ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಮಗು ಜನನ: ಅಪ್ರಾಪ್ತೆಗೆ ಹುಟ್ಟಿದ ಶಿಶು ಕಸದ ಬುಟ್ಟಿಗೆ..!
ರಾಜಧಾನಿ ಬೆಂಗಳೂರಿನಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ, ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿದ್ದು, ಇದೀಗ ಅಪ್ರಾಪ್ತೆಗೆ ಮಗು ಜನಿಸಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶುವನ್ನು ತಿಪ್ಪೆಗೆ ಎಸದಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಅಪ್ರಾಪ್ತ ಇಬ್ಬರು ಪ್ರೀತಿಯಲ್ಲಿ ಬಿದ್ದು ಪುಟ್ಟ ಕಂದಮ್ಮನನ್ನೇ ಬಲಿಕೊಟ್ಟಿದ್ದಾರೆ. ಅಚ್ಚರಿ ಏನೆಂದರೆ ಸ್ನೇಹಿತರೇ ಸೇರಿಕೊಂಡು ಡೆಲಿವರಿ ಮಾಡಿರೋ ಬಗ್ಗೆ ಗೊತ್ತಾಗಿದೆ.

ಬೆಂಗಳೂರು, (ಏಪ್ರಿಲ್ 18): ರಾಜಧಾನಿ ಬೆಂಗಳೂರಿನಲ್ಲೊಂದು (Bengaluru) ಕರುಣಾಜನಕ ಘಟನೆ ನಡೆದಿದೆ. ಹದಿಹರೆಯದ ಇಬ್ಬರು ಪ್ರೀತಿ (Love) ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಇಬ್ಬರಿಗೊಂದು ಮಗುವಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶು ತಿಪ್ಪೆಯಲ್ಲಿ ಬಿದ್ದಿದೆ. ಹೌದು…ಹದಿಹರೆಯದ ವಯಸ್ಸಿನಲ್ಲಿ ಅಪ್ರಾಪ್ತ ಇಬ್ಬರು ಪ್ರೀತಿಯಲ್ಲಿ ಬಿದ್ದು ಪುಟ್ಟ ಕಂದಮ್ಮನನ್ನೇ ಬಲಿಕೊಟ್ಟಿದ್ದಾರೆ. ಅಚ್ಚರಿ ಏನೆಂದರೆ ಸ್ನೇಹಿತರೇ ಸೇರಿಕೊಂಡು ಡೆಲಿವರಿ ಮಾಡಿರುವ ಬಗ್ಗೆ ಗೊತ್ತಾಗಿದೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಅಂದು 2ನೇ ತಾರೀಖು ಮಂಗಳವಾರ ರಾತ್ರಿ ಎಂಟು ಗಂಟೆ ಸಮಯ. ಯಲಹಂಕದ ಗಾಂಧಿನಗರ ಏರಿಯಾದಲ್ಲಿ ಸೈಕಲ್ ನಲ್ಲಿ ಬಂದಿದ್ದ ವ್ಯಕ್ತಿ ಕಸದ ರಾಶಿಯಲ್ಲಿ ಕವರ್ ಬಿಸಾಕಿ ಹೋಗಿದ್ದ. ಮನೆ ಹತ್ತಿರದಲ್ಲೇ ವಾಸವಿರುವ ವೃದ್ಧನ ಕೈಯಲ್ಲಿ ಈ ಕಸ ಬಿಸಾಡಿ ಎಂದು ಯುವತಿ ಶಿಶುವಿದ್ದ ಕವರ್ ಅನ್ನು ಕೊಟ್ಟಿದ್ದಾಳೆ. ಆಗ ವೃದ್ಧ ಅದರ ಅರಿವಿಲ್ಲದೇ ಆ ಕವರ್ ಅನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಹೋಗಿದ್ದಾರೆ. ಬಳಿಕ ಪೌರಕಾರ್ಮಿಕರು ಬೆಳಗ್ಗೆ ಕಸ ಸ್ವಚ್ಛ ಮಾಡುವಾಗ ಶಿಶುವಿನ ಶವ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಪೊಲೀಸರಿಂದ ತನಿಖೆ ಶುರು ಮಾಡಿ ಸುತ್ತಮುತ್ತಲ ಸಿಸಿಟಿವಿ ಸರ್ಚ್ ಮಾಡಿಸಿದ್ದಾರೆ. ಆಗ ಪೊಲೀಸರಿಗೆ CCTVಯಲ್ಲಿ ಸೈಕಲ್ನಲ್ಲಿ ವೃದ್ಧನ ಗುರುತು ಪತ್ತೆಯಾಗಿದೆ. ಆಗ ಕವರ್ನಲ್ಲಿದ್ದ ಶಿಶುವಿನ ಶವ ಎಸೆದ ವೃದ್ಧನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ.ಅಪ್ರಾಪ್ತರ ಲವ್ ಸ್ಟೋರಿ, ಶಿಶು ಸಾವಿನ ಸತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೋರ್ವ ವಿಕೃತ ಕಾಮುಕ: ಮಹಿಳೆಯರಿಗೆ ಖಾಸಗಿ ಅಂಗ ತೋರಿಸುವುದೇ ಈತನ ಕಾಯಕ
