AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆ ಮಾದಪ್ಪನಿಗೂ ತಟ್ಟಿದ ಯುದ್ಧದ ಬಿಸಿ: ಹೀಗೆ ಮುಂದುವರೆದ್ರೆ ಭಕ್ತರಿಗಿಲ್ಲ ಅನ್ನದಾಸೋಹ, ಲಾಡು ಪ್ರಸಾದ

ಮಧ್ಯಪ್ರಾಚ್ಯ ಯುದ್ಧದಿಂದ ಎದುರಾಗಿರುವ ಗ್ಯಾಸ್ ಸಿಲಿಂಡರ್ ಕೊರತೆಯು ಚಾಮರಾಜನಗರದ ಮಲೆ ಮಹದೇಶ್ವರ ದೇಗುಲಕ್ಕೆ ತಟ್ಟಿದೆ. ಯುಗಾದಿ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ನೀಡಲಾಗುವ ಅನ್ನದಾಸೋಹ ಮತ್ತು ಲಾಡು ಪ್ರಸಾದಕ್ಕೆ ಗ್ಯಾಸ್ ಅಭಾವ ತೀವ್ರ ಅಡ್ಡಿಯಾಗಿದೆ. ನಿತ್ಯದ ದಾಸೋಹಕ್ಕೂ ಕಷ್ಟವಾಗಿದ್ದು, ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.

ಮಲೆ ಮಾದಪ್ಪನಿಗೂ ತಟ್ಟಿದ ಯುದ್ಧದ ಬಿಸಿ: ಹೀಗೆ ಮುಂದುವರೆದ್ರೆ ಭಕ್ತರಿಗಿಲ್ಲ ಅನ್ನದಾಸೋಹ, ಲಾಡು ಪ್ರಸಾದ
ಮಲೆ ಮಹದೇಶ್ವರ ಬೆಟ್ಟImage Credit source: wikipedia
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Mar 11, 2026 | 6:46 PM

Share

ಚಾಮರಾಜನಗರ, ಮಾರ್ಚ್​ 11: ಮಧ್ಯಪ್ರಾಚ್ಯದ ಕದನ (Middle East conflict) ಇಡೀ ವಿಶ್ವಕ್ಕೆ ತಲೆನೋವು ತಂದೊಡ್ಡಿದೆ. ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ. ಇತ್ತ ಮಾದಪ್ಪನಿಗೂ (Male Mahadeshwara Hills) ಯುದ್ಧದ ಕಾರ್ಮೋಡ ಕವಿದಿದ್ದು, ಯುಗಾದಿ ಜಾತ್ರೆಗೆ ಅನ್ನದಾಸೋಹ ಮತ್ತು ಲಾಡು ಪ್ರಸಾದಕ್ಕೂ ಎಫೆಕ್ಟ್ ಆಗುವ ಸಾಧ್ಯತೆ ಇದೆ.

ದಾಸೋಹ, ಲಾಡು ತಯಾರಿಕೆ ಸ್ಥಗಿತ ಸಾಧ್ಯತೆ

ಏಳು ಮಲೆ ಎಪ್ಪತ್ತೇಳು ಮಲೆ ಒಡೆಯ. ಕಲಿಯುಗದ ಕಲ್ಪತರು ಬೇಡಿದನ್ನ ಕರುಣಿಸುವ ಮಾಯ್ಕಾರ ಈ ಮಾದಪ್ಪ. ಈ ಮಾದಪ್ಪನಿಗೆ ಇದೀಗ ಇರಾನ್​​-ಇಸ್ರೇಲ್ ಯುದ್ದದ ಬಿಸಿ ತಟ್ಟಿದೆ. ದಿನನಿತ್ಯ ಸಾವಿರಾರು ಭಕ್ತರು ಅನ್ನದಾಸೋಹದ ಮೂಲಕ ಪ್ರಸಾದವನ್ನ ಸ್ವಿಕರಿಸುತ್ತಾರೆ. ಅದೇ ರೀತಿ ಲಾಡು ಪ್ರಸಾದ ತಯಾರಿಕೆಗೆ ಒಂದು ದಿನಕ್ಕೆ ಬರೋಬ್ಬರಿ 12ಕ್ಕೂ ಹೆಚ್ಚು ಸಿಲಿಂಡರ್​ಗಳನ್ನು ಬಳಸಲಾಗುತ್ತಿದೆ. ಒಂದು ವಾರದವರೆಗೆ ದಾಸೋಹಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಇದು ಹೀಗೆ ಮುಂದುವರೆದರೆ ಮಾದಪ್ಪನ ಬೆಟ್ಟದಲ್ಲಿ ಅನ್ನದಾಸೋಹಕ್ಕೆ ಹಾಗೂ ಲಾಡು ಪ್ರಸಾದಕ್ಕೆ ಬ್ರೇಕ್​​ ಬೀಳಲಿದೆ.

ಇದನ್ನೂ ಓದಿ: ಪಿಜಿಗಳಲ್ಲಿಲ್ಲ ಮಧ್ಯಾಹ್ನದ ಊಟ, ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ಸಂಕಷ್ಟ: ಸಿಲಿಂಡರ್​​ ಕೊರತೆ ಮತ್ತಷ್ಟು ಉಲ್ಬಣ

ಪ್ರತಿ ವರ್ಷ 3 ಬಾರಿ ಮಾದಪ್ಪನ ಬೆಟ್ಟದಲ್ಲಿ ಬೃಹತ್ ಜಾತ್ರಾಮಹೋತ್ಸವ ನಡೆಯುತ್ತದೆ. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರ್ತಾರೆ. ಲಕ್ಷಾಂತರ ಲಾಡು ಪ್ರಸಾದ ಮಾರಾಟವಾದರೆ, ಅನ್ನದಾಸೋಹಕ್ಕೆ ಆಗಮಿಸಿ ಪ್ರಸಾದ ಸೇವಿಸುತ್ತಾರೆ. ಜಾತ್ರೆಯ ವೇಳೆ ಕೇವಲ ದಾಸೋಹಕ್ಕೆ ಒಂದು ದಿನಕ್ಕೆ 12 ರಿಂದ 15 ಸಿಲಿಂಡರ್ ಬೇಕಾಗುತ್ತೆ. 2.50 ಲಕ್ಷ ಲಾಡು ತಯಾರಿ ಮಾಡಲು 20 ಕ್ಕೂ ಹೆಚ್ಚು ಸಿಲಿಂಡರ್​​ ಒಂದು ದಿನಕ್ಕೆ ಬಳಕ್ಕೆ ಮಾಡಲಾಗುತ್ತೆ. ಗ್ಯಾಸ್ ಸಿಲಿಂಡರ್ ಅಭಾವ ಹೀಗೆ ಮುಂದುವರೆದರೆ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲೂ ಸಿಲಿಂಡರ್​​ ಕೊರತೆ ಗದ್ದಲ: ಆಡಳಿತ ಮತ್ತು ವಿಕ್ಷದ ನಡುವೆ ವಾಕ್ಸಮರ

ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಯುದ್ದದ ಎಫೆಕ್ಟ್ ಯುದ್ದದಲ್ಲಿ ಭಾಗಿಯಾಗದ ತಟಸ್ಥ ದೇಶದ ಮೇಲೆಯೂ ಇಂಪ್ಯಾಕ್ಟ್ ಆಗ್ತಾಯಿರುವುದು ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು