Relationship
ಯಾವುದೇ ವ್ಯಕ್ತಿಯು ಜೀವನದಲ್ಲಿ ಒಂಟಿಯಾಗಿರಲು ಸಾಧ್ಯವಿಲ್ಲ. ಸಂತೋಷದ ಸಮಯವನ್ನು ಒಂಟಿಯಾಗಿ ಸಂಭ್ರಮಿಸಿದರೂ, ದುಃಖವಾದಾಗ ತನ್ನ ನೋವನ್ನು ಹಂಚಿಕೊಳ್ಳಲು ಒಂದಷ್ಟು ಸಂಬಂಧಗಳು ಬೇಕೆನಿಸುತ್ತದೆ. ಹೀಗಾಗಿ ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಸಂಬಂಧವು ಪ್ರಮುಖ ಪಾತ್ರ ವಹಿಸುತ್ತದೆ. ಹುಟ್ಟಿನಿಂದ ಜೊತೆಯಾಗುವ ಅಪ್ಪ ಅಮ್ಮ, ಅಣ್ಣ ತಮ್ಮ, ಅಜ್ಜ ಅಜ್ಜಿ, ಚಿಕ್ಕಮ್ಮ ಚಿಕ್ಕಪ್ಪ, ದೊಡ್ಡಪ್ಪ ದೊಡ್ಡಮ್ಮ ಸಂಬಂಧಗಳು ಒಂದೆಡೆಯಾದರೆ, ಬೆಳೆಯುತ್ತಾ ಹೋದಂತೆಲ್ಲಾ ಸ್ನೇಹ ಸಂಬಂಧಗಳು ಬೆಸೆದು ಕೊಳ್ಳುತ್ತವೆ. ಆದರೆ ಕೆಲವೊಂದು ಸಂಬಂಧಗಳು ಕಾರಣವಿಲ್ಲದೇ ಮುರಿದು ಹೋಗಬಹುದು. ಹಾಗಾದ್ರೆ ಬದುಕಿನ ಭಾಗವಾದ ರಿಲೇಷನ್ಶಿಪ್ ಗೆ ಸಂಬಂಧ ಪಟ್ಟ ಸ್ಟೋರಿಗಳು ಇಲ್ಲಿದೆ.
ದಾಂಪತ್ಯ ಜೀವನ ಸುಖವಾಗಿ ಸಾಗಲು ಪತಿ-ಪತ್ನಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕು
ಪತಿ ಪತ್ನಿಯ ಸಂಬಂಧ ಎನ್ನುವಂತಹದ್ದು ಸುಂದರ ಶಾಶ್ವತವಾದ ಬಂಧ. ಇಲ್ಲಿ ಪ್ರೀತಿ ಇರುವಂತೆ ಗಂಡ ಹೆಂಡತಿಯರ ಮಧ್ಯೆ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಕೂಡ ಆಗೊಮ್ಮೆ ಈಗೊಮ್ಮೆ ಕಾಣಿಸುತ್ತವೆ. ಆದರೆ ಈ ಜಗಳಗಳು ಅತಿರೇಕಕ್ಕೆ ತಿರುಗಿದರೆ ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ. ಅದಕ್ಕಾಗಿ ಈ ಜಗಳ, ಮನಸ್ತಾಪಗಳು ತಲೆದೋರದಂತೆ ನೋಡಿಕೊಳ್ಳಲು ಗಂಡ ಹೆಂಡತಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕಂತೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Oct 21, 2025
- 7:23 pm
ಹೆಂಡತಿಯಾದವಳು ತನ್ನ ಗಂಡನಿಂದ ಈ ವಿಷಯಗಳನ್ನು ಎಂದಿಗೂ ಮರೆ ಮಾಡಬಾರದು
ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು, ತುಂಬಾನೇ ಅಮೂಲ್ಯವಾದದ್ದು. ಈ ಸಂಬಂಧ ಗಟ್ಟಿಯಾಗಿ ನಿಲ್ಲುವುದೇ ಪ್ರೀತಿ, ನಂಬಿಕೆಯ ಆಧಾರದ ಮೇಲೆ. ಗಂಡ ಹೆಂಡತಿಯ ಈ ಬಾಂಧವ್ಯ ಶಾಶ್ವತವಾಗಿರಬೇಕಾದರೆ ಇವರಿಬ್ಬರ ಮಧ್ಯೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು. ಅದರಲ್ಲೂ ಹೆಂಡತಿಯಾದವಳು ಈ ಒಂದಷ್ಟು ವಿಷಯಗಳನ್ನು ಗಂಡನಿಂದ ಮುಚ್ಚಿಡಲೇಬಾರದಂತೆ. ಆ ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
