ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಜಾತಿಗಣತಿ ವರದಿ ಬಗ್ಗೆ ಇಬ್ರಾಹಿಂ ಹೇಳಿದ್ದಿಷ್ಟು
ಕರ್ನಾಟಕದಲ್ಲಿ ಜಾತಿಗಣತಿ ವರದಿ ಜ್ವಾಲೆ ಸ್ಫೋಟಕಗೊಂಡಿದ್ದು, ಪರ ವಿರೋಧದ ಚರ್ಚೆಗಳು ಜೋರಾಗಿವೆ. ಇನ್ನು ಈ ಬಗ್ಗೆ ಟಿವಿ9ಗೆ ಹಿರಿಯ ರಾಜಕಾರಣಿ ಸಿ.ಎಂ ಇಬ್ರಾಹಿಂದ ಪ್ರತಿಕ್ರಿಯಿಸಿದ್ದು, ಮುಸಲ್ಮಾನರ ಜನಸಂಖ್ಯೆ ಇನ್ನೂ ಹೆಚ್ಚಿದೆ. ನಾವು 75 ಲಕ್ಷ ಅಲ್ಲ, 1 ಕೋಟಿಗೂ ಅಧಿಕ ಜನಸಂಖ್ಯೆ ಇದ್ದೇವೆ. ಅತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ,
ಬೆಂಗಳೂರು, (ಏಪ್ರಿಲ್ 18): ಕರ್ನಾಟಕದಲ್ಲಿ ಜಾತಿಗಣತಿ ವರದಿ ಜ್ವಾಲೆ ಸ್ಫೋಟಕಗೊಂಡಿದ್ದು, ಪರ ವಿರೋಧದ ಚರ್ಚೆಗಳು ಜೋರಾಗಿವೆ. ಇನ್ನು ಈ ಬಗ್ಗೆ ಟಿವಿ9ಗೆ ಹಿರಿಯ ರಾಜಕಾರಣಿ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದು, ಮುಸಲ್ಮಾನರ ಜನಸಂಖ್ಯೆ ಇನ್ನೂ ಹೆಚ್ಚಿದೆ. ನಾವು 75 ಲಕ್ಷ ಅಲ್ಲ, 1 ಕೋಟಿಗೂ ಅಧಿಕ ಜನಸಂಖ್ಯೆ ಇದ್ದೇವೆ. ಅತಂಕಪಡುವ ಅವಶ್ಯಕತೆ ಇಲ್ಲ. ಸಮೀಕ್ಷೆ ಮಾಡಿ ವರದಿ ಸಿದ್ದಪಡಿಸಿದ್ದಾರೆ. ಯಾಕೆ ವಿರೋಧ ಮಾಡ್ತಿದ್ದಾರೆ ಅಂತ ನನಗೆ ಅರ್ಥ ಆಗ್ತಿಲ್ಲ. ಜಾತಿ ಆಧಾರದ ಮೇಲೆ ಪಾರ್ಲಿಮೆಂಟ್ ಸೀಟ್ ಕೊಡುವುದಾದರೆ ವಿರೋಧ ಮಾಡಲಿ. ನಾವು ಸೌತೆಕಾಯಿ ಮಾರುವವರು ಅಂತ ಬಿಜೆಪಿಯವರು ಹೇಳ್ತಾರೆ. ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ. ಈ ವರದಿ ಖುಷಿಯೂ ಇಲ್ಲ, ದುಃಖವೂ ಇಲ್ಲ
ಈಗ ಕುಮಾರಸ್ವಾಮಿಗೆ ಒಬ್ಬ ಮಗ. ನನಗೆ 9 ಜನ ಮಕ್ಕಳಿದ್ದಾರೆ. ನಾನು ಒಬ್ಬ ಮಗ ಅಂತ ಹೇಳೋಕೆ ಆಗುತ್ತಾ? ಯಾರೇ ಅಂಗಡಿ ತೆರೆದಿದ್ದಾರೆ, ಒಳ್ಳೆಯದಾಗಲಿ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.