ಸಾಮಾನ್ಯ ನಡಿಗೆ ಇಂದೇ ನಿಲ್ಲಿಸಿ, ಜಪಾನೀಸ್ ನಡಿಗೆ ಪ್ರಾರಂಭಿಸಿ, ಇಲ್ಲಿಂದಲೇ ನಿಮ್ಮ ಆರೋಗ್ಯ ವೃದ್ಧಿ
ನಡಿಗೆಯಲ್ಲಿ ಹಲವು ವಿಧಗಳು ಇದೆ. ಆದರೆ ಅದರಿಂದ ಬೇರೆ ಬೇರೆ ರೀತಿಯ ಆರೋಗ್ಯ ಪ್ರಯೋಜನಗಳು ಇದೆ. ಇದರ ಜತೆಗೆ ಒಂದು ವಿಶೇಷ ನಡಿಗೆ ಇದೆ. ಅದು ಜಪಾನೀಸ್ ನಡಿಗೆ, ಈ ನಡಿಗೆಯಿಂದ ಬಗ್ಗೆ ಡಾ. ಸೇಥಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಜಪಾನೀಸ್ ನಡಿಗೆ ಎಂಬುದನ್ನು ಜಪಾನಿನ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಹೊಸ ರೀತಿಯ ನಡಿಗೆ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಧ್ಯಂತರ ನಡಿಗೆ ಎಂದು ಹೆಸರಿಸಲಾಗಿದೆ.

ಈಗಿನ ಕಾಲದಲ್ಲಿ ವೃದ್ದರಿಗೆ ಮಾತ್ರವಲ್ಲ ಯುವ ಸಮೂಹಕ್ಕೂ ಕೂಡ ಈ ನಡಿಗೆ ಎಂಬುದು ಅನಿವಾರ್ಯವಾಗಿದೆ. ಏಕೆಂದರೆ ದಿನದಿಂದ ದಿನಕ್ಕೆ ವಾತಾವರಣದ ಬದಲಾವಣೆ, ಜೀವನಶೈಲಿ, ಹಾಗೂ ಒತ್ತಡದ ಕೆಲಸ ಇವುಗಳನ್ನು ದೇಹದಲ್ಲಿರುವ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತಿದೆ, ಇದನ್ನು ತಪ್ಪಿಸಲು ನಾವು ನಡಿಗೆ ವ್ಯಾಯಾಮದಂತಹ ಚಟುವಟಿಕೆಯನ್ನು ಮಾಡುತ್ತದೆ. ಆದರೆ ನಡಿಗೆಗಳು ಹೇಗಿರಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರಬಾರದು. ಈ ನಡೆಯುದಾದರೆ ಜಪನ್ (Japanese fitness ) ಜನರು ನಡೆಯುವಂತೆ ನಡೆಯಿರಿ. ಹೌದು ಈ ಬಗ್ಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೇಥಿ ನಡಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳನ್ನು ಇನ್ಸ್ಟಾದಲ್ಲಿ ಹೇಳಿದ್ದಾರೆ. ಸಾಮಾನ್ಯ ನಡಿಗೆಯೂ ಸದೃಢವಾಗಿರಿಸುತ್ತದೆ ಮತ್ತು ರಕ್ತದೊತ್ತಡದಂತಹ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದರ ಜತೆಗೆ ಜೀರ್ಣಕ್ರಿಯೆ, ರಕ್ತದ ಹರಿವನ್ನು ಸುಧಾರಿಸುತ್ತದೆ. ಆದರೆ ಜಪಾನೀಸ್ ವಾಕಿಂಗ್ನಿಂದ ಅನೇಕ ಪ್ರಯೋಜನಗಳು ಇದೆ. ಅದು ಹೇಗೆ ಎಂಬ ಬಗ್ಗೆ ಡಾ. ಸೇಥಿ ವಿವರಿಸಿದ್ದಾರೆ.