- Malashree anchan
- Updated on: Oct 4, 2025
- 9:15 am
ತಜ್ಞರು ಹೇಳುತ್ತಾರೆ ಯಾವ ಹುಡ್ಗಿಗೂ ಹುಡುಗರ ಈ ಗುಣಗಳು ಇಷ್ಟವಾಗುವುದಿಲ್ಲವಂತೆ
ಹೆಚ್ಚಿನ ಹುಡುಗರು, ಯುವಕರು ತಮಗೆ ಇಷ್ಟವಾಗುವಂತಹ ಹುಡುಗಿಯ ಜೊತೆ ಹೆಚ್ಚು ಹೆಚ್ಚು ಮಾತನಾಡಲು ಪ್ರಯತ್ನಿಸುತ್ತಿರುತ್ತಾರೆ. ಹುಡುಗಿಗೆ ಇನ್ನಷ್ಟು ಹತ್ತಿರವಾಗಲು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ತೋರ್ಪಡಿಸುವ ಈ ಕೆಲವೊಂದು ಗುಣಗಳು ಯಾವ ಹುಡುಗಿಗೂ ಇಷ್ಟವಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಹುಡುಗಿಯರಿಗೆ ಕೋಪ ತರಿಸುವಂತಹ ಹುಡುಗರ ಆ ಗುಣಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
- Malashree anchan
- Updated on: Sep 9, 2025
- 4:51 pm
ಈ ಅಭ್ಯಾಸಗಳೇ ಹಾಲು ಜೇನಿನಂತಹ ಸಂಬಂಧ ಹಾಳಾಗಲು ಮುಖ್ಯ ಕಾರಣ
ಸಂಗಾತಿಗಳ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸ, ಗೌರವ ಇರುವಂತೆ ಪ್ರೀತಿ ಜೀವನದಲ್ಲಿ ಒಂದಿಷ್ಟು ಜಗಳಗಳು ಕೂಡ ಇದ್ದೇ ಇರುತ್ತವೆ. ಇವೆಲ್ಲವೂ ಸಾಮಾನ್ಯ ಅಭ್ಯಾಸಗಳು. ಆದರೆ ಕೆಲವು ತಪ್ಪು ಅಭ್ಯಾಸಗಳು ನಿಧಾನವಾಗಿ ಸಂಬಂಧಗಳನ್ನು ದುರ್ಬಲಗೊಳಿಸಬಹುದು. ಸಂಬಂಧವನ್ನು ಹಾಳು ಮಾಡುವಂತಹ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Sep 6, 2025
- 8:06 pm
ಮಹಿಳೆಯರು ತಮ್ಮ ಗಂಡನಿಗೆ ತಮಾಷೆಗೂ ಈ ಮಾತುಗಳನ್ನು ಹೇಳಬಾರದು ಎನ್ನುತ್ತಾರೆ ತಜ್ಞರು
ಗಂಡನಾದವನು ತನ್ನ ಹೆಂಡತಿ, ಮಕ್ಕಳು, ಕುಟುಂಬವನ್ನು ಸಾಕಲು ಹಗಲಿರುಳು ಕಷ್ಟಪಟ್ಟು ದುಡಿಯುತ್ತಾನೆ. ಹೆಂಡ್ತಿ ಮಕ್ಕಳಿಗೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಾನೆ. ಹೀಗಿದ್ದರೂ ಕೂಡಾ ಗಂಡನ ತ್ಯಾಗ, ಪರಿಶ್ರಮವನ್ನು ಲೆಕ್ಕಿಸದೆ ಕೆಲ ಮಹಿಳೆಯರು ತಮ್ಮ ಗಂಡನಿಗೆ ಗಂಡನಿಗೆ ಚುಚ್ಚು ಮಾತುಗಳನ್ನಾಡುವಂತಹದ್ದು ಮಾಡುತ್ತಿರುತ್ತಾರೆ. ಇದು ಖಂಡಿತವಾಗಿಯೂ ಸಂಬಂಧವನ್ನು ಹಾಳು ಮಾಡುತ್ತದೆ. ಅದರಲ್ಲೂ ಹೆಂಡತಿಯಾದವಳು ತನ್ನ ಗಂಡನಿಗೆ ಈ ನಾಲ್ಕು ಮಾತುಗಳನ್ನು ಹೇಳಲೇಬಾರದು ಎನ್ನುತ್ತಾರೆ ತಜ್ಞರು. ಅದು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Sep 1, 2025
