AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನನ್ನು ಮನೆಗೆ ಕರೆಸಿ ಗುಪ್ತಾಂಗ ಕತ್ತರಿಸಿದ ಪ್ರೇಯಸಿ

ಪ್ರೀತಿಯ ಬಲೆ ಬೀಸಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಯುವತಿಯೊಬ್ಬಳು ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತನ ಕುಟುಂಬದವರು ಇದನ್ನು ಲವ್ ಟ್ರ್ಯಾಪ್ ಎಂದು ಕರೆದಿದ್ದಾರೆ. ಎರಡು ಕುಟುಂಬಗಳ ನಡುವೆ ಈಗಾಗಲೇ ಹಲವು ವಿವಾದಗಳಿದ್ದವು. ಆದರೆ ಯುವತಿ ಆತ ತನ್ನ ಮನೆಗೆ ನುಗ್ಗಿದ್ದ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದ ಆಗ ಅನಿವಾರ್ಯವಾಗಿ ಈ ರೀತಿ ಮಾಡಬೇಕಾಯಿತು ಎಂದು ಹೇಳಿಕೆ ನೀಡಿದ್ದಾಳೆ.

ಪ್ರಿಯಕರನನ್ನು ಮನೆಗೆ ಕರೆಸಿ ಗುಪ್ತಾಂಗ ಕತ್ತರಿಸಿದ ಪ್ರೇಯಸಿ
ಸಾಂದರ್ಭಿಕ ಚಿತ್ರImage Credit source: Pond5
ನಯನಾ ರಾಜೀವ್
|

Updated on:Apr 17, 2025 | 7:54 AM

Share

ಉತ್ತರ ಪ್ರದೇಶ, ಏಪ್ರಿಲ್ 17: ಯುವತಿಯೊಬ್ಬಳು ಪ್ರಿಯಕರನನ್ನು ಮನೆಗೆ ಕರೆಸಿ ಗುಪ್ತಾಂಗ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ. ಆತನನ್ನು ಮನೆಗೆ ಕರೆಸಿಕೊಂಡು ಪ್ರೇಯಸಿ(Lover) ಹಾಗೂ ಆಕೆಯ ನಾಲ್ವರು ಸಹೋದರರು ಸೇರಿ ಗುಪ್ತಾಂಗ ಕತ್ತರಿಸಿದ್ದಲ್ಲದೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತನ ಕುಟುಂಬದವರು ಇದನ್ನು ಲವ್ ಟ್ರ್ಯಾಪ್ ಎಂದು ಕರೆದಿದ್ದಾರೆ. ಎರಡು ಕುಟುಂಬಗಳ ನಡುವೆ ಈಗಾಗಲೇ ಹಲವು ವಿವಾದಗಳಿದ್ದವು. ಆದರೆ ಯುವತಿ ಆತ ತನ್ನ ಮನೆಗೆ ನುಗ್ಗಿದ್ದ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದ ಆಗ ಅನಿವಾರ್ಯವಾಗಿ ಈ ರೀತಿ ಮಾಡಬೇಕಾಯಿತು ಎಂದು ಹೇಳಿಕೆ ನೀಡಿದ್ದಾಳೆ.

ಮಿಥುನ್ ಕುಮಾರ್ ಎಂಬಾತ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದ, ಆಕೆಯ ಆತನಿಗಿಂತ 8 ವರ್ಷ ದೊಡ್ಡವಳು. ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಹೊಲದಿಂದ ವಾಪಸಾಗುವಾಗ ಆಕೆ ಆತನಿಗೆ ಕರೆ ಮಾಡಿದ್ದಳು. ನಮ್ಮ ಮನೆಯಿಂದ ಮೂರನೇ ಮನೆಯೇ ಅವರದ್ದು. ಆಕೆ ಎರಡು ವರ್ಷಗಳಿಂದ ಮಿಥುನ್ ಜತೆ ಸಂಪರ್ಕದಲ್ಲಿದ್ದಾಳೆ. ತನ್ನ ಭೇಟಿಯಾಗು ಎಂದು ಆತನಿಗೆ ಕರೆ ಮಾಡಿದ್ದಳು.

