AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 7 ಪ್ರಶ್ನೆಯಿಂದ ನಿಮ್ಮ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎಂದು ತಿಳಿಯಬಹುದು

ದಾಂಪತ್ಯ ಜೀವನದಲ್ಲಿ ಅನೇಕ ಸವಾಲು ಹಾಗೂ ಪ್ರಶ್ನೆಗಳು ಬರಬಹುದು. ಆದರೆ ಆ ಎಲ್ಲ ಪ್ರಶ್ನೆಗಳಿಗೆ ನೀವು ಉತ್ತರ ಹುಡುಕಬೇಕು. ಜತೆಗೆ ಅವುಗಳನ್ನು ನೀವೇ ಪರಿಹಾರ ಮಾಡಬೇಕು. ನಿಮ್ಮ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದಕ್ಕೆ ದಾಂಪತ್ಯ ಸಲಹೆಗಾರ ಹಾಗೂ ತಜ್ಞ ಜೆಫ್ ಗುಂಥರ್ ಹೇಳಿರುವ ಪ್ರಶ್ನೆಗಳನ್ನು ನೋಡಿ. ನಿಮ್ಮ ಸಂಗಾತಿಯೊಂದಿಗಿನ ಆರೋಗ್ಯಕರ ಸಂಬಂಧದ ಬಗ್ಗೆ ತಿಳಿದುಕೊಳ್ಳಿ.

ಈ 7 ಪ್ರಶ್ನೆಯಿಂದ ನಿಮ್ಮ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎಂದು ತಿಳಿಯಬಹುದು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 29, 2025 | 5:42 PM

Share

ದಾಂಪತ್ಯದ ಸಂಬಂಧದಲ್ಲಿ (relationship) ಜಗಳ, ಕೋಪ, ಪ್ರೀತಿ, ವಿಶ್ವಾಸ, ನಂಬಿಕೆ, ಅಪನಂಬಿಕೆ, ಹೀಗೆ ಅನೇಕ ವಿಚಾರಗಳು ಇರುತ್ತದೆ. ಆದರೆ ಅದರಲ್ಲಿ ಕೆಲವೊಂದನ್ನು ಅಂದರೆ ಕೋಪ, ಜಗಳ, ಅಪನಂಬಿಕೆಯನ್ನು ಯಾವುದನ್ನೂ ಕೂಡ ಒಂದು ಕ್ಷಣಕ್ಕೆ ಮಾತ್ರ ಇರಬೇಕು. ಅದು ದೀರ್ಘಕಾಲದವರೆಗೆ ಇರಬಾರದು. ದಾಂಪತ್ಯ ಜೀವನದಲ್ಲಿ ಇದನ್ನು ಸಹಜ ಎಂಬಂತೆ ತೆಗೆದುಕೊಳ್ಳಬೇಕು. ಒಂದು ಸಂಬಂಧ ಉತ್ತಮವಾಗಿರಬೇಕಂದರೆ ಅಲ್ಲಿ ಆರೋಗ್ಯಕರವಾದ ವಿಚಾರಗಳು ಇರಬೇಕು. ನಿಮ್ಮ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದಕ್ಕೆ ದಾಂಪತ್ಯ ಸಲಹೆಗಾರ ಹಾಗೂ ತಜ್ಞ ಜೆಫ್ ಗುಂಥರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಕುರಿತು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 7 ಪ್ರಶ್ನೆಗಳನ್ನು ಕೇಳಿದ್ದಾರೆ.

ಈ 7 ಪ್ರಶ್ನೆಗಳನ್ನು ನೀವು ಕೇಳಿಕೊಳ್ಳಿ:

ಪ್ರಶ್ನೆ 1– ನಾನು ಈ ಸಂಬಂಧದಲ್ಲಿ ನಿಜವಾಗಿಯೂ ಸಂತೋಷವಾಗಿದ್ದೇನೆ ಮತ್ತು ನಾನು ಈ ಸಂಬಂಧದಲ್ಲಿ ಮುಂದುವರಿಸುವುದು, ಸರಿಯೋ ತಪ್ಪೋ?

