AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಫುಲ್‌ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಲವರ್ಸ್, ಮಳೆಯಲ್ಲಿ ನೆನೆಯುತ್ತಾ ಫಿಲ್ಮಿ ಸ್ಟೈಲ್‌ನಲ್ಲಿ ಲಿಪ್​​​​ ಲಾಕ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವಿಡಿಯೋ ದೃಶ್ಯಗಳು ನಮ್ಮನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಟೆರೆಸ್‌ ಮೇಲೆ ನಿಂತು ಜೋರು ಮಳೆಯಲ್ಲಿ ನೆನೆಯುತ್ತಾ ಜೋಡಿ ಹಕ್ಕಿಯೊಂದು ಫಿಲ್ಮಿ ಸ್ಟೈಲ್‌ನಲ್ಲಿ ಲಿಪ್‌ ಟು ಲಿಪ್‌ ಕಿಸ್‌ ಮಾಡಿದ್ದಾರೆ.

Video: ಫುಲ್‌ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಲವರ್ಸ್, ಮಳೆಯಲ್ಲಿ ನೆನೆಯುತ್ತಾ ಫಿಲ್ಮಿ ಸ್ಟೈಲ್‌ನಲ್ಲಿ ಲಿಪ್​​​​ ಲಾಕ್
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Jul 05, 2024 | 12:20 PM

Share

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರೇಮಿಗಳ ಸರಸ ಸಲ್ಲಾಪಗಳಿಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚಾಗಿ ಕಾಣಸಿಗುತ್ತಿರುತ್ತಿರುತ್ತವೆ. ಮೆಟ್ರೋದಲ್ಲಿ, ಬಸ್ಸಿನಲ್ಲಿ ಅಷ್ಟೇ ಏಕೆ ಚಲಿಸುತ್ತಿರುವ ಬೈಕ್‌ನಲ್ಲೂ ಪ್ರೇಮಿಗಳು ರೊಮ್ಯಾನ್ಸ್‌ ಮಾಡಿದ ವಿಡಿಯೋಗಳು ವೈರಲ್‌ ಆಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದವು. ಇದೀಗ ಪ್ರಣಯ ಪಕ್ಷಿಗಳಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಮನೆಯ ಟೆರೇಸ್‌ ಮೇಲೆ ಸೋನೆ ಮಳೆಯಲ್ಲಿ ನೆನೆಯುತ್ತಾ ಜೋಡಿ ಹಕ್ಕಿಯೊಂದು ಫಿಲ್ಮಿ ಸ್ಟೈಲ್‌ನಲ್ಲಿ ಲಿಪ್‌ ಟು ಲಿಪ್‌ ಕಿಸ್‌ ಮಾಡಿದ್ದಾರೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಬಾರಿ ಮೇಲೆ ಬೆರೆಳಿಟ್ಟುಕೊಂಡಿದ್ದಾರೆ.

ಈ ಮಳೆಗೂ ಪ್ರೇಮಿಗಳಿಗೂ ಅವಿನಾಭಾವ ಸಂಬಂಧ ಎಂಬಂತೆ ಜೋಡಿ ಹಕ್ಕಿಯೊಂದು ಮೈಮರೆತು ಮಳೆಯಲ್ಲಿ ನೆನೆಯುತ್ತಾ ರೊಮ್ಯಾನ್ಸ್‌ ಮಾಡಿದ್ದು, ಈ ದೃಶ್ಯವನ್ನು ಯಾರೋ ಕದ್ದು ಮುಚ್ಚಿ ರೆಕಾರ್ಡ್‌ ಮಾಡಿದ್ದಾರೆ. ಈ ವಿಡಿಯೋವನ್ನು ವಿಜಯ್‌ (veejuparmar) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ (ಎಕ್ಸ್​​​ ಖಾತೆ )

ವೈರಲ್‌ ವಿಡಿಯೋದಲ್ಲಿ ಟೆರೇಸ್‌ ಮೇಲಿನ ಕಾಂಪೌಂಡ್‌ ಈ ಬದಿಯಲ್ಲಿ ಹುಡುಗಿ ಹಾಗೂ ಆ ಬದಿಯಲ್ಲಿ ಯುವಕನೊಬ್ಬ ಮಳೆಯಲ್ಲಿ ನಿಂತಿರುವುದನ್ನು ಕಾಣಬಹುದು. ಹೀಗೆ ಖುಷಿಯಲ್ಲಿ ಮಳೆಯಲ್ಲಿ ನೆನೆಯುತ್ತಾ ಆ ಯುವತಿ ಸೀದಾ ಬಂದು ಕಾಂಪೌಂಡ್‌ ಹತ್ತಿ ಯುವಕನಿಗೆ ಪ್ರೀತಿಯ ಮುತ್ತನ್ನು ನೀಡಿದ್ದಾಳೆ.

ಇದನ್ನೂ ಓದಿ: ಹಸುವನ್ನು ಬಿಡದ ಕಾಮುಕ; ಗೋವಿನ ಮೇಲೆ ಅತ್ಯಾಚಾರ ಎಸಗಿದ ಪಾಪಿ

ಜುಲೈ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಈ ದೃಶ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Fri, 5 July 24