AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ, ಇದು ಕನ್ನಡಿಗರ ಹೆಮ್ಮೆ

ಭಾರತ - ಪಾಕ್​​​ ಬಿಕ್ಕಟ್ಟಿನ ನಂತರ ರಾಜಸ್ಥಾನದ ಜೈಪುರನ ಸಿಹಿತಿಂಡಿ ಅಂಗಡಿಯಲ್ಲಿ ಕೆಲವೊಂದು ಭಾರತೀಯ ತಿಂಡಿಗಳ ಹೆಸರನ್ನು ಬದಲಾಯಿಸಿದ್ದಾರೆ. ಪಾಕ್​​ ಎಂಬ ಹೆಸರಿರುವ ತಿಂಡಿಗಳ ಹೆಸರನ್ನು ಬದಲಾಯಿಸಲಾಗಿದೆ. ಪಾಕ್​​ ಬದಲು ಶ್ರೀ ಎಂದು ಮರುನಾಮಕರಣ ಮಾಡಿದ್ದಾರೆ. ಅದರಲ್ಲಿ ಮೈಸೂರು ಪಾಕ್​​ ಕೂಡ ಒಂದು. ಈ ಹೆಸರು ಬದಲಾವಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇದು ಕನ್ನಡಿಗರ ಹೆಮ್ಮೆ ಹಾಗೂ ರಾಜಮನೆತನದ ಗೌರವ ಎಂದು ರಾಜ ಕಾಲದಿಂದ ರಾಜಮನೆತನದಲ್ಲಿ ಅಡುಗೆ ಮಾಡಿಕೊಂಡು ಬರುತ್ತಿದ್ದ ವಂಶಸ್ಥರು ಹೇಳಿದ್ದಾರೆ.

ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ, ಇದು ಕನ್ನಡಿಗರ ಹೆಮ್ಮೆ
ಮೈಸೂರು ಪಾಕ್
ಮಾಲಾಶ್ರೀ ಅಂಚನ್​
| Edited By: |

Updated on:May 26, 2025 | 12:36 PM

Share

ಕೆಲವೊಂದು ಹೆಸರುಗಳು ಶ್ವಾಶತ ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ.ಅದರಲ್ಲೂ ಈ ತಿಂಡಿ ವಿಚಾರದಲ್ಲಿ ಇದನ್ನು ಮಾಡಲು ಸಾಧ್ಯವೇ ಇಲ್ಲ. ಹೌದು ಇತ್ತೀಚೆಗ ಜಮ್ಮು-ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ದಾಳಿಯ ನಂತರ ಭಾರತ ಸೇನೆ ಆಪರೇಷನ್​​ ಸಿಂಧೂರ್​​ ಮೂಲಕ ಪಾಕ್​​ಗೆ ತಕ್ಕ ಉತ್ತರ ನೀಡಿತ್ತು. ಇದಕ್ಕೆ ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಗಳು ಪ್ರಸಿದ್ಧ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ. ಬೇಕರಿಯೊಂದರಲ್ಲಿ ಎಲ್ಲಾ ಸಿಹಿತಿಂಡಿಗಳ ಹೆಸರುಗಳಿಂದ ‘ಪಾಕ್’ ಪದವನ್ನು ತೆಗೆದುಹಾಕಿ, ಅದಕ್ಕೆ ಶ್ರೀ ಎಂದು ಹೆಸರಿಸಲಾಗಿತ್ತು. ಅದರಲ್ಲೊಂದು ಮೈಸೂರಿನ ಮೈಸೂರು ಪಾಕ್. ಮೈಸೂರು ಪಾಕ್​​ನ್ನು ‘ಮೈಸೂರು ಶ್ರೀ’ ( mysore shree) ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಈ ಬದಲಾವಣೆ ಭಾರೀ ಅಕ್ರೋಶ ಕಾರಣವಾಗಿದೆ. ಮೈಸೂರು ಪಾಕ್ (mysore pak)​​​ ಎಂಬ ಹೆಸರನ್ನು ಮೈಸೂರಿನ ರಾಜ 4ನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಈ ಹೆಸರನ್ನು ಇಡಲಾಗಿತ್ತು. ಇದೀಗ ಈ ಹೆಸರನ್ನು ಬದಲಾವಣೆ ಮಾಡಿರುವ ಬಗ್ಗೆ ರಾಜ ಕಾಲದಿಂದಲ್ಲೂ ರಾಜಮನೆತನದಲ್ಲಿ ಅಡುಗೆ ಮಾಡಿಕೊಂಡು ಬರುತ್ತಿದ್ದ ವಂಶಸ್ಥರಾದ ಎಸ್. ನಟರಾಜ್ ಅವರು ಮೈಸೂರ್​​​ ಪಾಕ್ ಹೆಸರನ್ನು ಬದಲಾವಣೆ ಮಾಡಬೇಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಎನ್​​ಡಿ ಟಿವಿ ವರದಿ ಮಾಡಿದೆ.

