ಪಾಕಿಸ್ತಾನದ ದೊಡ್ಡ ನಗರಗಳಲ್ಲಿ ಉಗ್ರರು ಮುಕ್ತವಾಗಿ ಸುತ್ತಾಡುತ್ತಿದ್ದಾರೆ, ಸೇನೆಯ ಬೆಂಬಲೂ ಇದೆ: ಜೈಶಂಕರ್
ಪಾಕಿಸ್ತಾನದಲ್ಲಿ ಸೈನ್ಯದ ಬೆಂಬಲದೊಂದಿಗೆ ಉಗ್ರರು ಮುಕ್ತವಾಗಿ ಸುತ್ತಾಡಿಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಅವರಿಗೆ ತಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲದ ಬಗ್ಗೆ ತಿಳಿದಿಲ್ಲ ಎಂದು ಭಾವಿಸುವುದು ತಪ್ಪು ಕಲ್ಪನೆಯಾಗುತ್ತದೆ ಎಂದರು. ಜೈಶಂಕರ್ ಅವರು ಪ್ರಸ್ತುತ ನೆದರ್ಲ್ಯಾಂಡ್ಗೆ ಪ್ರವಾಸದಲ್ಲಿದ್ದಾರೆ. ಭಾರತ-ಡಚ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ. ಯುರೋಪಿಯನ್ ಒಕ್ಕೂಟವು ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿರುವುದರಿಂದ ಈ ಭೇಟಿ ವಿಶೇಷ ಮಹತ್ವವನ್ನು ಹೊಂದಿದೆ.

ನವದೆಹಲಿ, ಮೇ 23: ಪಾಕಿಸ್ತಾನ(Pakistan)ದ ದೊಡ್ಡ ನಗರಗಳಲ್ಲಿ ಯಾರದ್ದೂ ಭಯವಿಲ್ಲದೆ ಉಗ್ರರು(Terrorists) ಸುತ್ತಾಡುತ್ತಿದ್ದಾರೆ, ಅವರಿಗೆ ಪಾಕ್ ಸೇನೆಯ ಬೆಂಬಲವೂ ಇದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಡಚ್ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪಾಕಿಸ್ತಾನ ಮತ್ತು ಅದರ ಸೇನೆಯು ಭಯೋತ್ಪಾದನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.
ಅವರಿಗೆ ತಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲದ ಬಗ್ಗೆ ತಿಳಿದಿಲ್ಲ ಎಂದು ಭಾವಿಸುವುದು ತಪ್ಪು ಕಲ್ಪನೆಯಾಗುತ್ತದೆ ಎಂದರು. ಜೈಶಂಕರ್ ಅವರು ಪ್ರಸ್ತುತ ನೆದರ್ಲ್ಯಾಂಡ್ಗೆ ಪ್ರವಾಸದಲ್ಲಿದ್ದಾರೆ. ಭಾರತ-ಡಚ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ. ಯುರೋಪಿಯನ್ ಒಕ್ಕೂಟವು ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿರುವುದರಿಂದ ಈ ಭೇಟಿ ವಿಶೇಷ ಮಹತ್ವವನ್ನು ಹೊಂದಿದೆ.
ಪಾಕಿಸ್ತಾನಕ್ಕೆ ಏನೂ ತಿಳಿದಿಲ್ಲ ಎಂದು ನಾವು ಭಾವಿಸಬಾರದು, ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಭಯೋತ್ಪಾದಕರು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಅವರ ವಿಳಾಸ ಎಲ್ಲರಿಗೂ ತಿಳಿದಿದೆ. ಸರ್ಕಾರ ಮತ್ತು ಸೇನೆ ಎರಡೂ ಇದರಲ್ಲಿ ಭಾಗಿಯಾಗಿವೆ ಎಂದು ಜೈಶಂಕರ್ ಹೇಳಿದರು.
ಮತ್ತಷ್ಟು ಓದಿ: ಭಾರತ-ಪಾಕ್ ನಡುವೆ ನೇರ ಮಾತುಕತೆ ಮೂಲಕ ಕದನವಿರಾಮ; ಮತ್ತೊಮ್ಮೆ ಜೈಶಂಕರ್ ಸ್ಪಷ್ಟನೆ
ಮೇ 7 ರಂದು ನಡೆಸಿದ ಆಪರೇಷನ್ ಸಿಂದೂರ್, ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿ ಎಂದು ಬಣ್ಣಿಸಿದ್ದಾರೆ. ಈ ಕ್ರಮಕ್ಕಾಗಿ ದೇಶವನ್ನು ಗೌರವಿಸಬೇಕು ಏಕೆಂದರೆ ಇದು ಕೇವಲ ಪ್ರತೀಕಾರವಲ್ಲ, ಬದಲಾಗಿ ನ್ಯಾಯದ ಸಂಕೇತವಾಗಿದೆ. ಈ ಕಾರ್ಯಾಚರಣೆಯಡಿಯಲ್ಲಿ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಭಯೋತ್ಪಾದಕ ಅಡುಗುತಾಣಗಳನ್ನು ನಾಶಪಡಿಸಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಪ್ರತಿಕ್ರಿಯೆ ಬಂದಿದ್ದು, ಇದರಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳು ನಡೆದರೆ, ಪರಿಣಾಮಗಳು ಗಂಭೀರವಾಗಿರುತ್ತವೆ ಎಂದು ಜೈಶಂಕರ್ ಎಚ್ಚರಿಕೆ ನೀಡಿದರು. ಯಾವುದೇ ದಾಳಿ ಮತ್ತೆ ನಡೆದರೆ ಅದಕ್ಕೆ ಪ್ರತ್ಯುತ್ತರ ನೀಡಲಾಗುವುದು ಎಂಬುದನ್ನು ಪಾಕಿಸ್ತಾನ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರು.
ಭಯೋತ್ಪಾದನೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಒಟ್ಟಿಗೆ ಜೋಡಿಸಲು ಸಾಧ್ಯವಿಲ್ಲ, ಭಾರತಕ್ಕೆ ಭಯೋತ್ಪಾದನೆ ಒಂದು ಅಂತಾರಾಷ್ಟ್ರೀಯ ಅಪರಾಧವಾಗಿದ್ದು, ಅದನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾಗವನ್ನು ಭಾರತಕ್ಕೆ ಹಿಂತಿರುಗಿಸಬೇಕು ಎಂದು ಅವರು ಪುನರುಚ್ಚರಿಸಿದರು.
ಇದರೊಂದಿಗೆ ಅವರು ಕಾಶ್ಮೀರ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರಕ್ಕೆ ಅವಕಾಶವಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