ಪ್ರಶ್ನೆ 2– ನಾನು ನನ್ನ ಸಂಗಾತಿಯನ್ನು ಭಾವನಾತ್ಮಕವಾಗಿ ನಂಬುತ್ತೇನೆ ಮತ್ತು ನನ್ನ ಸಂಗಾತಿ ನನ್ನ ದೌರ್ಬಲ್ಯಗಳನ್ನು ಬಳಸಿಕೊಳ್ಳುವುದಿಲ್ಲ, ಸರಿಯೋ ತಪ್ಪೋ?

ಪ್ರಶ್ನೆ 3: ಏನಾದರೂ ಒಳ್ಳೆಯದಾದರೆ, ನಾನು ಮೊದಲು ನನ್ನ ಸಂಗಾತಿಗೆ ಹೇಳಲು ಬಯಸುತ್ತೇನೆ ಮತ್ತು ಅವನು/ಅವಳು ಈ ವಿಚಾರವಾಗಿ ಸಂತೋಷಪಡುತ್ತಾರೆ ಎಂಬುದು ನನಗೆ ಖಚಿತವಾಗಿದೆ.

ಪ್ರಶ್ನೆ 4: ಈ ಸಂಬಂಧದಲ್ಲಿ ನನ್ನ ಆಲೋಚನೆಗಳು, ಅಭ್ಯಾಸಗಳು ಅಥವಾ ಕನಸುಗಳನ್ನು ನಾನು ಮರೆಮಾಡಬೇಕಾಗಿಲ್ಲ

ಪ್ರಶ್ನೆ 5: ನಾನು ಒಂದು ವಿಚಾರವನ್ನು ಅಥವಾ ಕೆಲಸವನ್ನು ಮಾಡಿದಾಗ ಅದನ್ನು ನನ್ನ ಸಂಗಾತಿ ಅದನ್ನು ಗೌರವ ಮತ್ತು ತಿಳುವಳಿಕೆಯಿಂದ ಸ್ವೀಕರಿಸುತ್ತಾರೆಯೇ? ಅಥವಾ ಅಸಮಾಧಾನಗೊಳ್ಳುತ್ತಾರೆಯೇ?

ಪ್ರಶ್ನೆ 6: ಮದುವೆಯ ನಂತರ ನನ್ನ ಜೀವನ, ಸ್ನೇಹಿತರು, ಹವ್ಯಾಸಗಳು ಮತ್ತು ನಿರ್ಧಾರಗಳ ಮೇಲೆ ನನಗೆ ಇನ್ನೂ ಸಂಪೂರ್ಣ ನಿಯಂತ್ರಣವಿದೆ ಎಂದು ಅನಿಸುತ್ತದೆ

ಪ್ರಶ್ನೆ 7: ನನ್ನ ಆಪ್ತ ಸ್ನೇಹಿತ ಇದೇ ರೀತಿಯ ಸಂಬಂಧದ ಬಗ್ಗೆ ಹೇಳಿದರೆ, ನಾನು ಅವನ/ಅವಳ ಬಗ್ಗೆ ನಿಜವಾಗಿಯೂ ಸಂತೋಷಪಡುತ್ತೇನೆಯೇ?

ವಿಡಿಯೋ ಇಲ್ಲಿದೆ ನೋಡಿ:

ಈ ಎಲ್ಲ ಪ್ರಶ್ನೆಗಳು ನಿಮ್ಮ ಜೀವನದಲ್ಲಿ ತಪ್ಪಾಗಿದ್ದರೆ ಭಯಪಡುವ ಅಗತ್ಯವಿಲ್ಲ, ಈ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಇದರ ಬಗ್ಗೆ ಮುಕ್ತವಾಗಿ ಮಾತನಾಡಿ ಎಂದು ಜೆಫ್ ಗುಂಥರ್ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