ಕೊನೆಗೆ ಆತನನ್ನ ಕರೆತಂದು ವಿಚಾರಣೆ ಮಾಡಿದಾಗ ತಾನು ಎಸೆದ ಕವರ್ ನಲ್ಲಿ ಹಸುಗೂಸು ಇದೆ ಅನ್ನೋದೇ ಗೊತ್ತಿಲ್ಲ..ಆ ಕವರ್ ಓರ್ವ ಯುವತಿ ಕಸವಿದ್ದು ಎಸೆಯಿರಿ ಎಂದು ಕೊಟ್ಟಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ. ಕೊನೆಗೆ ಮೃತಪಟ್ಟಿದ್ದ ಹಸುಗೂಸು ಎಂದಾಗ ವೃದ್ದನೇ ಪಶ್ಚಾತ್ತಾಪ ಪಟ್ಟಿದ್ದ. ಪೊಲೀಸರು ವೃದ್ಧನ ಮಾಹಿತಿ ಪಡೆದು ನೇರವಾಗಿ ಯುವತಿ ಮನೆಗೆ ಹೋಗಿದ್ದಾರೆ. ವಿಚಾರಣೆ ವೇಳೆ ಆಗ ಯುವತಿ ಹುಡುಗನ ಜೊತೆಗಿನ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾಳೆ. ಹೀಗೆ ಸ್ನೇಹಿತರೇ ಸೇರಿಕೊಂಡು ಮಾಡಿರುವ ಡೆಲಿವರಿ ಯಡವಟ್ಟಿನಿಂದ ನವಜಾತ ಶಿಶು ಉಸಿರುಗಟ್ಟಿ ಸಾವನ್ನಪ್ಪಿದೆ. ಇದು ಯಾರಿಗೂ ಗೊತ್ತಾಗಬಾರದು ಎಂದು ಮಗುವಿನ ಶವವನ್ನ ಕವರ್ನಲ್ಲಿಟ್ಟು ಕಸ ಎಂದು ವೃದ್ಧನ ಕೊಟ್ಟಿರುವುದಾಗಿ ಪೊಲೀಸರ ಮುಂದೆ ಯುವತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ಯುವಕನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಯುವತಿಯನ್ನ ವಿಚಾರಣೆ ಮಾಡಿದಾಗ ಹುಡುಗನ ಜೊತೆಗಿನ ಲವ್ ಸ್ಟೋರಿ ರಿವೀಲ್ ಆಗಿದೆ. ಯುವತಿ, ಯುವಕನ ಪ್ರೀತಿ ಫಲದಿಂದಲೇ ನವಜಾತ ಶಿಶು ಹುಟ್ಟಿತ್ತು. ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಯುವತಿಯನ್ನ ಯುವಕ ಗರ್ಭಿಣಿ ಮಾಡ್ಬಿಟ್ಟಿದ್ದ. ಅಚ್ಚರಿ ಅಂದ್ರೆ ಒಂಬತ್ತು ತಿಂಗಳ ನಂತರ ಅಕ್ಕಪಕ್ಕದ ಮಹಿಳೆಯರೇ ಸೇರಿ ಮನೆಯಲ್ಲೇ ಡಿಲೆವರಿ ಮಾಡಿದ್ದರಂತೆ. ಸಂಬಂಧಿಕರಿಗೆ ಸತ್ಯ ಗೊತ್ತಾಗಬಾರದು ಎಂದು ರಹಸ್ಯವಾಗಿ ಮನೆಯಲ್ಲೇ ಡಿಲಿವರಿ ಮಾಡಿದ್ದು, ಡಿಲೆವರಿ ಯಡವಟ್ಟಿನಿಂದ ಉಸಿರುಗಟ್ಟಿ ಶಿಶು ಸಾವನ್ನಪ್ಪಿದೆ. ಬಳಿಕ ಮಗುವಿನ ಶವವನ್ನ ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ವೃದ್ಧನ ಕೈಗೆ ಕಸವೆಂದು ಹೇಳಿ ಕೊಟ್ಟಿದ್ದಾಳೆ. ಆಗ ಏನೂ ತಿಳಿಯದ ಅಜ್ಜ ಸೈಕಲ್ ನಲ್ಲಿ ಬಂದು ಕವರ್ ಎಸೆದು ಹೋಗಿದ್ದ.
ಇನ್ನು ಪ್ರೀತಿ ಕಹಾನಿ ರಿವೀಲ್ ಬಳಿಕ ಯುವಕನನ್ನ ಪತ್ತೆ ಮಾಡಿದ ಪೊಲೀಸ್ರು ಅಪ್ರಾಪ್ತ ಯುವತಿಯ ಸಲುಗೆ ಹೊಂದಿದ್ದ ಹಿನ್ನಲೆ ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಿದ್ದಾರೆ..ಈ ನಡುವೆ ಯುವತಿಗೆ ಸಹಕರಿಸಿದ್ದವರ ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.