ಚಲಿಸುತ್ತಿದ್ದ ರೈಲಿನೆದುರು ಹಾರಿ ಆತ್ಮಹತ್ಯೆಗೆ ಯತ್ನ: ವ್ಯಕ್ತಿ ಸಾವು, ಎರಡೂ ಕಾಲು ಕಳೆದುಕೊಂಡ ಮಹಿಳೆ
ಚಲಿಸುತ್ತಿದ್ದ ರೈಲಿನೆದುರು ಹಾರಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಮಹಿಳೆ ಎರಡೂ ಕಾಲು ಕಳೆದುಕೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಸೋನ್ಹರ್ ಮಹುವ ಪಟ್ಟಿಯ ರೋಹಿತ್ ಕುಮಾರ್ ಯಾದವ್ (28) ಮತ್ತು ಕಾಜಲ್ ಗೌತಮ್ (24) ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಭದೋಹಿ-ವಾರಾಣಸಿ ಗಡಿಯಲ್ಲಿರುವ ಕಂಡಿಯಾ ರೈಲ್ವೆ ಕ್ರಾಸಿಂಗ್ ಬಳಿ ರೈಲಿನ ಮುಂದೆ ಹಾರಿದ್ದಾರೆ ಎಂದು ಸ್ಥಳೀಯ ಎಸ್‌ಎಚ್‌ಒ ರಮೇಶ್ ಕುಮಾರ್ ತಿಳಿಸಿದ್ದಾರೆ.

ಭದೋಹಿ, ಮೇ 22: ಚಲಿಸುತ್ತಿದ್ದ ರೈಲಿನೆದುರು ಹಾರಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಮಹಿಳೆ ಎರಡೂ ಕಾಲು ಕಳೆದುಕೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಸೋನ್ಹರ್ ಮಹುವ ಪಟ್ಟಿಯ ರೋಹಿತ್ ಕುಮಾರ್ ಯಾದವ್ (28) ಮತ್ತು ಕಾಜಲ್ ಗೌತಮ್ (24) ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಭದೋಹಿ-ವಾರಾಣಸಿ ಗಡಿಯಲ್ಲಿರುವ ಕಂಡಿಯಾ ರೈಲ್ವೆ ಕ್ರಾಸಿಂಗ್ ಬಳಿ ರೈಲಿನ ಮುಂದೆ ಹಾರಿದ್ದಾರೆ ಎಂದು ಸ್ಥಳೀಯ ಎಸ್‌ಎಚ್‌ಒ ರಮೇಶ್ ಕುಮಾರ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿಕೆ ಪ್ರಕಾರ, ಇಬ್ಬರೂ ಆಟೋದಿಂದ ಇಳಿದು ಸುಮಾರು 100 ಮೀಟರ್ ದೂರದಲ್ಲಿರುವ ರೈಲ್ವೆ ಹಳಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.
ಗಂಭೀರ ಸ್ಥಿತಿಯಲ್ಲಿ ಕಾಲಜ್ ಅವರನ್ನು ಭದೋಹಿಯ ಮಹಾರಾಜ ಬಲ್ವಂತ್ ಸಿಂಗ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದರೆ, ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಕಾಜಲ್ ಅವರನ್ನು ವಾರಾಣಸಿಯ ಬಿಎಚ್‌ಯುನಲ್ಲಿರುವ ಅಪಘಾತ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಇಬ್ಬರು ಮಕ್ಕಳಿರುವ ವಿವಾಹಿತ ವ್ಯಕ್ತಿ ಯಾದವ್, ಸುಮಾರು ಒಂದು ವರ್ಷದಿಂದ ಕಾಜಲ್ ಗೌತಮ್ ಜೊತೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ, ಮತ್ತು ಇಬ್ಬರೂ ತಮ್ಮ ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಲು ಬಯಸಿದ್ದರು ಎಂದು ಅಧಿಕಾರಿ ಹೇಳಿದರು.
ಮೊಬೈಲ್ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ ಯುವತಿಗೆ ರೈಲು ಡಿಕ್ಕಿ: ಸಾವು ಮೊಬೈಲ್ನಲ್ಲಿ (Mobile) ಮಾತನಾಡುತ್ತಾ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹರಿಹರ (Harihar) ರೈಲು ನಿಲ್ದಾಣದಲ್ಲಿ ನಡೆದಿದೆ. ವಿದ್ಯಾರ್ಥಿನಿ ಶ್ರಾವಣಿ (23) ಮೃತ ದುರ್ದೈವಿ. ಬಳ್ಳಾರಿ ಮೂಲದ ಶ್ರಾವಣಿ ಮೈಸೂರಿನಲ್ಲಿ ಎಂಬಿಎ ಓದುತ್ತಿದ್ದರು.
ಮತ್ತಷ್ಟು ಓದಿ: ರೈಲು ಬರುವಾಗ ಹಳಿಯಲ್ಲಿ ತಬ್ಬಿಕೊಂಡು ನಿಂತ ಅಮ್ಮ-ಮಕ್ಕಳು, ಕ್ಷಣಾರ್ಧದಲ್ಲಿ ನುಚ್ಚುನೂರಾದ ದೇಹ
ಶುಭ ಕಾರ್ಯಕ್ಕೆಂದು ಶ್ರಾವಣಿ ಹರಿಹರದಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಮಂಗಳವಾರ (ಏ.30) ರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿದೆ. ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ವಿಭಾಗದ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Thu, 22 May 25