Viral News: ಮದುವೆ, ಹನಿಮೂನ್‌ಗಾಗಿ ಕಂಪನಿಂದ 10.6 ಕೋಟಿ ರೂ. ದೋಚಿದ ವ್ಯಕ್ತಿ

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 32 ವರ್ಷದ ವ್ಯಕ್ತಿಯೊಬ್ಬ ತನ್ನ ಕಂಪನಿಗೆ 10.6 ಕೋಟಿ ರೂ. ವಂಚಿಸಿದ್ದ ಮತ್ತು ಈ ಹಣದಿಂದ ಮೊದಲು ತನ್ನ ಸಾಲವನ್ನು ತೀರಿಸಿದ್ದಾನೆ. ಬಳಿಕ ಉಳಿದ ಹಣವನ್ನು ತನ್ನ ಮದುವೆ ಮತ್ತು ಹನಿಮೂನ್‌ಗಾಗಿ ಬಳಸಿದ್ದಾನೆ ಎಂದು ತಿಳಿದುಬಂದಿದೆ.

Viral News: ಮದುವೆ, ಹನಿಮೂನ್‌ಗಾಗಿ ಕಂಪನಿಂದ 10.6 ಕೋಟಿ ರೂ. ದೋಚಿದ ವ್ಯಕ್ತಿ
Follow us
ಅಕ್ಷತಾ ವರ್ಕಾಡಿ
|

Updated on:Jul 06, 2024 | 10:21 AM

ಪ್ರತಿಯೊಬ್ಬರಿಗೂ ತಮ್ಮ ಮದುವೆ  ಐಷಾರಾಮಿ ರೀತಿಯಲ್ಲಿ ನಡೆಯಬೇಕು ಎಂಬ ಕನಸಿರುತ್ತದೆ. ಅದಕ್ಕಾಗಿ ಲಕ್ಷ ಕೋಟಿಯಷ್ಟು ಹಣ ಖರ್ಚು ಮಾಡುವುದುಂಟು. ಇತ್ತೀಚಿಗೆ ಇಂತಹದ್ದೇ ಒಂದು ಕಥೆ ಜನರಲ್ಲಿ ಚರ್ಚೆಯಾಗುತ್ತಿದೆ. ವ್ಯಕ್ತಿಯೊಬ್ಬ ತನ್ನ ಮದುವೆ ಮತ್ತು ಹನಿಮೂನ್‌ಗಾಗಿ ಕಂಪನಿಗೆ 10.6 ಕೋಟಿ ರೂ.ಗಳನ್ನು ವಂಚಿಸಿದ್ದಾನೆ.

ಇಂಗ್ಲಿಷ್ ವೆಬ್‌ಸೈಟ್ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 32 ವರ್ಷದ ವ್ಯಕ್ತಿ ತನ್ನ ಕಂಪನಿಗೆ 10.6 ಕೋಟಿ ರೂಪಾಯಿಗಳನ್ನು ವಂಚಿಸಿದ್ದ ಮತ್ತು ಈ ಹಣದಿಂದ ಅವನು ಮೊದಲು ತನ್ನ ಸಾಲವನ್ನು ತೀರಿಸಿದ್ದಾನೆ. ಬಳಿಕ ಉಳಿದ ಹಣವನ್ನು ತನ್ನ ಮದುವೆ ಮತ್ತು ಹನಿಮೂನ್‌ಗಾಗಿ ಬಳಸಿದ್ದಾನೆ. ಈ ಹಣದಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಎರಡು ಸಾಲವನ್ನು ತೀರಿಸಿದ್ದಾನೆ ಎಂದು ವರದಿ ತಿಳಿಸಿದೆ.

ಇಷ್ಟೇ ಅಲ್ಲ, ಉಳಿದ ಹಣವನ್ನು ತನ್ನದೆಂದು ಪರಿಗಣಿಸಿ 15 ಲಕ್ಷ ರೂ.ಗಳನ್ನು ಷೇರು ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ 15 ಲಕ್ಷ ರೂ. ಅಷ್ಟೇ ಅಲ್ಲ, ಈ ಹಣದಿಂದ 16 ಲಕ್ಷ ರೂಪಾಯಿ ಖರ್ಚು ಮಾಡಿ ಆ ವ್ಯಕ್ತಿ ಮದುವೆ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಹನಿಮೂನ್ ಗೆ 3.5 ಲಕ್ಷ ರೂ. ಖರ್ಚು ಮಾಡಿದ್ದಾನೆ.

ಇದನ್ನೂ ಓದಿ: ವಿಶ್ವಕಪ್​​​ ಕಲಿಗಳನ್ನು ನೋಡಲು ಮರವೇರಿ ಕುಳಿತ ಕ್ರಿಕೆಟ್‌ ಪ್ರೇಮಿ; ಫೋಟೋ ವೈರಲ್‌

ಈ ವಂಚನೆ ಪ್ರಕರಣದಲ್ಲಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು, ತನ್ನ ಸಹೋದರಿ, ಸ್ನೇಹಿತ ಮತ್ತು ಹೆಂಡತಿಯ ಖಾತೆಗಳನ್ನು ಬಳಸಿದ್ದ ಎಂದು ತಿಳಿದುಬಂದಿದೆ. ಏಪ್ರಿಲ್ ತಿಂಗಳಲ್ಲಿ ಆತನನ್ನು ಬಂಧಿಸಲಾಗಿದ್ದು,ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಅಲ್ಲಿ ತನ್ನ ದುರಾಸೆಯಿಂದ ಕಂಪನಿಗೆ ನಷ್ಟ ಉಂಟು ಮಾಡಿ ಕಂಪನಿಯಿಂದ ಇಷ್ಟು ದೊಡ್ಡ ಕಳ್ಳತನ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ. ಸದ್ಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಆರಂಭಿಸಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:00 am, Sat, 6 July 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್