ಮಹಿಳೆ ಜತೆ ಲಿವಿಂಗ್ ಟುಗೆದರ್ಗೆ ಮನೆಯವರ ವಿರೋಧ, ಯುವಕ ಆತ್ಮಹತ್ಯೆ
ಲಿವಿಂಗ್ ಟು ಗೆದರ್ ಆಧುನಿಕ ಲೋಕದಲ್ಲಿ ಎಲ್ಲವೂ ಮುಕ್ತ ಮುಕ್ತವಾಗುತ್ತಿದೆ. ಸ್ವಂತ ಸ್ವತಂತ್ರ ಮುಕ್ತ ಬದುಕು ಅರಸಿ ಹೊರಡುವ ಯುವ ಮನಸುಗಳು ಲಿವಿಂಗ್ ಟುಗೆದರ್ ಮೊರೆ ಹೋಗುತ್ತಿವೆ. ಆದ್ರೆ, ಈ ಲಿವಿಂಗ್ ಟುಗೆದರ್ಗಳಲ್ಲಿ ದೊಡ್ಡ ಅನಾಹುತಗಳೇ ಸಂಭವಿಸುತ್ತಲ್ಲೇ ಇವೆ. ಅದರಂತೆ ಕಲಬುರಗಿಯಲ್ಲಿ ಯುವಕನೋರ್ವ ಮಹಿಳೆ ಜತೆ ಲಿವಿಂಗ್ ಟುಗೆದರ್ಗೆ ಪೋಷಕರು ವಿರೋಧಿಸಿದ್ದಕ್ಕೆ ಯುವಕನೋರ್ವ ಸಾವಿನ ಹಾದಿ ಹಿಡಿದಿದ್ದಾನೆ.

ಕಲಬುರಗಿ, (ಏಪ್ರಿಲ್ 20): ಮಹಿಳೆ ಜೊತೆ ಲಿವಿಂಗ್ ಟುಗೆದರ್‌ನಲ್ಲಿರಲು (living together) ಮನೆಯವರು ವಿರೋಧಿಸಿದ್ದಕ್ಕೆ ಯುವಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕಲಬುರಗಿ (Kalaburagi) ನಗರದ ನಾಗನಹಳ್ಳಿಯಲ್ಲಿ ನಡೆದಿದೆ. ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ ಯುವಕ ಶಿವಕುಮಾರ್ (28) , ನಾಗನಹಳ್ಳಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಲಿವಿಂಗ್ ಟುಗೆದರ್‌ನಲ್ಲಿದ್ದ ಮಹಿಳೆಗೆ ಕರೆ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮಹಿಳೆಯೂ ಸಹ ಶಿವಕುಮಾರ್ ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಆದರೂ ಪ್ರಯೋಜನವಾಗಿಲ್ಲ. ಇನ್ನು ಶಿವಕುಮಾರ್ನನ್ನು ರಕ್ಷಣೆ ಮಾಡುವ ವೇಳೆ ಬಿದ್ದಿದ್ದರಿಂದ ಮಹಿಳೆಗೆ ಗಾಯಗಳಾಗಿದ್ದು, ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾನು ಮಹಿಳೆಯೊಬ್ಬಳ ಜೊತೆ ಲಿವಿಂಗ್ ಟುಗೆದರ್‌ನಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದ. ಆದರೆ ಮನೆಯವರು ಇದಕ್ಕೆ ವಿರೋಧಿಸಿದ್ದಾರೆ. ಇದರಿಂದ ಬೇಸತ್ತ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿ, ತಾನು ಲಿವಿಂಗ್ ಟುಗೆದರ್‌ನಲ್ಲಿದ್ದ ಮಹಿಳೆಗೆ ಕರೆಮಾಡಿದ್ದಾನೆ. ಬಳಿಕ ಕಲಬುರಗಿ ನಗರದ ನಾಗನಹಳ್ಳಿ ರೈಲ್ವೆ ಹಳಿಯ ಬಳಿ ತೆರಳಿ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದು ಆತನ ರಕ್ಷಣೆಗೆ ಮುಂದಾಗಿದ್ದ ಯುವತಿ ಕೂಡ ಗಾಯಗೊಂಡಿದ್ದು, ಸದ್ಯ ಮಹಿಳೆಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದೆ. ಇನ್ನು ಈ ಬಗ್ಗೆ ವಾಡಿ (Wadi) ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹಕ್ಕೆ ಯುವಕ ಆತ್ಮಹತ್ಯೆ
ಕಲಬುರಗಿ: ಇದೇ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹ್ಮದ್ ಸಾಜೀದ್( 30) ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಮೇಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ ಮಹಮದ್ ಸಾಜೀದ್, ಕೌಟುಂಬಿಕ ಕಲಹದ ಹಿನ್ನಲೆ ಮಾನಸಿಕವಾಗಿ ನೊಂದಿದ್ದ. ಇದರ ನಡುವೆ ಫ್ಯಾಕ್ಟರಿ ಕಡೆಯಿಂದ ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಲು ಮುಂದಾಗಿದ್ದರು. ಇದರಿಂದ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.
IPL ಬೆಟ್ಟಿಂಗ್ ನಡೆಸುತ್ತಿದ್ದವ ಅರೆಸ್ಟ್
ಕಲಬುರಗಿ: ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಶಾಂತ ಜೈನಶೆಟ್ಟಿಯನ್ನು ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರಶಾಂತ ಪ್ರಗತಿ ಕಾಲೋನಿಯ ನಿವಾಸಿಯಾಗಿದ್ದು, ಈತನಿಂದ 40 ಸಾವಿರ ರೂ. ನಗದು, ಮೊಬೈಲ್ ಜಪ್ತಿ ಮಾಡಿದ್ದಾರೆ. ಪ್ರಶಾಂತ ಮೊಬೈಲ್‌ನಲ್ಲೇ ಬೆಟ್ಟಿಂಗ್ ಆ್ಯಪ್ ಇನ್ಸ್ಟಾಲ್ ಮಾಡಿ ಬೆಟ್ಟಿಂಗ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
Published On - 4:08 pm, Sun, 20 April 25