ನಮ್ಮ ಪೂರ್ವಜರು ನೀಡಿದ ಈ ಆವಿಷ್ಕಾರಕ್ಕೆ ಬೇರೆ ಯಾವುದೇ ಹೆಸರಿಲ್ಲ, ಪ್ರತಿಯೊಂದು ಸ್ಮಾರಕ ಅಥವಾ ಸಂಪ್ರದಾಯವು ತನ್ನದೇ ಆದ ಹೆಸರನ್ನು ಹೊಂದಿರುವಂತೆಯೇ, ಮೈಸೂರು ಪಾಕ್ ಕೂಡ ಹೊಂದಿದೆ. ಅದನ್ನು ಬದಲಾಯಿಸಬಾರದು ಎಂದು ಹೇಳಿದ್ದಾರೆ. ಇನ್ನು ಈ ಮೈಸೂರು ಪಾಕ್​​ ಎಂಬ ಹೆಸರು ಹೇಗೆ ಬಂದಿದೆ ಎಂಬುದನ್ನು ವಿವರಿಸಿದ್ದಾರೆ. ಕನ್ನಡದಲ್ಲಿ ಪಾಕ ಎಂಬ ಪದವು ಸಕ್ಕರೆಯ ಸಿಹಿಯಾದ ಪಾಕವನ್ನು ಸೂಚಿಸುತ್ತದೆ. ಇದನ್ನು ಮೈಸೂರಿನಲ್ಲಿ ತಯಾರಿಸಲಾಗಿರುವುದರಿಂದ, ಇದನ್ನು ಮೈಸೂರು ಪಾಕ್ ಎಂದು ಕರೆಯಲಾಯಿತು. ಹಾಗಾಗಿ ಇದನ್ನು ಬೇರೆ ಹೆಸರಿನಿಂದ ಕರೆಯುವಂತಿಲ್ಲ ಎಂದು ಹೇಳಿದ್ದಾರೆ. ಮೂಲ ಹೆಸರನ್ನು ಉಳಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಿದ್ದಾರೆ.

ನೀವು ಜಗತ್ತಿನ ಎಲ್ಲೇ ಹೋದರೂ, ಮೈಸೂರು ಪಾಕ್​​ನ್ನು ಮೈಸೂರ್​​​ ಪಾಕ್​​​ ಎಂದೇ ಗುರುತಿಸುತ್ತಾರೆಯೇ ಹೊರತು. ಇದನ್ನು ಬೇರೆ ಹೆಸರಿನಿಂದ ಗುರುತಿಸುವುದಿಲ್ಲ. ಹಾಗಾಗಿ ಇದರ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಪ್ರಸಿದ್ಧ ಗುರು ಸ್ವೀಟ್ಸ್ ಕುಟುಂಬವನ್ನು ಇಂದಿಗೂ ಅಲ್ಲಿನ ಜನ ಗೌರವದಿಂದ ಕಾಣುತ್ತಾರೆ. ಏಕೆಂದರೆ ಮೈಸೂರು ಪಾಕ್​​​ನ್ನು ನೀಡಿದ ಅಂಗಡಿ ಅದು, ಈಗ ಐದನೇ ತಲೆಮಾರಿನಲ್ಲಿರುವ ಈ ಅಂಗಡಿಯನ್ನು ಮೂಲತಃ ನಟರಾಜ್ ಅವರ ಮುತ್ತಜ್ಜ ನಡೆಸುತ್ತಿದ್ದರು. ಅವರು ಮೊದಲ ಬಾರಿ ರಾಜಮನೆತಕ್ಕೆ ಈ ಮೈಸೂರು ಪಾಕ್​​ನ್ನು ನೀಡುತ್ತಿದ್ದರು. ಇದು ರಾಜಮನೆತನಕ್ಕೆ ಸೀಮಿತವಾಗಬಾರದು ಎಂದು ರಾಜರು ಇಡೀ ಸಮಾಜಕ್ಕೆ ಪರಿಚಯಿಸಿ ಎಂದು ಹೇಳಿದರು.

ಇದನ್ನೂ ಓದಿ
Image
ಟೈಮ್‌ ಟ್ರಾವೆಲಿಂಗ್‌ ಮಾಡಿ ಮಹಾತ್ಮರನ್ನು ಭೇಟಿಯಾದ ಮೋದಿಜಿ-ಯೋಗಿಜಿ
Image
ಫ್ರೀಯಾಗಿ ಕೊಟ್ಟ ಚಟ್ನಿಯ ಹೆಸ್ರನ್ನೂ ಬಿಲ್‌ನಲ್ಲಿ ನಮೂದಿಸಿದ ಹೋಟೆಲ್
Image
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
Image
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ?

ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಗಲಾಟೆಯಿಂದ ಮೈಸೂರು ಪಾಕ್ ಹೆಸರೂ ಬದಲು!

ಇನ್ನು ಈ ಕುಟುಂಬದ ನಾಲ್ಕನೇ ತಲೆಮಾರಿನ ಸದಸ್ಯ ಸುಮೇಘ್ ಎಸ್ ಅವರ ಹೇಳುವ ಪ್ರಕಾರ, ಮೈಸೂರು ಪಾಕ್ ಕೇವಲ ಸಿಹಿ ತಿನಿಸು ಮಾತ್ರ ಅಲ್ಲ. ಇದು ಮೈಸೂರು ಮತ್ತು ಕರ್ನಾಟಕಕ್ಕೆ ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ.ಮೈಸೂರು ಪಾಕ್ ಮೈಸೂರು, ಕರ್ನಾಟಕ ಮತ್ತು ಕನ್ನಡಿಗರ ಹೆಮ್ಮೆ. ಇದು ನಮ್ಮ ಜನರ ಮಾಧುರ್ಯ ಮತ್ತು ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪೂರ್ವಜರು ಸೃಷ್ಟಿಸಿದ ಸಿಹಿ ತಿಂಡಿ – ಮೈಸೂರು ಪಾಕ್ – ಈಗ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಅನಗತ್ಯ ವಿವಾದಗಳಿಗೆ ಅದನ್ನು ಎಳೆಯಬೇಡಿ ಎಂದು ಹೇಳಿದ್ದಾರೆ ಎಂದು ಎನ್​​​ಡಿ ಟಿವಿ ವರದಿ ಮಾಡಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Mon, 26 May 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