ಆಂಧ್ರಪ್ರದೇಶ: ಕಾರಿನಲ್ಲಿ ಉಸಿರುಗಟ್ಟಿ ನಾಲ್ಕು ಮಕ್ಕಳ ಧಾರುಣ ಸಾವು
ನಿಲ್ಲಿಸಿದ್ದ ಕಾರಿನೊಳಗೆ ಸಿಲುಕಿ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಮನೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳು ನಿಲ್ಲಿಸಿದ್ದ ಕಾರೊನೊಳಗೆ ಹೇಗೋ ಹೊಕ್ಕಿದ್ದಾರೆ. ಈಗಿನ ಕಾರುಗಳೆಲ್ಲಾ ಒಂದೊಮ್ಮೆ ಚಾಲಕರು ಕಾರನ್ನು ಲಾಕ್ ಮಾಡಲು ಮರೆತರೂ ಕೆಲವು ನಿಮಿಷಗಳ ಬಳಿಕ ತಾನಾಗಿಯೇ ಲಾಕ್ ಆಗುತ್ತದೆ.

ಆಂಧ್ರಪ್ರದೇಶ, ಮೇ 22: ನಿಲ್ಲಿಸಿದ್ದ ಕಾರಿನೊಳಗೆ ಸಿಲುಕಿ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಮನೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳು ನಿಲ್ಲಿಸಿದ್ದ ಕಾರೊನೊಳಗೆ ಹೇಗೋ ಹೊಕ್ಕಿದ್ದಾರೆ. ಈಗಿನ ಕಾರುಗಳೆಲ್ಲಾ ಒಂದೊಮ್ಮೆ ಚಾಲಕರು ಕಾರನ್ನು ಲಾಕ್ ಮಾಡಲು ಮರೆತರೂ ಕೆಲವು ನಿಮಿಷಗಳ ಬಳಿಕ ತಾನಾಗಿಯೇ ಲಾಕ್ ಆಗುತ್ತದೆ.
ಹಾಗೆಯೇ ಈ ಕಾರು ಕೂಡ ತನ್ನಿಂತಾನೆ ಲಾಕ್ ಆಗಿದೆ. ಅವರಿಗೆ ಹೊರ ಬರಲು ಸಾಧ್ಯವಾಗಿಲ್ಲ. ಅವರು ಕೂಗಿಕೊಂಡರೂ ಯಾರಿಗೂ ಕೇಳಿಸಲು ಸಾಧ್ಯವೇ ಇಲ್ಲ. ಆರು ಗಂಟೆಗಳ ನಂತರ ಶವಗಳು ಪತ್ತೆಯಾಗಿವೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಲ್ಕು ಮಕ್ಕಳಲ್ಲಿ ಇಬ್ಬರು ಒಡಹುಟ್ಟಿದವರು, ಉಳಿದವರು ಪ್ರತ್ಯೇಕ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.
ಮೃತ ಮಕ್ಕಳನ್ನು ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಮತ್ತು ಕಂಡಿ ಮನಸ್ವಿನಿ (6) ಎಂದು ಗುರುತಿಸಲಾಗಿದ್ದು, ಎಲ್ಲರೂ ಒಂದೇ ಗ್ರಾಮದವರು. ಮಕ್ಕಳ ಕುಟುಂಬ ಸದಸ್ಯರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಿದ ನಂತರ ಸಂಜೆ ವೇಳೆ ಕಾರಿನಲ್ಲಿರುವುದು ಪತ್ತೆಯಾಗಿದೆ.
ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರತೆಗೆದರು. ಆದರೆ, ಆ ಹೊತ್ತಿಗೆ, ನಾಲ್ವರೂ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದರು. ಕಾರು ಲಾಕ್ ಆಗಿದೆಯೇ ಎಂದು ಪರಿಶೀಲಿಸಲು ಅವರು ಮರೆತಿದ್ದರಂತೆ.
ಮತ್ತಷ್ಟು ಓದಿ: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು, ಮದ್ವೆ ಮನೆಯಲ್ಲಿ ಸೂತಕ
ಎರಡು ದಿನಗಳ ಹಿಂದೆ ದ್ವಾರಪುಡಿ ಗ್ರಾಮದ ಮಹಿಳಾ ಮಂಡಳಿ ಕಚೇರಿ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿದ್ದರು.ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ, ಮಳೆಯಿಂದ ರಕ್ಷಣೆ ಪಡೆಯಲು ಕಾರಿನೊಳಗೆ ಹೋಗಿ ಕುಳಿತಿದ್ದರು. ದುರದೃಷ್ಟವಶಾತ್, ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿತ್ತು.
ಸ್ಥಳೀಯ ನಿವಾಸಿಗಳಿಂದ ಬಂದ ಮಾಹಿತಿಯ ಮೇರೆಗೆ ವಿಜಯನಗರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನ ಮಾಲೀಕರನ್ನು ಗುರುತಿಸಲು ತನಿಖೆ ಆರಂಭಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯನಗರ ಜಿಜಿಎಚ್‌ಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




