AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೋರ್ವ ವಿಕೃತ ಕಾಮುಕ: ಮಹಿಳೆಯರಿಗೆ ಖಾಸಗಿ ಅಂಗ ತೋರಿಸುವುದೇ ಈತನ ಕಾಯಕ

ಆತ ಇನ್ನೂ 21 ವರ್ಷ ಪ್ರಾಯದ ಯುವಕ. ಆದ್ರೆ ವಿಕೃತ ಕಾಮಿಯಾಗಿದ್ದ. ಕಂಡ ಕಂಡ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ. ಏರಿಯಾದಲ್ಲಿ ಈತನ ಆಟಾಟೋಪ ಮಿತಿ ಮೀರಿತ್ತು..ಇದರಿಂದ ಬೇಸತ್ತು ಬುದ್ಧಿ ಹೇಳಲು ಬಂದವರ ಮೇಲೆಯೇ ಅಟ್ಟಹಾಸ ಮೆರೆದಿದ್ದ‌‌. ಕಲ್ಲು,ದೊಣ್ಣೆಯಿಂದ ಹಲ್ಲೆ ಮಾಡಿದವನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

ಬೆಂಗಳೂರಿನಲ್ಲೋರ್ವ ವಿಕೃತ ಕಾಮುಕ: ಮಹಿಳೆಯರಿಗೆ ಖಾಸಗಿ ಅಂಗ ತೋರಿಸುವುದೇ ಈತನ ಕಾಯಕ
Karthik
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on:Apr 18, 2025 | 8:35 PM

Share

ಬೆಂಗಳೂರು, (ಏಪ್ರಿಲ್ 18): ಈ ಫೋಟೊದಲ್ಲಿರುವ ಯುವಕನ ಹೆಸರು ಕಾರ್ತಿಕ್. ಬೆಂಗಳೂರಿನ (Bengaluru) ಕ್ವೀನ್ಸ್ ರಸ್ತೆಯಲ್ಲಿರುವ ರಾಜೀವ್ ಗಾಂಧಿ ಕಾಲೋನಿ ನಿವಾಸಿ. ಒಳ್ಳೆ ರೀತಿ ಬದಕುವ ದಾರಿ ಕಂಡುಕೊಳ್ಳುವ ವಯಸ್ಸಲ್ಲಿ ವಿಕೃತ ಕಾಮಿಯಾಗಿದ್ದ‌‌.ಈತನ ಕಾಟಕ್ಕೆ ಏರಿಯಾ ಮಹಿಳೆಯರೇ ನಲುಗಿ ಹೋಗಿದ್ದು.ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ‌‌. ಹೌದು…ಕಂಡ ಕಂಡ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ. ಬೆಂಗಳೂರಿನ ಕೆಲವು ಏರಿಯಾದಲ್ಲಿ ಈತನ ಆಟಾಟೋಪ ಮಿತಿ ಮೀರಿತ್ತು. ಆದ್ರೆ, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದರಿಂದ ಏರಿಯಾದಲ್ಲಿ ಮಹಿಳೆಯರು ನಿಟ್ಟುಸಿರುಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ವಿಕೃತ ಕಾಮಿಯ ಹೆಸರು ಕಾರ್ತಿಕ್. ಸಿಲಿಕಾನ್ ಸಿಟಿಯ ಅತ್ಯಂತ ಜನಸಂದಣಿ ಹಾಗೂ ಬಹುತೇಕ ಯುವಜನರೇ ಹೆಚ್ಚಾಗಿ ಓಡಾಡುವಂತಹ ಕ್ವೀನ್ಸ್ ರಸ್ತೆಯಲ್ಲಿರುವ ರಾಜೀವ್ ಗಾಂಧಿ ಕಾಲೋನಿ ನಿವಾಸಿ. ಒಳ್ಳೆ ರೀತಿ ಬದುಕೊ ದಾರಿ ಕಂಡುಕೊಳ್ಳೊ ವಯಸ್ಸಲ್ಲಿ ವಿಕೃತ ಕಾಮಿಯಾಗಿ ಸಮಾಜದಲ್ಲಿ ಮಹಿಳೆಯರು ತಲೆ ಎತ್ತಿಕೊಂಡು ನಡೆಯಲೂ ಆಗದಂತೆ ಕಾಟ ಕೊಡುತ್ತಿದ್ದಾರೆ. ಈತನ ಕಾಟಕ್ಕೆ ಏರಿಯಾ ಮಹಿಳೆಯರೇ ನಲುಗಿ ಹೋಗಿದ್ದು, ಇದೀಗ ಪೊಲೀಸರು ಅವನನ್ನು ಬಂಧಿಸಿದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ‌. ಇನ್ನು ಈ ವಿಕೃತ ಕಾಮಿಯ ಕಾಟಕ್ಕೆ ಬೇಸೆತ್ತು ಬುದ್ಧಿ ಹೇಳಲು ಬಂದವರ ಮೇಲೆಯೇ ಅಟ್ಟಹಾಸ ಮೆರೆಯುತ್ತಿದ್ದ. ಜನರು ಪ್ರಶ್ನೆ ಮಾಡಿ ಹಿಡಿದುಕೊಳ್ಳಲು ಬಂದರೆ ಅವರ ಮೇಲೆಯೇ ಕಲ್ಲು, ದೊಣ್ಣೆ ಹಾಲೋಬ್ಲಾಕ್ ನಿಂದ ಹಲ್ಲೆ ಮಾಡಿದ್ದ. ಇಂತಹ ವಿಕೃತ ಕಾಮಿಯನ್ನು ಪೊಲೀಸರು ಹಿಡಿದು ತಕ್ಕ ಶಾಸ್ತಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿ ಕಾಮುಕ ಪರಾರಿ

