AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ದಾಳಿಗೂ ಮುನ್ನ ಪಾಕ್​ ಐಎಸ್​ಐ ಭಾರತದಲ್ಲಿ ದೊಡ್ಡ ದಾಳಿಯ ಸಂಚು ರೂಪಿಸಿತ್ತು

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರ ಪ್ರಾಣ ತೆಗೆದಿದ್ದರು. ಈ ದಾಳಿಗೂ ಮುನ್ನ ಪಾಕಿಸ್ತಾನದ ಐಎಸ್​ಐ ದೇಶದಲ್ಲಿ ಇದಕ್ಕಿಂತ ದೊಡ್ಡ ದಾಳಿಯ ಸಂಚು ರೂಪಿಸಿತ್ತು.ಆದರೆ ಆ ಸಂಚನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿ, ವಿಫಲಗೊಳಿಸಿದ್ದವು. ಪಹಲ್ಗಾಮ್ ಹತ್ಯೆಗೂ ಮುನ್ನವೇ ಈ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿಯ ಹೋಟೆಲ್​ವೊಂದರಲ್ಲಿ ನೇಪಾಳ ಮೂಲದ ಐಎಸೈ ಏಜೆಂಟ್​ ಅನ್ಸಾರುಲ್ ಮಿಯಾನ್ ಅನ್ಸಾರಿಯನ್ನು ಬಂಧಿಸಲಾಗಿದೆ.

ಪಹಲ್ಗಾಮ್ ದಾಳಿಗೂ ಮುನ್ನ ಪಾಕ್​ ಐಎಸ್​ಐ ಭಾರತದಲ್ಲಿ ದೊಡ್ಡ ದಾಳಿಯ ಸಂಚು ರೂಪಿಸಿತ್ತು
ಪಹಲ್ಗಾಮ್ Image Credit source: NDTV
ನಯನಾ ರಾಜೀವ್
|

Updated on: May 22, 2025 | 10:54 AM

Share

ನವದೆಹಲಿ, ಮೇ 22: ಪಹಲ್ಗಾಮ್ ದಾಳಿಗೂ ಮುನ್ನ ಪಾಕಿಸ್ತಾನ(Pakistan)ದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಭಾರತದಲ್ಲಿ ಪ್ರಮುಖ ದಾಳಿ ನಡೆಸಲು ಸಂಚು ರೂಪಿಸಿತ್ತು ಎನ್ನುವ ವಿಚಾರ ಇದೀಗ ಬಹಿರಂಗಗೊಂಡಿದೆ. ಆದರೆ ಆ ಸಂಚನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿ, ವಿಫಲಗೊಳಿಸಿದ್ದವು. ಪಹಲ್ಗಾಮ್ ಹತ್ಯೆಗೂ ಮುನ್ನವೇ ಈ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ದೆಹಲಿಯ ಹೋಟೆಲ್​ವೊಂದರಲ್ಲಿ ನೇಪಾಳ ಮೂಲದ ಐಎಸ್​ಐ ಏಜೆಂಟ್​ ಅನ್ಸಾರುಲ್ ಮಿಯಾ ಅನ್ಸಾರಿಯನ್ನು ಬಂಧಿಸಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಅನ್ಸಾರಿ ಐಎಸ್‌ಐ ಆದೇಶದ ಮೇರೆಗೆ ಪಾಕಿಸ್ತಾನದಿಂದ ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ. ಪಾಕಿಸ್ತಾನಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು.

ಕೇಂದ್ರೀಯ ಸಂಸ್ಥೆಗಳು ಮತ್ತು ದೆಹಲಿ ಪೊಲೀಸ್ ವಿಶೇಷ ದಳದ ನೇತೃತ್ವದಲ್ಲಿ ಜನವರಿ ಮತ್ತು ಮಾರ್ಚ್ 2025 ರ ನಡುವೆ ನಡೆಸಿದ ಅತ್ಯಂತ ರಹಸ್ಯ ಜಂಟಿ ಕಾರ್ಯಾಚರಣೆಯ ಭಾಗವಾಗಿ ಆತನನ್ನು ಅನ್ಸಾರಿ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅನ್ಸಾರಿ ಐಎಸ್‌ಐನ ವ್ಯಾಪಕ ಬೇಹುಗಾರಿಕೆ ಜಾಲದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದ ಮತ್ತು ಪಾಕಿಸ್ತಾನಕ್ಕೆ ಭಾರತದ ಮಿಲಿಟರಿ ದಾಖಲೆಗಳನ್ನು ಸಂಗ್ರಹಿಸುವ ಮತ್ತು ಕಳುಹಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ
Image
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
Image
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
Image
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
Image
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಮತ್ತಷ್ಟು ಓದಿ: Operation Sindoor: ಈ ಚೀಪ್ ಪಬ್ಲಿಸಿಟಿ ಯಾಕೆಂದು ಛೀಮಾರಿ ಹಾಕಿ ಪ್ರೊಫೆಸರ್​ಗೆ ಸುಪ್ರೀಂನಿಂದ ಜಾಮೀನು

