AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾ ಪ್ರಜೆ ವಿಡಿಯೋ ವೈರಲ್ ಬೆನ್ನಲ್ಲೇ ಫುಟ್‌ಪಾತ್ ದುರಸ್ತಿ: ಜಿಬಿಎ ವಿರುದ್ಧ ಬೆಂಗಳೂರಿಗರು ಆಕ್ರೋಶ

ಕೆನಡಾ ಮೂಲದ ವ್ಯಕ್ತಿಯೊಬ್ಬ ಇಂದಿರಾನಗರದ ಮುಖ್ಯರಸ್ತೆಯಲ್ಲಿ ಹದಗೆಟ್ಟ ಫುಟ್‌ಪಾತ್ ಕುರಿತು ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಜಿಬಿಎ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆದರೆ, ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ತಿಂಗಳುಗಟ್ಟಲೆ ಕಾಯಿಸುವ ಜಿಬಿಎ, ವಿದೇಶಿಯರ ವಿಡಿಯೋಗೆ ವೇಗವಾಗಿ ಸ್ಪಂದಿಸುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆನಡಾ ಪ್ರಜೆ ವಿಡಿಯೋ ವೈರಲ್ ಬೆನ್ನಲ್ಲೇ ಫುಟ್‌ಪಾತ್ ದುರಸ್ತಿ: ಜಿಬಿಎ ವಿರುದ್ಧ ಬೆಂಗಳೂರಿಗರು ಆಕ್ರೋಶ
ಫುಟ್‌ಪಾತ್ ದುರಸ್ತಿ
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Oct 04, 2026 | 9:37 PM

Share

ಮುಖ್ಯಾಂಶಗಳು

  • ಇಂದಿರಾನಗರ ಫುಟ್‌ಪಾತ್ ದುಸ್ಥಿತಿ ಬಿಚ್ಚಿಟ್ಟ ಕೆನಡಾ ಪ್ರಜೆ
  • ವಿಡಿಯೋ ವೈರಲ್ ಬೆನ್ನಲ್ಲೇ ಜಿಬಿಎನಿಂದ ಸಮರೋಪಾದಿ ದುರಸ್ತಿ
  • ಜಿಬಿಎ ವಿರುದ್ಧ ಸಾರ್ವಜನಿಕರು ಆಕ್ರೋಶ

ಬೆಂಗಳೂರು, ಅಕ್ಟೋಬರ್​​ 04: ಬೆಂಗಳೂರಿನಲ್ಲಿ ಯಾವ ಫುಟ್​ಪಾತ್, ಯಾವ ರಸ್ತೆ ಸರಿ ಇದೆ ಎಂದು ಎಲ್ಲರೂ ದಿನ ಮಾತನಾಡಿಕೊಳ್ಳುತ್ತಾರೆ. ಆದರೆ ಕೆನಡಾ ಮೂಲದ ವ್ಯಕ್ತಿಯೊಬ್ಬ ಇಂದಿರಾನಗರದ 12ನೇ ಮುಖ್ಯರಸ್ತೆಯ ಫುಟ್‌ಪಾತ್ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ವಿಡಿಯೋ ಭಾರೀ ವೈರಲ್​ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಜಿಬಿಎ ಅಧಿಕಾರಿಗಳು ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಮಾಡಿ ಮುಗಿಸಿದ್ದಾರೆ.

ಫುಟ್​ಪಾತ್ ದುಸ್ಥಿತಿ ಬಗ್ಗೆ ಕೆನಡಾ ವ್ಯಕ್ತಿಯ ವಿಡಿಯೋ ವೈರಲ್​​

ಎರಡು ದಿನಗಳ ಹಿಂದೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಇಂದಿರಾನಗರ 12ನೇ ಮುಖ್ಯರಸ್ತೆಯ ಫುಟ್​ಪಾತ್ ದುಸ್ಥಿತಿಯನ್ನು ಕೆನಡಾ ಮೂಲದ ವ್ಯಕ್ತಿ ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಭಾರೀ ವೈರಲ್ ಕೂಡ ಆಗಿತ್ತು. ಜಿಬಿಎ ಹಾಗೂ ಕೇಂದ್ರ ನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ಟೀಕಾಪ್ರಹಾರವೇ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರದ ಮೂಲಸೌಕರ್ಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು.

ಅಲರ್ಟ್ ಆದ ಜಿಬಿಎ: ಫುಟ್​ಪಾತ್ ದುರಸ್ತಿ

ಇನ್ನು ಸಾರ್ವಜನಿಕರಿಂದ ಟೀಕೆ ಹೆಚ್ಚಾದ ಬೆನ್ನಲ್ಲೇ ಅಲರ್ಟ್ ಆದ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ 12ನೇ ಮುಖ್ಯರಸ್ತೆಯಲ್ಲಿ ಸಮರೋಪಾದಿಯಲ್ಲಿ ಫುಟ್​ಪಾತ್ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಕುಸಿದು ಬಿದ್ದ ಫುಟ್​ಪಾತ್, ಫುಟ್​ಪಾತ್ ಸ್ಲ್ಯಾಬ್​ಗಳನ್ನ ಪುನರ್ ನಿರ್ಮಾಣ ಮಾಡಿದ್ದಾರೆ.

LIVE TV

ಜಿಬಿಎ ವಿರುದ್ಧ ಸಾರ್ವಜನಿಕರು ಆಕ್ರೋಶ 

ಆ ಬಳಿಕವೂ ಸಾರ್ವಜನಿಕರ ಅಸಮಾಧಾನ ಕಡಿಮೆಯಾಗಿಲ್ಲ. ನಾವು ಇಲ್ಲೇ ಹುಟ್ಟಿ ಬೆಳೆದು ಸಮಸ್ಯೆ ಹೇಳಿಕೊಂಡರೆ, ದೂರು ನೀಡಿದರೆ, ವರ್ಷಾನುಗಟ್ಟಲೇ ಆದರೂ ಪರಿಹಾರ ಸಿಗಲ್ಲ. ಯಾರೋ ವಿದೇಶಿ ಪ್ರಜೆ ವಿಡಿಯೋ ಮಾಡಿ ಜಿಬಿಎ ಮಾನ ಹರಾಜು ಹಾಕಿದಕ್ಕೆ ತ್ವರಿತವಾಗಿ ಕೆಲಸ ಆಗುತ್ತೆ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ: ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ

ಒಟ್ಟಿನಲ್ಲಿ ಇಂದಿರಾನಗರ 12ನೇ ಮುಖ್ಯರಸ್ತೆ ಮಾತ್ರವಲ್ಲ, ನಗರದ ಸಾವಿರಾರು ರಸ್ತೆಗಳು, ಫುಟ್​ಪಾತ್​ಗಳು ಹದಗೆಟ್ಟಿವೆ. ನಿತ್ಯ ಈ ಅವ್ಯವಸ್ಥೆಯಲ್ಲಿ ಜನ ನರಳಾಡುತ್ತಿದ್ದಾರೆ. ಯಾರೋ ವಿದೇಶಿ ಪ್ರಜೆಯ ಪೋಸ್ಟ್​ಗೆ ಇಷ್ಟೊಂದು ಮಿಡಿಯುವ GBA ಅಧಿಕಾರಿಗಳು ಸ್ಥಳೀಯರ ನೋವಿಗೂ ಇದೇ ರೀತಿ ಸ್ಪಂದಿಸಲಿ ಎನ್ನುವುದೆ ಎಲ್ಲರ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್