರಿಸರ ದಿನ
- ಜೂನ್ 6, 2025: ರಾಷ್ಟ್ರೀಯ ಡೋನಟ್ ದಿನ
- ಜೂನ್ 7, 2025: ವಿಶ್ವ ಆಹಾರ ಸುರಕ್ಷತಾ ದಿನ
- ಜೂನ್ 7, 2025: ಬಕ್ರೀದ್
- ಜೂನ್ 8, 2025: ವಿಶ್ವ ಮಿದುಳು ಗೆಡ್ಡೆ ದಿನ
- ಜೂನ್ 8, 2025: ವಿಶ್ವ ಸಾಗರ ದಿನ
- ಜೂನ್ 8, 2025: ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನ
- ಜೂನ್ 12, 2025: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ
- ಜೂನ್ 12, 2025: ರಾಷ್ಟ್ರೀಯ ಕೆಂಪು ಗುಲಾಬಿ ದಿನ
- ಜೂನ್ 13, 2025: ವಿಶ್ವ ಅಲ್ಬಿನಿಸಂ ದಿನ
- ಜೂನ್ 14, 2025: ವಿಶ್ವ ರಕ್ತದಾನಿಗಳ ದಿನ
- ಜೂನ್ 15, 2025: ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ
- ಜೂನ್ 15, 2025: ವಿಶ್ವ ತಂದೆಯರ ದಿನ
- ಜೂನ್ 15, 2025: ವಿಶ್ವ ಗಾಳಿ ದಿನ
- ಜೂನ್ 18, 2025: ಅಂತಾರಾಷ್ಟ್ರೀಯ ಪಿಕ್ನಿಕ್ ದಿನ
- ಜೂನ್ 19, 2025: ವಿಶ್ವ ಕ್ಷೌರಿಕ ದಿನ
- ಜೂನ್ 20, 2025: ವಿಶ್ವ ನಿರಾಶ್ರಿತರ ದಿನ
- ಜೂನ್ 21, 2025: ಅಂತಾರಾಷ್ಟ್ರೀಯ ಯೋಗ ದಿನ
- ಜೂನ್ 21, 2025: ವಿಶ್ವ ಸಂಗೀತ ದಿನ
- ಜೂನ್ 23, 2025: ಅಂತಾರಾಷ್ಟ್ರೀ ಒಲಿಂಪಿಕ್ ದಿನ
- ಜೂನ್ 23, 2025: ಅಂತಾರಾಷ್ಟ್ರೀಯ ವಿಧವೆಯರ ದಿನ
- ಜೂನ್ 26, 2025: ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ
- ಜೂನ್ 29, 2025: ರಾಷ್ಟ್ರೀಯ ಅಂಕಿಅಂಶ ದಿನ
- ಜೂನ್ 30, 2025: ವಿಶ್ವ ಕ್ಷುದ್ರಗ್ರಹ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