ಅನ್ಸಾರಿಯಿಂದ ವಶಪಡಿಸಿಕೊಂಡ ದಾಖಲೆಗಳಲ್ಲಿ ಭಾರತೀಯ ಸಶಸ್ತ್ರ ಪಡೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿದ್ದವು ಎಂಬುದು ದೃಢಪಟ್ಟಿದೆ.ಏಜೆನ್ಸಿಗಳು ಅಪರಾಧಿ ಡಿಜಿಟಲ್ ಪುರಾವೆಗಳನ್ನು ಸಹ ವಶಪಡಿಸಿಕೊಂಡಿವೆ.

ಕ್ಯಾಬ್​ ಚಾಲಕನಾಗಿದ್ದ ಅನ್ಸಾರಿ

ಅನ್ಸಾರಿ ಕತಾರ್‌ನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಐಎಸ್‌ಐ ಏಜೆಂಟ್​ನನ್ನು ಭೇಟಿಯಾಗಿದ್ದ. ನಂತರ ಆತನನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಭಾರತಕ್ಕೆ ನಿಯೋಜಿಸುವ ಮೊದಲು ಐಎಸ್‌ಐ ಕಾರ್ಯಕರ್ತನೊಬ್ಬ ಆತನನ್ನು ಬ್ರೈನ್‌ವಾಶ್ ಮಾಡಿ ತರಬೇತಿ ನೀಡಿದ್ದ ಎನ್ನುವುದು ವರದಿಯಿಂದ ತಿಳಿದುಬಂದಿದೆ.

ಅನ್ಸಾರಿ ತಪ್ಪೊಪ್ಪಿಕೊಂಡ ಬಳಿಕ, ಮತ್ತೊಬ್ಬ ಶಂಕಿತ ಅಖ್ಲಾಕ್ ಅಜಮ್‌ನನ್ನು ರಾಂಚಿಯಲ್ಲಿ ಬಂಧಿಸಲಾಯಿತು. ಪಾಕಿಸ್ತಾನ ಮೂಲದ ಐಎಸ್‌ಐ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುವಲ್ಲಿ ಅನ್ಸಾರಿಗೆ ಸಹಾಯ ಮಾಡಿದ ಆರೋಪ ಅಜಮ್ ಮೇಲಿದೆ.

ಸೇನಾ ದಾಖಲೆಗಳನ್ನು ಸಂಗ್ರಹಿಸಿ ರವಾನಿಸುವಲ್ಲಿ ಅಜಮ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಭದ್ರತಾ ಸಂಸ್ಥೆಗಳು ತಮ್ಮ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳನ್ನು ತೀವ್ರಗೊಳಿಸಿವೆ, ಜಮ್ಮು ಮತ್ತು ಕಾಶ್ಮೀರದ ಕಾರ್ಯಕರ್ತರನ್ನು ಮಾತ್ರವಲ್ಲದೆ ಭಾರತದಾದ್ಯಂತ ನಗರಗಳಲ್ಲಿ ಹುದುಗಿರುವ ಸ್ಲೀಪರ್ ಸೆಲ್‌ಗಳನ್ನು ಸಹ ಗುರಿಯಾಗಿಸಿಕೊಂಡಿವೆ.

ಇತ್ತೀಚಿನ ವಾರಗಳಲ್ಲಿ, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಬೆದರಿಕೆಗಳನ್ನು ತಟಸ್ಥಗೊಳಿಸುವ ಗುರಿಯನ್ನು ಹೊಂದಿರುವ ಪ್ಯಾನ್-ಇಂಡಿಯಾ ಸ್ವೀಪ್ ನ ಭಾಗವಾಗಿ ಇಂತಹ ಹಲವಾರು ಮಾಡ್ಯೂಲ್‌ಗಳನ್ನು ಭೇದಿಸಲಾಗಿದೆ. 20ಕ್ಕೂ ಅಧಿಕ ಸ್ಲೀಪರ್ ಏಜೆಂಟ್‌ಗಳು ಮತ್ತು ಗೂಢಚಾರರನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!