Personality Test : ನಿಮ್ಮ ದವಡೆ ರೇಖೆ ಹೇಗಿದೆ? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಸಾಮಾನ್ಯವಾಗಿ ನಡೆಯುವ ಶೈಲಿಯಿಂದ, ಮೂಗು, ಮುಖ, ಕೈ ಬೆರಳುಗಳ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಗೆಂಬುದನ್ನು ಅರಿತುಕೊಳ್ಳಬಹುದು. ಅದಲ್ಲದೆ, ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಪಟ್ಟ ಫೋಟೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಹರಿದಾಡುತ್ತಿರುತ್ತವೆ. ಆದರೆ ಇದೀಗ ನಿಮ್ಮ ಜ್ವಲೈನ್ ಅಥವಾ ದವಡೆಯ ರೇಖೆಯು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ನೋಡಲು ಹೇಗೆ ಒಬ್ಬರು ಇನ್ನೊಬ್ಬರಂತೆ ಇರುವುದಿಲ್ಲವೋ, ಅದೇ ರೀತಿ ವ್ಯಕ್ತಿತ್ವ (Personality) ದಲ್ಲಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಸಾಕಷ್ಟು ಭಿನ್ನತೆಗಳಿರುತ್ತದೆ. ಆದರೆ ಒಬ್ಬ ವ್ಯಕ್ತಿ ಹೇಗೆ ಎಂದು ತಿಳಿಯಲು ಅವರ ಜೊತೆಗೆ ಬೆರೆಯಬೇಕಾಗುತ್ತದೆ. ಇಲ್ಲದಿದ್ದರೆ ವ್ಯಕ್ತಿತ್ವ ಪರೀಕ್ಷೆಗಳು ಗುಣಸ್ವಭಾವ ತಿಳಿಯಲು ಸಹಾಯಕವಾಗಿದೆ. ಅದಲ್ಲದೇ ಈ ದೇಹದ ಅಂಗಗಳ ಆಕಾರವು ಕೂಡ ವ್ಯಕ್ತಿತ್ವದ ಕುರಿತು ಬಹಳಷ್ಟು ಹೇಳುತ್ತವೆ. ಹೌದು, ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ಭಂಗಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರವು ವ್ಯಕ್ತಿತ್ವ ಸ್ವಭಾವ ತಿಳಿಯಲು ಸಹಕಾರಿಯಾಗಿದೆ. ಅಷ್ಟೇ ಯಾಕೆ ನಿಮ್ಮ ಜ್ವಲೈನ್ ಅಥವಾ ದವಡೆ ರೇಖೆ (Jawline) ಯಿಂದಲು ನಿಮ್ಮ ನಿಗೂಢ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು.
- ತೀಕ್ಷ್ಣವಾದ ದವಡೆ ರೇಖೆ ಹೊಂದಿರುವವರ ವ್ಯಕ್ತಿತ್ವ : ಬಲವಾದ ದವಡೆ ರೇಖೆ ಅಥವಾ ಜ್ವಲೈನ್ ಹೊಂದಿರುವವರು ಮಹತ್ವಾಕಾಂಕ್ಷೆಯುಳ್ಳವರು. ಅತಿಯಾದ ಆತ್ಮವಿಶ್ವಾಸ, ದೃಢ ನಿಶ್ಚಯ ಹೊಂದಿರುತ್ತಾರೆ. ಸ್ವಾವಲಂಬಿ ಜೀವನ ನಡೆಸುವ ಮೂಲಕ ಯಾರ ಮೇಲು ಹೆಚ್ಚು ಅವಲಂಬಿತರಾಗಿರುವುದಿಲ್ಲ. ಈ ವ್ಯಕ್ತಿಗಳಲ್ಲಿ ನಾಯಕತ್ವ ಗುಣವನ್ನು ಕಾಣಬಹುದು. ಸವಾಲುಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಆದರೆ ತಮ್ಮ ಜೀವನದ ಗುರಿ ಸಾಧಿಸಲು ಕಷ್ಟ ಪಟ್ಟು ದುಡಿಯುತ್ತಾರೆ. ಹೀಗಾಗಿ ಇವರು ಶ್ರಮಜೀವಿಗಳು. ಅದಲ್ಲದೇ ಜೀವನದಲ್ಲಿ ಮುಂದೆ ಏನು ಎಂದು ಯೋಚಿಸುತ್ತಾರೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಹಾಗೂ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರಲ್ಲಿ ಇವರು ನಿಪುಣರಾಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಗುಣ ಇವರಲ್ಲಿ ಇರುತ್ತದೆ..
ಇದನ್ನೂ ಓದಿ : ಸಾಮಾನ್ಯ ನಡಿಗೆ ಇಂದೇ ನಿಲ್ಲಿಸಿ, ಜಪಾನೀಸ್ ನಡಿಗೆ ಪ್ರಾರಂಭಿಸಿ, ಇಲ್ಲಿಂದಲೇ ನಿಮ್ಮ ಆರೋಗ್ಯ ವೃದ್ಧಿ
- ದುರ್ಬಲ ದವಡೆ ರೇಖೆ ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವ ಹೀಗಿರುತ್ತೆ : ಈ ಜನರಲ್ಲಿ ದವಡೆ ರೇಖೆಯೂ ಕಡಿಮೆಯಿರುವುದನ್ನು ಕಾಣಬಹುದು. ಈ ವ್ಯಕ್ತಿಗಳು ಸೌಮ್ಯ ಸ್ವಭಾವದವರಾಗಿದ್ದು, ದಯೆ, ಸಹಾನುಭೂತಿ ಗುಣವಿರುತ್ತದೆ. ಇವರು ತಮಗಿಂತ ಬೇರೆಯವರ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಬೇರೆಯವರ ಅಭಿಪ್ರಾಯ ಹಾಗೂ ಸಲಹೆಗಳನ್ನು ಕೇಳುತ್ತಾರೆ, ಜತೆಗೆ ಅನುಸರಿಸುತ್ತಾರೆ. ತನ್ನ ಸುತ್ತಮುತ್ತಲಿನವರ ಜೊತೆಗೆ ಹೆಚ್ಚು ಹೊಂದಿಕೊಂಡು ಹೋಗುವುದರೊಂದಿಗೆ ಉತ್ತಮ ಕೇಳುಗರಾಗಿರುತ್ತಾರೆ. ಕೆಲವೊಮ್ಮೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲಕ್ಕೆ ಈಡಾಗುತ್ತಾರೆ. ನಾಯಕತ್ವ ಗುಣ ಕಡಿಮೆಯಿದ್ದು, ಆದರೆ ಇತರರಿಗೆ ಹೆಚ್ಚು ಬೆಂಬಲ ನೀಡುತ್ತಾರೆ. ಜೀವನದಲ್ಲಿ ಯಾವುದೇ ಸಮಸ್ಯೆ ಬರದಂತೆ, ವಿವೇಚಿಸಿ ಮುಂದಿನ ಹೆಜ್ಜೆ ಇಡುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








