English Alphabet 27th Latter: ಇಂಗ್ಲೀಷ್‌ ‌ ವರ್ಣಮಾಲೆಯಲ್ಲಿ 26 ಅಲ್ಲ 27 ಅಕ್ಷರಗಳಿವೆ, ಆ ಇಪ್ಪತ್ತೇಳನೇ ಅಕ್ಷರ ಯಾವುದು?

Ampersand: ನಮಗೆಲ್ಲ ತಿಳಿದಿರುವಂತೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ A ಯಿಂದ Z ವರೆಗೆ ಒಟ್ಟು 26 ಅಕ್ಷರಗಳಿವೆ. ಆದರೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ 27 ಅಕ್ಷರಗಳು ಇದ್ದಂತಹ ಕಾಲವಿತ್ತಂತೆ. ಹಾಗಾದರೆ ಈ ಹಿಂದೆ ಇದ್ದಂತಹ ಆ 27 ನೇ ಅಕ್ಷರ ಯಾವುದು? ಅದನ್ನು ಹೇಗೆ ಉಚ್ಛರಿಸಲಾಗುತ್ತಿತ್ತು ಎಂಬುದನ್ನು ತಿಳಿಯೋಣ ಬನ್ನಿ.

English Alphabet 27th Latter: ಇಂಗ್ಲೀಷ್‌ ‌ ವರ್ಣಮಾಲೆಯಲ್ಲಿ 26 ಅಲ್ಲ 27 ಅಕ್ಷರಗಳಿವೆ, ಆ ಇಪ್ಪತ್ತೇಳನೇ ಅಕ್ಷರ ಯಾವುದು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2024 | 4:03 PM

ನಮಗೆಲ್ಲ ತಿಳಿದಿರುವಂತೆ ಆಧುನಿಕ ಇಂಗ್ಲೀಷ್‌ ವರ್ಣಮಾಲೆಯಲ್ಲಿ 26 ಅಕ್ಷರಗಳಿವೆ. ಶಾಲೆಯಲ್ಲಿಯೂ A ಯಿಂದ ಹಿಡಿದು Z ವರೆಗೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ ಒಟ್ಟು 26 ಅಕ್ಷರಗಳಿವೆ ಎಂಬುದನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿಕೊಡುತ್ತಾರೆ. ಆದರೆ ನಿಮಗೆ ಗೊತ್ತಾ ಒಂದು ಕಾಲದಲ್ಲಿ ಇಂಗ್ಲೀಷ್‌ ವರ್ಣಮಾಲೆಯಲ್ಲಿ 27 ಅಕ್ಷರಗಳಿತ್ತಂತೆ. ಹಾಗಾದರೆ ಆ ಇಪ್ಪತ್ತೇಳನೆ ಅಕ್ಷರ ಯಾವುದೂ ಎಂಬುದನ್ನು ನೋಡೋಣ ಬನ್ನಿ.

ಇಂಗ್ಲೀಷ್‌ ವರ್ಣಮಾಲೆಯ 27 ನೇ ಅಕ್ಷರ ಯಾವುದು?

ʼ&ʼ ಇಂಗ್ಲೀಷ್‌ ವರ್ಣಮಾಲೆಯ 27 ನೇ ಅಕ್ಷರವಾಗಿದೆ. ಇದನ್ನು ಆಂಪರ್ಸಂಡ್‌ ಎಂದು ಉಚ್ಛರಿಸಲಾಗುತ್ತಿತ್ತು. ಬ್ರಿಟಾನಿಕಾ ವೆಬ್‌ಸೈಟ್‌ ವರದಿಯ ಪ್ರಕಾರ, 1835 ವರೆಗೆ ಆಂಪರ್ಸೆಂಡ್‌ (&) ಅನ್ನು ವರ್ಣಮಾಲೆಯ 27 ಅಕ್ಷರವೆಂದು ಪರಿಗಣಿಸಲಾಗಿತ್ತು. ಅಲ್ಲಿಯವೆರೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವರ್ಣಮಾಲೆಯಲ್ಲಿ A ಯಿಂದ & ವರೆಗೆ 27 ಅಕ್ಷರಗಳಿವೆ ಎಂಬುದನ್ನು ಕಲಿಸಿಕೊಡುತ್ತಿದ್ದರು. ಆಂಪರ್ಸೆಂಡ್‌ (&) ಲ್ಯಾಟಿನ್‌ ಪದವಾದ ʼetʼ ನಿಂದ ಮಾಡಲ್ಪಟ್ಟಿದೆ. ಮತ್ತು ಇದನ್ನು ʼಪರ್‌ ಸೆʼ ಎಂದು ಕರೆಯಲಾಯಿತು. ನಂತರ ಇದು ಉಚ್ಚಾರಣೆಯಲ್ಲಿ ʼಆಂಪರ್ಸಂಡ್ʼ ಎಂದು ಧ್ವನಿಸಲು ಪ್ರಾರಂಭಿಸಿತು. ಲ್ಯಾಟಿನ್‌ ಭಾಷೆಯಲ್ಲಿ ಪರ್‌ ಸೆ ಎಂದರೆ ಇತರರಿಂದ ಪ್ರತ್ಯೇಕಿಸಲ್ಪಟ್ಟ ಅಥವಾ ಏಕಾಂಗಿ ಎಂದರ್ಥ.

ಇದನ್ನೂ ಓದಿ: ವಿಶ್ವಕಪ್​​​ ಕಲಿಗಳನ್ನು ನೋಡಲು ಮರವೇರಿ ಕುಳಿತ ಕ್ರಿಕೆಟ್‌ ಪ್ರೇಮಿ; ಫೋಟೋ ವೈರಲ್‌

1835 ರಲ್ಲಿ ಇಂಗ್ಲೀಷ್‌ ವರ್ಣಮಾಲೆಯನ್ನು ಬದಲಾಯಿಸಲಾಯಿತು ಮತ್ತು ʼ&ʼ ಅಕ್ಷರವನ್ನು ತೆಗೆದು ಹಾಕಿ 19 ನೇ ಶತಮಾನದ ಅಂತ್ಯದ ವೇಳೆಗೆ ಆಂಪರ್ಸೆಂಡ್‌ ಅಕ್ಷರವನ್ನು ಕೇವಲ ಒಂದು ಚಿಹ್ನೆ ಎಂದು ಪರಿಗಣಿಸಲಾಯಿತು. ಕ್ರಮೇಣ ʼ&ʼ ಚಿಹ್ನೆ ಮಾರ್ಕ್ಸ್‌ & ಸ್ಪೆನ್ಸರ್‌, H&M ಇತ್ಯಾದಿ ಕಂಪೆನಿಗಳ ಹೆಸರುಗಳಲ್ಲಿ ಮತ್ತು ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭವಾಯಿತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು