AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್‌-3 ಮೆಟ್ರೋ ಮಾರ್ಗದಲ್ಲಿ 37ರ ಬದಲು 11 ಕಿ.ಮೀ. ಮಾತ್ರ ಡಬಲ್‌ ಡೆಕ್ಕರ್‌ ಫ್ಲೈಓವರ್‌?

ನಮ್ಮ ಮೆಟ್ರೋ ಫೇಸ್‌-3 (ಆರೆಂಜ್ ಲೈನ್) ಯೋಜನೆಯಡಿ ಮೂಲ ಯೋಜನೆಯಂತೆ ನಿರ್ಮಿಸಲು ಉದ್ದೇಶಿಸಲಾಗಿದ್ದ 37 ಕಿ.ಮೀ ಉದ್ದದ ಎಂಡ್-ಟು-ಎಂಡ್ ಡಬಲ್ ಡೆಕ್ಕರ್ ಫ್ಲೈಓವರ್‌ ಯೋಜನೆಯನ್ನು ಕೈಬಿಟ್ಟು, ಸಂಚಾರ ದಟ್ಟಣೆ ಅಧಿಕವಾಗಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಮಾತ್ರ 11 ಕಿ.ಮೀ.ಗೆ ಸೀಮಿತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಚಿಂತನೆ ನಡೆಸಿದೆ ಎನ್ನಲಾಗಿದೆ.

ಫೇಸ್‌-3 ಮೆಟ್ರೋ ಮಾರ್ಗದಲ್ಲಿ 37ರ  ಬದಲು 11 ಕಿ.ಮೀ. ಮಾತ್ರ ಡಬಲ್‌ ಡೆಕ್ಕರ್‌ ಫ್ಲೈಓವರ್‌?
ಡಬಲ್‌ ಡೆಕ್ಕರ್‌ ಫ್ಲೈಓವರ್‌ ಯೋಜನೆ Image Credit source: Deccam Herald
ಪ್ರಸನ್ನ ಹೆಗಡೆ
|

Updated on: Aug 11, 2026 | 12:52 PM

Share

ಬೆಂಗಳೂರು, ಆಗಸ್ಟ್​​ 11: ನಮ್ಮ ಮೆಟ್ರೋದ ಆರೆಂಜ್‌ ಲೈನ್‌ನ (ಜೆ.ಪಿ.ನಗರ-ಕೆಂಪಾಪುರ ಹಾಗೂ ಹೊಸಹಳ್ಳಿ-ಕಡಬಗೆರೆ) ಫೇಸ್‌-3 ಮಾರ್ಗದಲ್ಲಿ 37 ಕಿ.ಮೀ ಉದ್ದದ ಎಂಡ್‌-ಟು-ಎಂಡ್‌ ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಿಸುವ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕೈಬಿಡುವ ಸಾಧ್ಯತೆಯಿದೆ. ಇದರ ಬದಲಾಗಿ, ಸಂಚಾರ ದಟ್ಟಣೆಯಿಂದ ಪದೇಪದೆ ಸಮಸ್ಯೆ ಎದುರಾಗುವ ಪ್ರಮುಖ ಜಂಕ್ಷನ್‌ಗಳಲ್ಲಿ ಮಾತ್ರ ಕಡಿಮೆ ಉದ್ದದ ಡಬಲ್‌ ಡೆಕ್ಕರ್‌ ಮಾರ್ಗಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.

ಡಬಲ್‌ ಡೆಕ್ಕರ್‌ ಫ್ಲೈಓವರ್‌ ಉದ್ದ 11 ಕಿ.ಮೀಗೆ ಇಳಿಕೆ?

ಈ ಹಿಂದೆ ಬಿಎಂಆರ್‌ಸಿಎಲ್‌ 37 ಕಿ.ಮೀ ಉದ್ದದ ಡಬಲ್‌ ಡೆಕ್ಕರ್‌ ರಚನೆ ನಿರ್ಮಿಸಲು ಯೋಜಿಸಿತ್ತು. ಮೊದಲ ಹಂತದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಅದರ ಮೇಲ್ಭಾಗದಲ್ಲಿ ಮೆಟ್ರೋ ವಯಾಡಕ್ಟ್‌ ನಿರ್ಮಿಸುವ ಉದ್ದೇಶವಿತ್ತು. ಆದರೆ ಎಂಜಿನಿಯರಿಂಗ್‌ ಸಲಹಾ ಸಂಸ್ಥೆ ರೈಟ್ಸ್‌ (RITES) ನೀಡಿದ ಸಲಹೆಗಳ ಹಿನ್ನೆಲೆಯಲ್ಲಿ ಡಬಲ್‌ ಡೆಕ್ಕರ್‌ ರಚನೆಯ ಉದ್ದವನ್ನು 11 ಕಿ.ಮೀಗೆ ಇಳಿಸುವ ಕುರಿತು ಬಿಎಂಆರ್‌ಸಿಎಲ್‌ ಚಿಂತನೆ ನಡೆಸುತ್ತಿದೆ. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಂಕ್ ಹಾಗೂ ಬ್ಲೂ ಲೈನ್‌ನ ಸಿಬಿಟಿಸಿ ವ್ಯವಸ್ಥೆಗೆ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್!

