Mysore Pak: ಪಾಕಿಸ್ತಾನದ ಜೊತೆಗಿನ ಗಲಾಟೆಯಿಂದ ಮೈಸೂರು ಪಾಕ್ ಹೆಸರೂ ಬದಲು!
ಮೈಸೂರಿನಲ್ಲಿ ಮೊದಲು ತಯಾರಾದ ಜನರ ಬಹಳ ಇಷ್ಟದ ಸಿಹಿತಿಂಡಿಯಾದ 'ಮೈಸೂರು ಪಾಕ್' ಹೆಸರು ಈಗ 'ಮೈಸೂರು ಶ್ರೀ' ಎಂದು ಬದಲಾಗಿದೆ. ಪಾಕಿಸ್ತಾನದ ಜೊತೆ ಸಂಘರ್ಷ ಶುರುವಾದ ನಂತರ ಪಾಕ್ ಎಂಬ ಹೆಸರು ಭಾರತದ ಸ್ವೀಟ್ನಲ್ಲಿ ಕೂಡ ಇರಬಾರದು ಎಂದು ಬೇಕರಿಯವರು ಮೈಸೂರು ಪಾಕ್ ಬದಲು ಮೈಸೂರು ಶ್ರೀ ಎಂದು ಬೋರ್ಡ್ ಹಾಕಿರುವ ಫೋಟೋ ವೈರಲ್ ಆಗಿದೆ.

ಜೈಪುರ, ಮೇ 23: ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಗಳು ಪ್ರಸಿದ್ಧ ‘ಮೈಸೂರು ಪಾಕ್’ ಸೇರಿದಂತೆ ವಿವಿಧ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿವೆ. ಬೇಕರಿಯೊಂದರಲ್ಲಿ ಎಲ್ಲಾ ಸಿಹಿತಿಂಡಿಗಳ ಹೆಸರುಗಳಿಂದ ‘ಪಾಕ್’ ಪದವನ್ನು ತೆಗೆದುಹಾಕಿ ಅದನ್ನು ‘ಶ್ರೀ’ ಎಂದು ಬದಲಾಯಿಸಿದ್ದಾರೆ. ಹೀಗಾಗಿ, ಇಲ್ಲಿ ಮೈಸೂರು ಪಾಕ್ (Mysore Pak) ಮೈಸೂರು ಶ್ರೀಯಾಗಿ (Mysore Shree) ಬದಲಾಗಿದೆ. “ನಾವು ‘ಪಾಕ್’ ಪದವನ್ನು ನಮ್ಮ ಸಿಹಿತಿಂಡಿಗಳ ಹೆಸರುಗಳಿಂದ ತೆಗೆದುಹಾಕಿದ್ದೇವೆ. ನಾವು ‘ಮೋತಿ ಪಾಕ್’ ಅನ್ನು ‘ಮೋತಿ ಶ್ರೀ’ ಎಂದು, ‘ಗೋಂದ್ ಪಾಕ್’ ಅನ್ನು ‘ಗೋಂದ್ ಶ್ರೀ’ ಎಂದು, ‘ಮೈಸೂರು ಪಾಕ್’ ಅನ್ನು ‘ಮೈಸೂರು ಶ್ರೀ’ ಎಂದು ಮರುನಾಮಕರಣ ಮಾಡಿದ್ದೇವೆ” ಎಂದು ಅಂಗಡಿಯವರು ತಿಳಿಸಿದ್ದಾರೆ.
ಮೈಸೂರಿನ ತಿಂಡಿ ಮೈಸೂರು ಪಾಕ್ ಎಂದರೆ ಕನ್ನಡದಲ್ಲಿ ಮೈಸೂರಿನ ಸಿಹಿ ಅಥವಾ ಸಕ್ಕರೆ ಸಿರಪ್ ಎಂದರ್ಥ. ಇಲ್ಲಿ ಪಾಕ್ಗೆ ಸಿಹಿ ಎಂಬ ಅರ್ಥವಿದೆ. ಆದರೆ, ಪಾಕಿಸ್ತಾನದ ಯಾವ ಹೆಸರೂ ಬೇಡವೆಂದು ಬೇಕರಿಯವರು ಈ ನಿರ್ಧಾರ ಮಾಡಿದ್ದಾರೆ. ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Mysore Shree 🤚 pic.twitter.com/Jc5bjoyVmM
— Indian Tech & Infra (@IndianTechGuide) May 23, 2025
ಇದನ್ನೂ ಓದಿ: ಭಾರತದಲ್ಲಿ ಪಾಕಿಸ್ತಾನ ವಿಮಾನ, ಮಿಲಿಟರಿ ವಿಮಾನಗಳ ಮೇಲಿನ ನಿಷೇಧ ಜೂನ್ 23ರವರೆಗೆ ವಿಸ್ತರಣೆ
ಇನ್ನು ಕೆಲವರು ಮೈಸೂರು ‘ಪಾಕ್’ ಅನ್ನು ಮೈಸೂರು ‘ಭಾರತ್’ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Came across this. What’s your take on this?#MysorePak pic.twitter.com/UbkRr1ruif
— Tathvam-asi (@ssaratht) May 15, 2025
ಏಪ್ರಿಲ್ 22ರಂದು ನಡೆದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತವು ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಲು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ನಂತರ ಪಾಕಿಸ್ತಾನವು ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿತು, ಆದರೆ ಬೆದರಿಕೆಗಳನ್ನು ವಿಫಲಗೊಳಿಸಲಾಯಿತು. ಅದಕ್ಕೆ ಪ್ರತೀಕಾರವಾಗಿ, ಭಾರತೀಯ ಪಡೆಗಳು ಪಾಕಿಸ್ತಾನದಲ್ಲಿನ ವಾಯುನೆಲೆಗಳ ಮೇಲೆ ದಾಳಿ ಮಾಡಿದವು. ಮೇ 10ರಂದು ನಡೆದ ಕದನ ವಿರಾಮವು ದಾಳಿಯನ್ನು ಕೊನೆಗೊಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Fri, 23 May 25








