Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವಿಶ್ವಕಪ್​​​ ಕಲಿಗಳನ್ನು ನೋಡಲು ಮರವೇರಿ ಕುಳಿತ ಕ್ರಿಕೆಟ್‌ ಪ್ರೇಮಿ; ಫೋಟೋ ವೈರಲ್‌

ನಿನ್ನೆ (ಜುಲೈ 4) ಮುಂಬೈನಲ್ಲಿ ಟಿ20 ವಿಶ್ವಕಪ್‌ ವಿಜೇತ ಭಾರತೀಯ ಕ್ರಿಕೆಟ್‌ ತಂಡದ ವಿಜಯೋತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಕ್ರಿಕೆಟ್‌ ಪ್ರೇಮಿಗಳು ಈ ಒಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಅಭಿಮಾನಿಗಳ ನಡುವೆ ಹುಚ್ಚು ಅಭಿಮಾನಿಯೊಬ್ಬ ನಾನು ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕೆಂದು ಮರವೇರಿ ಕುಳಿತು ಮೆರವಣಿಗೆಯನ್ನು ವೀಕ್ಷಿಸಿದ್ದಾನೆ. ಈತ ಮರವೇರಿ ಕುಳಿತ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Viral: ವಿಶ್ವಕಪ್​​​ ಕಲಿಗಳನ್ನು ನೋಡಲು ಮರವೇರಿ ಕುಳಿತ ಕ್ರಿಕೆಟ್‌ ಪ್ರೇಮಿ; ಫೋಟೋ ವೈರಲ್‌
ವೈರಲ್​ ಪೋಸ್ಟ್​​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 05, 2024 | 2:20 PM

ಟಿ20 ವಿಶ್ವಕಪ್‌ ಗೆದ್ದ 5 ದಿನಗಳ ಬಳಿಕ ಟೀಂ ಇಂಡಿಯಾ ತಂಡ ತವರಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ದೊರಕಿದೆ. ಜೊತೆಗೆ ನಿನ್ನೆ ಸಂಜೆ (ಜುಲೈ 04) ಮುಂಬೈನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು. ಈ ವಿಜಯೋತ್ಸವದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ್ದರು. ನೂಕು ನುಗ್ಗಲುಗಳ ನಡುವೆ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಪ್ರಯತ್ನಿಸುತ್ತಿದ್ದಾಗ, ಹುಚ್ಚು ಅಭಿಮಾನಿಯೊಬ್ಬ ಮರವೇರಿ ಕುಳಿತು ವಿಜಯೋತ್ಸವ ಮೆರವಣಿಗೆ ವೀಕ್ಷಿಸಿದ್ದಾನೆ. ಈತನನ್ನು ಕಂಡು ತೆರೆದ ವಾಹನದಲ್ಲಿದ್ದ ಆಟಗಾರರು ಫುಲ್‌ ಶಾಕ್‌ ಆಗಿದ್ದಾರೆ. ಈ ಫೋಟೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮುಂಬೈನಲ್ಲಿ ತೆರೆದ ಬಸ್‌ನಲ್ಲಿ ವಿಶ್ವಕಪ್‌ ವಿಜಯೋತ್ಸವ ಮೆರವಣಿಗೆ ನಡೆದಿದ್ದು, ನೆಚ್ಚಿನ ಆಟಗಾರರನ್ನು ನೋಡಲು ಮರಿನ್‌ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೂ ಜನಸಾಗರವೇ ತುಂಬಿತ್ತು. ಈ ನಡುವೆ ಕ್ರಿಕೆಟ್‌ ಅಭಿಮಾನಿಯೊಬ್ಬ ಮೆರವಣಿಗೆ ಸಂದರ್ಭದಲ್ಲಿ ಮರವೇರಿ ಕುಳಿತು, ತನ್ನ ನೆಚ್ಚಿನ ಆಟಗಾರರನ್ನು ಬಹಳ ಹತ್ತಿರದಿಂದ ನೋಡಿ ಖುಷಿಪಟ್ಟಿದ್ದಾನೆ. ಮಂಗನಂತೆ ಮರವೇರಿ ಕುಳಿತ ಈತನ ಫೋಟೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ವೈರಲ್​​ ಪೋಸ್ಟ್​​​ ( ಎಕ್ಸ್​​​​ ಖಾತೆ)

ಮುಫದಲ್‌ (mufaddal_vohra) ಎಂಬವರು ಈ ಕುರಿತ ಸ್ವಾರಸ್ಯಕರ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಮರದ ಮೇಲೆ ಕುಳಿತಿದ್ದ ಈ ವ್ಯಕ್ತಿಯನ್ನು ಕಂಡು ಟೀಂ ಇಂಡಿಯಾ ಕ್ರಿಕೆಟಿಗರು ಹೆದರಿದರು” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫುಲ್‌ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಲವರ್ಸ್, ಮಳೆಯಲ್ಲಿ ನೆನೆಯುತ್ತಾ ಫಿಲ್ಮಿ ಸ್ಟೈಲ್‌ನಲ್ಲಿ ಲಿಪ್​​​​ ಲಾಕ್

ವೈರಲ್‌ ಫೋಟೋದಲ್ಲಿ ನಿನ್ನೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಹುಚ್ಚು ಅಭಿಮಾನಿಯೊಬ್ಬ ಮರವೇರಿ ಕುಳಿತು ತನ್ನ ನೆಚ್ಚಿನ ಕ್ರಿಕೆಟಿಗರ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋವನ್ನು ಕಾಣಬಹುದು.

ಜುಲೈ 04 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿನ್ನೆಯಿಂದ ಈ ಯುವಕನೇ ಸಖತ್‌ ಫೇಮಸ್‌ ಆಗ್ತಿದ್ದಾನೆ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Fri, 5 July 24

ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