ಪ್ರಿಯಕರ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ 17 ವರ್ಷದ ಪ್ರೇಯಸಿ
ಕೆಲವರು ಕ್ಷುಲ್ಲಕ ಕಾರಣಗಳಿಗೆ ಸಾವಿನ ಮನೆ ಸೇರುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಒಂದೆಡೆ ಅನುಮಾನ ಮತ್ತೊಂದೆಡೆ ಗಂಭೀರವಲ್ಲದ ಕೇವಲ ಸಣ್ಣ ಸಣ್ಣ ವಿಚಾರಕ್ಕೆ ಪ್ರಾಣ ಕಳೆದುಕೊಳ್ಳುತ್ತಾರೆ. ಅದರಂತೆ ಪ್ರಿಯತಮೆಯೊಬ್ಬರು ತನ್ನ ಬಾಯ್ಫ್ರೆಂಡ್ ಬೇರೆ ಹುಡುಗಿ ಜೊತೆ ಮಾತನಾಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾಗಾದ್ರೆ, ಈ ಲವ್ ಕಹಾನಿಯಲ್ಲಿ ಆಗಿದ್ದೇನು ನೋಡಿ.

ಚಿಕ್ಕಬಳ್ಳಾಪುರ, (ಫೆಬ್ರವರಿ 24): ತನ್ನ ಲವರ್ ಬಾಯ್ ಬೇರೆ ಹುಡುಗಿ ಜೊತೆ ಮಾತನಾಡಿದ್ದಕ್ಕೆ ಮನನೊಂದು ಪ್ರೀಯತಮೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಿಯಕರ ಆದರ್ಶನ ಜೊತೆ ನಿನ್ನೆ (ಫೆಬ್ರವರಿ 23) ಜಗಳವಾಡಿದ್ದ ಪ್ರೇಯಸಿ ಸುಚಿತ್ರಾ(17), ಇಂದು (ಫೆಬ್ರವರಿ 24) ಸಾದೇನಹಳ್ಳಿಯ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಿಯಕರ ಆದರ್ಶ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಸುಚಿತ್ರಾ ಕೋಪಮಾಡಿಕೊಂಡಿದ್ದಳು. ಇದೇ ವಿಚಾರವಾಗಿ ನಿನ್ನೆ(ಫೆ.23) ಆದರ್ಶನ ಜೊತೆ ಪ್ರೇಯಸಿ ಸುಚಿತ್ರಾ ಜಗಳವಾಡಿದ್ದಳು. ಬಳಿಕ ಅದೇನಾಯ್ತೋ ಏನೋ ಪ್ರಿಯಕರನ ನಡೆಯಿಂದ ಬೇಸರಗೊಂಡು ಸುಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
17 ವರ್ಷದ ಸುಚಿತ್ರಾ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದ ವಾಸಿ. ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾಬ್ಯಾಸ ಮಾಡ್ತಿದ್ದಳು, ಆದ್ರೆ ಹದಿಹರೆಯ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಪ್ರಣಯ ಅಂತ ಮಂಚೇನಹಳ್ಳಿ ನಿವಾಸಿ ಪೋಟೊಗ್ರಾಪರ್ ನೊಂದಿಗೆ ಪ್ರೇಮಾಂಕುರವಾಗಿದೆ. ಇಬ್ಬರು ಒಂದೆ ಮನೆಯಲ್ಲಿ ಕೆಲಕಾಲ ಸಹ ಜೀವನ ನಡೆಸಿದ್ದಾರೆ. ಆದ್ರೆ ಇತ್ತಿಚಿಗೆ ಪೋಟೊಗ್ರಾಪರ್ ಈಕೆಯ ಬದಲು ಬೇರೊಬ್ಬ ಯುವತಿಯ ಜೊತೆ ಸಲುಗೆಯಿಂದ ಇದ್ದು ಆಕೆಯ ಜೊತೆ ಮಾತನಾಡುತ್ತಿದ್ದಂತೆ, ಇದರಿಂದ ಮನನೊಂದು ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುವಿತ್ರಾ ಸಾವಿಗೆ ಆಕೆಯ ಪ್ರೀಯಕನೆ ಕಾರಣ ಅಂತ ಮೃತಳ ಅಕ್ಕಂದಿರು ಆರೋಪ ಮಾಡಿದ್ದಾರೆ.
ಮಂಚೇನಹಳ್ಳಿ ಮೂಲದ ಪೋಟೋಗ್ರಾಪರ್ ಸುಚಿತ್ರಾಳನ್ನು ಮದುವೆ ಮಾಡಿಕೊಳ್ಳೊದಾಗಿ ನಂಬಿಸಿ ಪ್ರೀತಿ ಪ್ರೇಮ ಪ್ರಣಯ ಅಂತ ಹನಿಮೂನ್ ಗೂ ಕರೆದುಕೊಂಡು ಹೋಗಿದ್ದನಂತೆ. ಇನ್ನೂ ಸುಚಿತ್ರಾ ಮನೆಯಲ್ಲಿ ತಾಯಿ ಒಬ್ಬರೆ ಇದ್ದ ಕಾರಣ, ತಾಯಿ, ಮಗಳಿಗೂ ಹಾಗೂ ಮನೆಯ ಸಮಸ್ಯೆಗಳಿಗೂ ಆಶ್ರಯವಾಗಿದ್ದನಂತೆ. ಸುಚಿತ್ರಾಳಿಗೆ 18 ವರ್ಷ ತುಂಬಿದ ತಕ್ಷಣ ಮದುವೆ ಮಾಡಿಕೊಳ್ಳೊದಾಗಿ ನಂಬಿಸಿದ್ದನಂತೆ. ಆರೋಪಿ ಫೋಟೋಗ್ರಾಫರ್ನದ್ದು ಏನು ತಪ್ಪಿಲ್ಲ. ಮಗಳ ಪ್ರೀಯಕರ ಬೇರೆ ಹುಡುಗಿಯ ಜೊತೆ ಮಾತನಾಡಿದ್ದಕ್ಕೆ ನಿನ್ನೆ ರಾತ್ರಿ ಜಗಳ ಮಾಡಿದ್ದಾಳೆ. ತಮ್ಮ ಮಗಳೆ ಹುಡುಗನಿಗೆ ಹೊಡೆದಿದ್ದು, ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಲ್ಲಿ ಹುಡುಗನ ತಪ್ಪು ಇಲ್ಲವೆಂದಿದ್ದಾಳೆ ಮೃತಳ ತಾಯಿ.
ವಯಸ್ಸಲ್ಲದ ವಯಸ್ಸಿನಲ್ಲಿ ಹುಚ್ಚು ಕೋಡಿ ಮನಸ್ಸು ಅಂತ, ಪ್ರೀತಿ ಪ್ರೇಮ ಪ್ರಣಯ ಎಂದು ಸುತ್ತಾಡಲು ಹೋಗಿ ಏನೊ ಮಾಡಲು ಹೋಗಿ ಇನ್ನೇನು ಮಾಡಿಕೊಂಡರು ಅನ್ನುವ ಹಾಗೆ ಪ್ರೀತಿಸಿದ ಹುಡುಗ ಬೇರೆ ಹುಡುಗಿಯ ಜೊತೆ ಮಾತನಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ವಿಪರ್ಯಾಸ.
Published On - 5:22 pm, Mon, 24 February 25




