Trees Cut Down At Bengaluru: ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರು, ಹಿಂದೆ ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರದ ಅಭಿವೃದ್ಧಿ ಕಾಮಗಾರಿಗಳ ನಿಟ್ಟಿನಲ್ಲಿ ಹಸಿರು ಪರಿಸರ ನಾಶವಾಗುತ್ತಿದೆ.ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂದಾಜು 19 ಸಾವಿರ ಮರಗಳಿಗೆ ಕೊಡಲಿ ಬಿದ್ದಿದೆ ಎಂದು ವರದಿಯಾಗಿದ್ದು, ಈ ಸಂಖ್ಯೆ ಪರಿಸರ ಪ್ರೇಮಿಗಳು ಮತ್ತು ನಾಗರಿಕರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.
ಬೆಂಗಳೂರು, ಜುಲೈ 14: ಬೆಂಗಳೂರು, ಹಿಂದೆ ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರದ ಅಭಿವೃದ್ಧಿ ಕಾಮಗಾರಿಗಳ ನಿಟ್ಟಿನಲ್ಲಿ ಹಸಿರು ಪರಿಸರ ನಾಶವಾಗುತ್ತಿದೆ.ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂದಾಜು 19 ಸಾವಿರ ಮರಗಳಿಗೆ ಕೊಡಲಿ ಬಿದ್ದಿದೆ ಎಂದು ವರದಿಯಾಗಿದ್ದು, ಈ ಸಂಖ್ಯೆ ಪರಿಸರ ಪ್ರೇಮಿಗಳು ಮತ್ತು ನಾಗರಿಕರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.
ಹೊಸ ಮೆಟ್ರೋ ಮಾರ್ಗಗಳು, ರಸ್ತೆ ವಿಸ್ತರಣೆಗಳು, ಮೇಲ್ಸೇತುವೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ 7,683 ಮರಗಳು ನೇರವಾಗಿ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಲಿಯಾಗಿವೆ. ಉಳಿದ ಮರಗಳನ್ನು ಖಾಸಗಿ ಅಭಿವೃದ್ಧಿ ಕಾಮಗಾರಿಗಳು, ಅಪಾಯಕಾರಿ ಮರಗಳ ತೆರವು ಮತ್ತು ಇತರ ಕಾರಣಗಳಿಗಾಗಿ ಕಡಿಯಲಾಗಿದೆ. ಪ್ರತಿ ವರ್ಷ ಸಾವಿರಾರು ಮರಗಳು ಕಣ್ಮರೆಯಾಗುತ್ತಿರುವುದು ನಗರದ ಪರಿಸರ ಸಮತೋಲನಕ್ಕೆ ದೊಡ್ಡ ಹೊಡೆತವಾಗಿದೆ. ಅಭಿವೃದ್ಧಿ ಯೋಜನೆಗಳು ಅನಿವಾರ್ಯವಾದರೂ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಅತಿ ಮುಖ್ಯ ಎಂದು ಪರಿಸರತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