ಜಪಾನೀಸ್ ವಾಕಿಂಗ್ ತಂತ್ರ:
ಜಪಾನಿನ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಹೊಸ ರೀತಿಯ ನಡಿಗೆ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಧ್ಯಂತರ ನಡಿಗೆ ಎಂದು ಹೆಸರಿಸಲಾಗಿದೆ. ಈ ನಡಿಗೆಯ ಪ್ರಕಾರ ಮೊದಲ ಮೂರು ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕು. ನಂತರದ ಮೂರು ನಿಮಿಷಗಳ ಕಾಲ ತುಂಬಾ ವೇಗವಾಗಿ ನಡೆಯಬೇಕು. ಪ್ರತಿದಿನ 30 ನಿಮಿಷಗಳ ಕಾಲ ಹೀಗೆ ಮಾಡಬೇಕು. ನೀವು ಪ್ರತಿದಿನ ಅರ್ಧ ಗಂಟೆ ಮಧ್ಯಂತರ ನಡಿಗೆ ಮಾಡಿದರೆ ಆರೋಗ್ಯದಲ್ಲಿ ಒಂದು ಮ್ಯಾಜಿಕ್ ಆಗುವುದು ಖಂಡಿತ. ಈ ರೀತಿಯ ನಡಿಗೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸದೃಢವಾಗಿರಿಸುತ್ತದೆ ಎಂದು ಡಾ. ಸೇಥಿ ಹೇಳುತ್ತಾರೆ.
ಇಲ್ಲಿದೆ ವಿಡಿಯೋ ನೋಡಿ:
View this post on Instagram
ಮಧ್ಯಂತರ ನಡಿಗೆ:
ಮಧ್ಯಂತರ ನಡಿಗೆ ಮಾಡಲು, ಮೊದಲನೆಯದಾಗಿ ನೀವು 3 ರಿಂದ 5 ನಿಮಿಷಗಳ ಕಾಲ ಆರಾಮವಾಗಿ ನಡೆಯಬೇಕು. ಸ್ವಲ್ಪ ಹೊತ್ತಿನ ನಂತರ ಚುರುಕಾದ ನಡಿಗೆಯನ್ನು ಮಾಡಬೇಕು, ಅಂದರೆ ತುಂಬಾ ವೇಗವಾಗಿ ನಡೆಯಬೇಕು. ಮತ್ತೆ 3 ರಿಂದ 5 ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕು. ಇದನ್ನು ಎರಡರಿಂದ ನಾಲ್ಕು ಬಾರಿ ಮಾಡಬೇಕು. ಕೊನೆಗೆ 3-5 ನಿಮಿಷಗಳ ಕಾಲ ನಿಧಾನವಾಗಿ ನಡೆಯುವ ಮೂಲಕ ವಿರಾಮ ತೆಗೆದುಕೊಳ್ಳಬೇಕು. ನೀವು ಆರೋಗ್ಯವಾಗಿರಲು ಮತ್ತು ನಿಮ್ಮ ಮನಸ್ಸು ಸಹ ಉತ್ತಮವಾಗಿರಲು ಇದನ್ನು ಪ್ರತಿದಿನ ಮಾಡಬೇಕು.
ಈ ನಡಿಗೆ ನಡಿಯುವಾಗ ಈ ವಸ್ತುಗಳು ನಿಮ್ಮಲ್ಲಿ ಇರಬೇಕು:
ಪ್ರಮುಖವಾಗಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನೀರು ಕುಡಿದರೆ, ನಿಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ಇದಲ್ಲದೆ, ನೇರ ಮತ್ತು ಸಮತಟ್ಟಾದ ರಸ್ತೆಯ ಜತೆಗೆ ಏರಿಳಿತ ಪ್ರದೇಶದಲ್ಲಿ ನಡೆಯುವುದು ಇನ್ನು ಉತ್ತಮ. ಜತೆಗೆ ಆಹಾರಕ್ರಮದ ಬಗ್ಗೆಯೂ ಗಮನ ಇರಬೇಕು. ಇದು ಬೊಜ್ಜು ಕಡಿಮೆ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಊದಿಕೊಳ್ಳುತ್ತಾ? ನಟಿ ಮಲೈಕಾ ಅರೋರಾ ಹೇಳುವ ಈ ವಿಧಾನ ಮಾಡಿ
ಮಧ್ಯಂತರ ನಡಿಗೆಯ ಪ್ರಯೋಜನ
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ತೂಕ ಇಳಿಕೆ
ಸ್ನಾಯುಗಳನ್ನು ಬಲಪಡಿಸುವುದು
ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು
ತ್ರಾಣ ಮತ್ತು ಶಕ್ತಿಯಲ್ಲಿ ಹೆಚ್ಚಳ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Fri, 30 May 25








