AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಣ್ಣಗಾಗದ ಕಾಂಗ್ರೆಸ್​​ ಮನೆಯಲ್ಲಿನ ಮುನಿಸು: ಸ್ಫೋಟಗೊಂಡ ಆಂತರಿಕ ಭಿನ್ನಾಭಿಪ್ರಾಯಗಳು

ಕರ್ನಾಟಕದಲ್ಲಿ ಸಿಎಂ ಡಿಕೆ ಶಿವಕುಮಾರ್ ತಮ್ಮದೇ ಪಡೆ ಕಟ್ಟಿಕೊಂಡು ಮುಂದಿನ ಚುನಾವಣೆ ಮೇಲೆ ಚಿತ್ತ ಹರಿಸಿದ್ದಾರೆ. 100 ದಿನಗಳನ್ನ ಯಶಸ್ವಿಯಾಗಿ ಪೂರೈಸೋ ಮೂಲಕ ಆಡಳಿತ ಕೊಡ್ತಿದ್ದಾರೆ. ಆದ್ರೆ ಮತ್ತೊಂದೆಡೆ ಕಾಂಗ್ರೆಸ್​​ ಮನೆಯಲ್ಲಿನ ಆಂತರಿಕ ಮುನಿಸು ತಣ್ಣಗಾದಂತೆ ಕಾಣಿಸ್ತಿಲ್ಲ.ಅಲ್ಲಲ್ಲಿ ನಡೆಯುತ್ತಿದ್ದ ಆಂತರಿಕ ಬೆಳವಣಿಗೆಗಳು ಇದೀಗ ಬಹಿರಂಗಗೊಂಡಿವೆ.

ತಣ್ಣಗಾಗದ ಕಾಂಗ್ರೆಸ್​​ ಮನೆಯಲ್ಲಿನ ಮುನಿಸು: ಸ್ಫೋಟಗೊಂಡ ಆಂತರಿಕ ಭಿನ್ನಾಭಿಪ್ರಾಯಗಳು
Karnataka Congress
ರಮೇಶ್ ಬಿ. ಜವಳಗೇರಾ
|

Updated on: Oct 04, 2026 | 9:20 PM

Share

ಬೆಂಗಳೂರು, (ಅಕ್ಟೋಬರ್ 04): ಕಾಂಗ್ರೆಸ್ನಲ್ಲಿನ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿವೆ. ಮೈಸೂರು, ಕೋಲಾರ ಚಿಕ್ಕಬಳ್ಳಾಪು ಕಾಂಗ್ರೆಸ್ ನಾಯಕರ ಮುನಿಸು, ಅಸಮಾಧಾನ ಬಹಿರಂಗಗೊಂಡಿದೆ. ಮೊದಲು ಮೈಸೂರು ವಿಚಾರಕ್ಕೆ ಬರುವುದಾದರೆ​​​​ ಸಿದ್ದರಾಮಯ್ಯ ಅತ್ಯಾಪ್ತರಲ್ಲಿ ಗುರುತಿಸಿಕೊಂಡಿದ್ದ ಹೆಚ್​.ಸಿ.ಮಹದೇವಪ್ಪ ಮುನಿಸು ಇನ್ನು ಶಮನ ಆಗಿಲ್ಲ. ಮೈಸೂರಿನಲ್ಲಿ ಪಕ್ಷದ ಏನೇ ಕಾರ್ಯಕ್ರಮ ನಡೆದ್ರೂ ಬಹುತೇಕ ಹೆಚ್​.ಸಿ.ಮಹದೇವಪ್ಪ ಭಾಗಿಯಾಗುತ್ತಿದ್ದರು. ಆದ್ರೆ ಇಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಚಿವ ಹೆಚ್​.ಸಿ.ಮಹದೇವಪ್ಪ ಗೈರಾಗಿದ್ದಾರೆ. ಈ ಮೂಲಕ ತಮ್ಮ ಅಸಮಧಾನವನ್ನು ಬಹಿರಂಗಗೊಳಿಸಿದ್ದಾರೆ. ಇನ್ನು ಮತ್ತೊಂದೆಡೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಸಕರ ಮುನಿಸು ಸಿಎಂ ಡಿಕೆ.ಶಿವಕುಮಾರ್​​ಗೆ ಸಣ್ಣ ಮಟ್ಟಿಗೆ ತಲೆನೋವು ತರಿಸಿದೆ.

ಅಂತರ ಕಾಯ್ದುಕೊಂಡ ಹೆಚ್​.ಸಿ.ಮಹದೇವಪ್ಪ

ಸಚಿವ ಸ್ಥಾನ ಸಿಗದಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಹೆಚ್​.ಸಿ.ಮಹದೇವಪ್ಪ ಮುನಿಸಿಕೊಂಡಿರೋ ವಿಚಾರ ಗೊತ್ತಿರೋದೇ. ಅಸಮಾಧಾನಗೊಂಡಿರೋ ಹೆಚ್​​.ಸಿ.ಮಹದೇವಪ್ಪ, ಕಳೆದ ಹಲವು ದಿನಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಅದ್ರೆ ಮೈಸೂರಿನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗೋ ಮೂಲಕ ಹೆಚ್​.ಸಿ.ಮಹದೇವಪ್ಪ ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ

