ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳಮುಖಿಯ ಬರ್ಬರ ಹತ್ಯೆ
ಬೆಂಗಳೂರಿನ ಕೆ.ಆರ್.ಪುರಂನ ಬಸವೇಶ್ವರನಗರದಲ್ಲಿ 40 ವರ್ಷದ ಮಂಗಳಮುಖಿ ತನುಶ್ರೀ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕರವೇ ಕಾರ್ಯಕರ್ತೆಯಾಗಿದ್ದ ತನುಶ್ರೀ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಪತಿ ಜಗನ್ನಾಥ್ ಮತ್ತು ಮನೆಗೆಲಸದಾಕೆ ಪರಾರಿಯಾಗಿದ್ದಾರೆ. ತನುಶ್ರೀ ಸಂಗಮ ಎಂಬ NGO ಯನ್ನು ನಡೆಸುತ್ತಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಏಪ್ರಿಲ್ 20: ಮಂಗಳಮುಖಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ (Transgender) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಕೆ.ಆರ್.ಪುರಂನ ಬಸವೇಶ್ವರನಗರದ (Basaveshwarnagar) ಗಾಯತ್ರಿ ಲೇಔಟ್ನಲ್ಲಿ ನಡೆದಿದೆ. ಕರವೇ ಕಾರ್ಯಕರ್ತೆ ಮಂಗಳಮುಖಿ ತನುಶ್ರೀ (40) ಮೃತ ದುರ್ದೈವಿ. ಮೂರು ತಿಂಗಳ ಹಿಂದೆ ಜಗನ್ನಾಥ್ ಎಂಬುವರ ಜೊತೆ ತನುಶ್ರೀ ವಿವಾಹವಾಗಿತ್ತು. ಮೂರು ದಿನಗಳ ಹಿಂದೆ ಹಣ ಮತ್ತು ಚಿನ್ನಾಭರಣಕ್ಕಾಗಿ ತನುಶ್ರೀಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಯಾದ ತನುಶ್ರೀಯ ಪತಿ ಜಗನ್ನಾಥ್ ಮತ್ತು ಮನೆಗೆಲಸದಾಕೆ ಪರಾರಿಯಾಗಿದ್ದಾರೆ. ತನುಶ್ರೀ ಅವರು ಸಂಗಮ ಎಂಬ ಹೆಸರಿನ ಎನ್ಜಿಒ ನಡೆಸುತ್ತಿದ್ದರು. ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಅಪಘಾತದಲ್ಲಿ ಇಬ್ಬರ ಸಾವು
ಆಟೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಬಳಿ ನಡೆದಿದೆ. ಆಟೋದಲ್ಲಿದ್ದ ಓರ್ವ ಪ್ರಯಾಣಿಕ ಹಾಗೂ ಬೈಕ್ ಸವಾರ ಮೃತ ದುರ್ದೈವಿಗಳು. ಬಸವರಾಜ್ (55), ಅಂಜಪ್ಪ (45) ಮೃತ ದುರ್ದೈವಿಗಳು
ಆಟೋ ಯಾದಗಿರಿ ನಗರದಿಂದ ಮುಂಡರಗಿ ಕಡೆಗೆ ಹೊರಟಿತ್ತು. ಆಟೋದಲ್ಲಿದ್ದ ಇನ್ನುಳಿದ ನಾಲ್ವರಿಗೆ ಗಂಭೀರವಾಗಿ ಗಾಯವಾಗಿದ್ದು, ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರನ ಹತ್ಯೆ ಯತ್ನ ಹಿಂದೆ ಶಾರ್ಪ್ಶೂಟರ್? ರಿಕ್ಕಿ ಮೇಲಿನ ಗುಂಡಿನ ದಾಳಿಗೆ ಅಸಲಿ ಕಾರಣವೇನು?
ಪಾದಚಾರಿ ಯುವಕನಿಗೆ ಟ್ರಾಕ್ಟರ್ ಡಿಕ್ಕಿ
ದಾವಣಗೆರೆ: ಟ್ರ್ಯಾಕ್ಟರ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆ.ಪಿ.ಸ್ವಾಮಿ (18) ಮೃತ ಯುವಕ. ಚನ್ನಗಿರಿ ತಾಲೂಕಿನ ಕೊಂಡದಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕ್ರಿಕೆಟ್ ಆಟವಾಡಿ ಕೆಪಿ ಸ್ವಾಮಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ತಲೆಗೆ ಪೆಟ್ಟಾಗಿ ಕೆಪಿ ಸ್ವಾಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Sun, 20 April 25