ಎಂಜಿನಿಯರಿಂಗ್‌ ಸಲಹಾ ಸಂಸ್ಥೆಯಿಂದ ಆತಂಕ

ಇತ್ತೀಚೆಗೆ ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಸಿರುವ ರೈಟ್ಸ್‌, ನಿರಂತರವಾಗಿ ಹೆಚ್ಚುವರಿ ರಸ್ತೆ ಸಾಮರ್ಥ್ಯ ಕಲ್ಪಿಸುವುದರಿಂದ ಖಾಸಗಿ ವಾಹನಗಳ ಬಳಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಖಾಸಗಿ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಗೆ ಪ್ರಯಾಣಿಕರನ್ನು ವರ್ಗಾಯಿಸುವ ಮೆಟ್ರೋ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಸಲಹಾ ಸಂಸ್ಥೆಯು ಎಂಜಿನಿಯರಿಂಗ್‌ ಸವಾಲುಗಳ ಬಗ್ಗೆಯೂ ಗಮನ ಸೆಳೆದಿದೆ. ಹಲವು ಜಂಕ್ಷನ್‌ಗಳಲ್ಲಿ ಅಸ್ತಿತ್ವದಲ್ಲಿರುವ ಫ್ಲೈಓವರ್‌ಗಳು ಮತ್ತು ಮೆಟ್ರೋ ಮಾರ್ಗಗಳನ್ನು ದಾಟಲು ಸಂಯೋಜಿತ ಡಬಲ್‌ ಡೆಕ್ಕರ್‌ ರಚನೆಯ ಎತ್ತರ 35 ಮೀಟರ್‌ವರೆಗೆ ತಲುಪಬಹುದು. ಇದರಿಂದ ನಿರ್ಮಾಣ ಹಾಗೂ ಕಾರ್ಯಾಚರಣೆ ಮತ್ತಷ್ಟು ಸಂಕೀರ್ಣವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೆಟ್ರೋ ಮಾತ್ರ ಒಳಗೊಂಡಿರುವ ಯೋಜನೆಯ ಆರ್ಥಿಕ ಆಂತರಿಕ ಪ್ರತಿಫಲ ದರ (EIRR) ಸುಮಾರು ಶೇ.17ರಷ್ಟಿದೆ. ಆದರೆ ಡಬಲ್‌ ಡೆಕ್ಕರ್‌ ಅಂಶವನ್ನು ಸೇರಿಸಿದಾಗ ಇದು ಶೇ.14ರ ಮಾನದಂಡಕ್ಕಿಂತ ಕೆಳಗೆ ಇಳಿಯುತ್ತದೆ ಎಂದು ವರದಿ ತಿಳಿಸಿದೆ.

ಪಶ್ಚಿಮ ಹೊರ ವರ್ತುಲ ರಸ್ತೆ (ORR)ಯಲ್ಲಿ ಹೆಬ್ಬಾಳ, ಬಿಇಎಲ್‌ ಸರ್ಕಲ್‌, ಗೊರಗುಂಟೆಪಾಳ್ಯ, ಸುಮನಹಳ್ಳಿ ಕ್ರಾಸ್‌, ನಾಗರಭಾವಿ ಭಾಗ, ನಾಯಂಡಹಳ್ಳಿ, ಕಾಮಾಕ್ಯ ಜಂಕ್ಷನ್‌, ಸರಕ್ಕಿ ಜಂಕ್ಷನ್‌, ಡೆಲ್ಮಿಯಾ ಫ್ಲೈಓವರ್‌ ಹಾಗೂ ವೇಗಾ ಸಿಟಿ ಮಾಲ್‌ ಸೇರಿದಂತೆ ಹಲವು ಕಡೆ ಸಂಚಾರ ದಟ್ಟಣೆಯ ಪ್ರಮುಖ ತಾಣಗಳಿವೆ. ಹೀಗಾಗಿ ಅಂತಿಮವಾಗಿ ಯಾವ ಭಾಗಗಳಲ್ಲಿ ಡಬಲ್‌ ಡೆಕ್ಕರ್‌ ರಚನೆ ನಿರ್ಮಿಸಲಾಗುತ್ತದೆ ಎಂಬುದು ಮಹತ್ವದ್ದಾಗಿದೆ. 2025ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌-3 ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರೂ, ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