ಇತ್ತೀಚೆಗೆ ಅಂದ್ರೆ ಏಪ್ರಿಲ್ 13 ರಂದು ರಾತ್ರಿ 10.30ರ ಸುಮಾರಿಗೆ ಎದುರು ಮನೆಯ ಮಹಿಳೆ ಊಟ ಮುಗಿಸಿ ಮಲಗಲು ಎರಡನೇ ಮಹಡಿಗೆ ತೆರಳುತ್ತಿದ್ದರು. ಈ ವೇಳೆ ತನ್ನ ಮನೆಯಿಂದ ಆರೋಪಿ, ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿದ್ದಾನೆ. ಪ್ರಶ್ನೆ ಮಾಡಿದ್ದ ಮಹಿಳೆ ಪತಿ,ಸ್ಥಳೀಯರಾದ ರವೀಂದ್ರ ಸೇರಿದಂತೆ 7 ಕ್ಕೂ ಹೆಚ್ಚು ಜನರ ಮೇಲೆ ಮನೆಯಲ್ಲಿದ್ದ ಹಾಲೋಬ್ಲಾಕ್,ಹೂವಿನ ಪಾಟ್,ಮಚ್ಚು,ಕಿಟಕಿ ಗಾಜು ಎತ್ತಿ ಹಾಕಿ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಜಗಳ ಬಿಡಿಸಲು ಬಂದ ತನ್ನ ತಾಯಿಗೂ ಹೊಡೆದಿದ್ದು, ಸದ್ಯ ರವೀಂದ್ರ ಹಾಗೂ ಕಾರ್ತಿಕ್ ತಾಯಿ‌ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ
Image
ಬೆಂಗಳೂರು: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಕಾಮುಕ
Image
ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್ ಆಗುತ್ತಿದ್ದವ ಅರೆಸ್ಟ್
Image
ಎತ್ತ ಸಾಗುತ್ತಿದೆ ಬೆಂಗಳೂರು? ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ
Image
ಮದುವೆ, ಹನಿಮೂನ್‌ಗಾಗಿ ಕಂಪನಿಗೆ 10.6 ಕೋಟಿ ರೂ. ವಂಚಿಸಿದ ವ್ಯಕ್ತಿ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ..ಈ ವೇಳೆ ಕಾರ್ತಿಕ್ ಗೆ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗವನ್ನು ಮಹಿಳೆಯರಿಗೆ ತೋರಿಸಿದ್ರೆ ಏನೋ ಒಂದು ವಿಕೃತ ಆನಂದವಂತೆ. ಇದೇ ರೀತಿ ಪದೇ ಪದೇ ಪುಂಡಾಟ ಮೆರೆತಿದ್ದವನ ಮೇಲೆ ವಿಧಾನಸೌಧ, ಶಿವಾಜಿನಗರ ಪೊಲೀಸ್ ಠಾಣೆ ಸೇರಿದಂತೆ ಹಲವೆಡೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿತ್ತು. ಈತನ ಕಾಟ ಮತ್ತೆ ಹೆಚ್ಚಾಗ್ತಿದ್ದಂತೆ ಶಿವಾಜಿನಗರ ಠಾಣೆ ಪೊಲೀಸರು ರೌಡಿ ಶೀಟ್ ಓಪನ್ ಮಾಡಿ 5 ಲಕ್ಷ ರೂಪಾಯಿಯ ಬಾಂಡ್ ಬರೆಸಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ಈತನ ಬಂಧನದಿಂದ ಏರಿಯಾ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಬಿಡುಗಡೆ ಬಳಿಕ ಮತ್ತೆಷ್ಟು ಕಾಟ ಕೊಡುತ್ತಾನೋ ಎನ್ನುವ ಭಯವೂ ಇದೆ. ಹೀಗಾಗಿ ಪೊಲೀಸರು ಆರೋಪಿಗೆ ಬುದ್ಧಿ ಕಲಿಸಿ ಮಹಿಳೆಯರಲ್ಲಿನ ಭಯ ಹೋಗಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:33 pm, Fri, 18 April 25