ಇದನ್ನೂ ಓದಿ: ಮಾವುತರು,ಕಾವಾಡಿಗಳ ಉಪಹಾರ ಕೂಟದಲ್ಲಿ ಹೈಡ್ರಾಮಾ: ಯತೀಂದ್ರ ನಡೆಗೆ ತನ್ವೀರ್ ಸೇಠ್ ಅಸಮಾಧಾನ

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಬೀರಿಹುಂಡಿ ಬಸವಣ್ಣ ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗಿ ಆಗಿದ್ರು. ಮತ್ತೊಂದ್ಕಡೆ ಸಚಿವ ಸ್ಥಾನ ಸಿಗದ ಕಾರಣ ಸಿದ್ದರಾಮಯ್ಯ ವಿರುದ್ಧ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಕೆ.ವೆಂಕಟೇಶ್ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಕೋಲಾರದಲ್ಲೂ ಬಣ ರಾಜಕೀಯ

ಮತ್ತೊಂದೆಡೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಸಕರ ಮುನಿಸು ಸಿಎಂ ಡಿಕೆ.ಶಿವಕುಮಾರ್​​ಗೆ ಸಣ್ಣ ಮಟ್ಟಿಗೆ ತಲೆನೋವಾದಂತೆ ಕಾಣಿಸ್ತಿದೆ. ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿಎಂ ನಿವಾಸಕ್ಕೆ ಶಾಸಕರು ದಂಡೇ ಭೇಟಿ ಕೊಟ್ಟಿದೆ. ಮಾಜಿ ಸಚಿವ ಎಂ.ಸಿ.ಸುಧಾಕರ್, ನಂಜೇಗೌಡ, ಬಂಗಾರಪೇಟೆ ನಾರಾಯಣಸ್ವಾಮಿ, ಬಾಗೇಪಲ್ಲಿ ಸುಬ್ಬಾರೆಡ್ಡಿ, ಕೊತ್ತನೂರು ಮಂಜುನಾಥ್, ರೂಪಕಲಾ ಶಶಿಧರ್ ಭೇಟಿ ಮಾಡಿ ಮಾತುಕತೆ ಮಾಡಿದ್ರು. ತಮ್ಮ ತಮ್ಮ ಕ್ಷೇತ್ರದಲ್ಲಿ ನಡೀತಿರೋ ಬೆಳವಣಿಗೆಗಳ ಬಗ್ಗೆ ವಿವರಣೆ ಕೊಟ್ಟಿದ್ದಾರೆ.

ಕೋಲಾರ ಕಾಂಗ್ರೆಸ್​ ವಿಚಾರಕ್ಕೆ ಬರೋದಾದ್ರೆ, ಸಚಿವ ಕೆ.ಹೆಚ್​.ಮುನಿಯಪ್ಪ ನಡೆಯಿಂದ ಕೋಲಾರ ಶಾಸಕರು ಬೇಸರಗೊಂಡಿದ್ದಾರೆ. ಇದೇ ವಿಚಾರದಲ್ಲಿ ಅಧಿವೇಶನ ನಡೆಯುವಾಗ ಸದನದಲ್ಲಿ ಶಾಸಕರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಹೀಗಾಗಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೋಲಾರ ಭಾಗದ ಶಾಸಕರು ಭೇಟಿಯಾಗಿ ಮಾತುಕತೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್​ನಲ್ಲೂ  ಅಸಮಾಧಾನ

ಇನ್ನೊಂದೆಡೆ ಚಿಕ್ಕಬಳ್ಳಾಪುರ ಕಾಂಗ್ರೆಸ್​ನಲ್ಲಿ ಏನ್ ಅಸಮಾಧಾನ ಅಂದ್ರೆ. ಮಾಜಿ ಸಚಿವ ಎಂ.ಸಿ.ಸುಧಾಕರ್ ಅವರ ಕ್ಷೇತ್ರವನ್ನ ಗುರಿಯಾಗಿಸಿಕೊಂಡು ಶಾಸಕ ಪ್ರದೀಪ್ ಈಶ್ವರ್ ಟ್ವೀಟ್ ಮಾಡಿದ್ದು, ಎಂ.ಸಿ.ಸುಧಾಕರ್​​ಗೆ ತೀವ್ರ ಬೇಸರ ತಂದಿದೆ ಅಂತೆ. ಹೀಗಾಗಿ ಪ್ರದೀಪ್ ಈಶ್ವರ್ ನಡವಳಿಕೆ ಬಗ್ಗೆ ಸಿಎಂ ಡಿಕೆಶಿ ಜೊತೆ ಶಾಸಕರು ಸುದೀರ್ಘವಾದ ಚರ್ಚೆ ಮಾಡಿದ್ದಾರೆ. ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅದೇನೇ ಹೇಳಿ, ಪಕ್ಷದಲ್ಲಿ ಏನೇ ಅಸಮಾಧಾನ, ಬೇಸರ ಇದ್ರೂ ಪಕ್ಷಕ್ಕೆ ಡ್ಯಾಮೇಜ್​ ಆಗದಂತೆ ಸಿಎಂ ಡಿಕೆಶಿ ನೋಡಿಕೊಳ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಶಾಸಕರ ದೂರನ್ನ ಆಲಿಸಿದ್ದಾರೆ. ಅದ್ಯಾವ ರೀತಿ ಮುನಿಸು ಶಮನ ಮಾಡ್ತಾರೆ ಅನ್ನೋದು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More