ಮಿಥುನ್‌ಗೆ ತಿಳಿಯದೆ ಅಲ್ಲಿಗೆ ಹೋಗಿದ್ದಾನೆ, ಆ ಯುವತಿಯ ನಾಲ್ವರು ಸಹೋದರರು ಅಲ್ಲೇ ಕಾಯುತ್ತಿದ್ದರು ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಅವರು ಮಿಥುನ್​ನನ್ನು ಹಿಡಿದು, ನಿಂದಿಸಿ, ತೀವ್ರವಾಗಿ ಥಳಿಸಿದ್ದಾರೆ. ಸಹೋದರರು ಮಿಥುನ್‌ನ ಕೈ ಮತ್ತು ಕಾಲುಗಳನ್ನು ಕಟ್ಟಿದ್ದರು, ನಂತರ ಆಕೆ ಬ್ಲೇಡ್‌ನಿಂದ ಗುಪ್ತಾಂಗ ಕತ್ತರಿಸಿದ್ದಾಳೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಯಿತು, ನಂತರ ಆರೋಪಿಗಳು ಮಿಥುನ್‌ನನ್ನು ಮನೆಯಿಂದ ಹೊರಗೆ ಎಸೆದಿದ್ದಾರೆ.

ಇದನ್ನೂ ಓದಿ
Image
ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ:ಪ್ರಾಣಕಳೆದುಕೊಂಡ ಪ್ರಿಯಕರ
Image
ತನ್ನ ಕುಟುಂಬ ಸದಸ್ಯರು, ಪ್ರೇಯಸಿ ಸೇರಿ ಐವರನ್ನು ಕೊಂದ ಅಫಾನ್
Image
ಪ್ರಿಯಕರ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ
Image
ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಪ್ರಿಯಕರ ದುರಂತ ಸಾವು!

ಗಾಯಗೊಂಡ ವ್ಯಕ್ತಿಯನ್ನು ನೋಡಿದ ಗ್ರಾಮಸ್ಥರೊಬ್ಬರು ಆತನ ತಂದೆಗೆ ಮಾಹಿತಿ ನೀಡಿದರು. ಬಸಂತ್ ಲಾಲ್ ತನ್ನ ಮಗನನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಮಿಥುನ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನ ಸ್ಥಿತಿ ಗಂಭೀರವಾಗಿದೆ. ವೈದ್ಯಕೀಯ ಚಿಕಿತ್ಸೆ ಮತ್ತು ಹೊಲಿಗೆಗಳನ್ನು ನೀಡಲಾಗಿದ್ದರೂ, ಅತಿಯಾದ ರಕ್ತದ ನಷ್ಟದಿಂದಾಗಿ ಅವನು ಪ್ರಜ್ಞೆ ಕಳೆದುಕೊಳ್ಳುತ್ತಲೇ ಇದ್ದಾನೆ.

ಮತ್ತಷ್ಟು ಓದಿ: ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ

ಎರಡು ಕುಟುಂಬಗಳ ನಡುವೆ ಮೊದಲೇ ದ್ವೇಷವಿತ್ತು, ಇದಕ್ಕೆ ಒಮ್ಮೆ ಪೊಲೀಸರ ಹಸ್ತಕ್ಷೇಪದ ಅಗತ್ಯವಿತ್ತು ಆದರೆ ಮಾತಿನಲ್ಲೇ ಬಗೆಹರಿಸಿಕೊಂಡಿದ್ದೆವು ಎಂದು ತಂದೆ ಹೇಳಿದ್ದಾರೆ, ಆಕೆ ಉದ್ದೇಶಪೂರ್ವಕವಾಗಿ ಭೇಟಿಯಾಗುವ ನೆಪದಲ್ಲಿ ತನ್ನ ಮಗನನ್ನು ತನ್ನ ಮನೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಎರಡೂ ಕಡೆಯಿಂದ ದೂರುಗಳು ಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಗೋರಖ್‌ಪುರ ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ದೃಢಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:49 am, Thu, 17 April 25

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