- 5:07 pm
ಮನಶಾಸ್ತ್ರಜ್ಞರ ಪ್ರಕಾರ ಸಂಬಂಧದಲ್ಲಿ ಸಂತೋಷವಾಗಿರುವವರು ಈ ಐದು ಕೆಲಸಗಳನ್ನು ಮಾಡೇ ಮಾಡುತ್ತಾರಂತೆ
ದಾಂಪತ್ಯ, ಪ್ರೇಮ ಸಂಬಂಧ ಆರೋಗ್ಯಕರವಾಗಿರಲು ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುವಂತಹದ್ದು, ಒಬ್ಬರಿಗೊಬ್ಬರು ಗಿಫ್ಟ್ ಕೊಟ್ಟುಕೊಳ್ಳುವಂತಹದ್ದು ಮಾಡುತ್ತಿರುತ್ತಾರೆ. ಆದರೆ ನಿಜವಾಗಿಯೂ ಸಂಬಂಧದಲ್ಲಿ ತುಂಬಾನೇ ಸಂತೋಷವಾಗಿರುವವರು ಪ್ರತಿನಿತ್ಯ ಈ ಐದು ಕೆಲಸಗಳನ್ನು ಮಾಡುತ್ತಾರಂತೆ. ಮನಶಾಸ್ತ್ರಜ್ಞ ಮಾರ್ಕ್ ಟ್ರಾವರ್ಸ್ ಹೇಳಿರುವ ಯಶಸ್ವಿ ಸಂಬಂಧದ ಆ 5 ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Aug 19, 2025
- 5:24 pm
ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು; ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ
ಕುಟುಂಬ ಅಂದ ಮೇಲೆ ಅಲ್ಲಿ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಇದ್ದೇ ಇರುತ್ತದೆ. ಅದರಲ್ಲೂ ಅತ್ತೆ-ಸೊಸೆ ಜಗಳ ಕಾಮನ್. ಹೆಚ್ಚಿನ ಮನೆಗಳಲ್ಲಿ ಅತ್ತೆ ಸೊಸೆ ಜಗಳಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಸೊಸೆಯಾದವಳು ತನ್ನ ಅತ್ತೆಯ ಜೊತೆಗೆ ಈ ಕೆಲವು ಮಾತುಗಳನ್ನಾಡಿದರೆ ಈ ಸಂಬಂಧದಲ್ಲಿ ಬಿರುಕು ಎಂಬುದು ಮೂಡುತ್ತದೆ. ಆ ವಿಷಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Aug 10, 2025
- 6:59 pm
ಗಂಡ ಹೆಂಡತಿ ಹೀಗಿದ್ರೆ ಡಿವೋರ್ಸ್ ಮಾತೇ ಇರೋದಿಲ್ಲ ನೋಡಿ
ಗಂಡ ಹೆಂಡತಿ ಸಂಬಂಧ ಏಳೇಳು ಜನುಮದ ಅನುಬಂಧ ಅಂತ ಹೇಳಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ಮನಸ್ತಾಪ, ವಿಚ್ಛೇದನವಾಗುವಂತಹ ಸುದ್ದಿಗಳೇ ಕೇಳಿ ಬರುತ್ತಿರುತ್ತವೆ. ಇಂತಹ ಗಲಾಟೆ, ಮನಸ್ತಾಪಗಳು ತಲೆದೋರುತ್ತಿರುತ್ತವೆ. ಹೀಗಿರುವಾಗ ದಾಂಪತ್ಯ ಜೀವನ ಹಾಲು ಜೀವನ ಹಾಲು-ಜೇನಿನಂತೆ ಇರಬೇಕೆಂದರೆ ಗಂಡ ಹೆಂಡತಿ ಹೇಗಿರಬೇಕು ಎಂಬುದನ್ನು ನೋಡಿ.
- Malashree anchan
- Updated on: Aug 9, 2025
- 7:44 pm
ಯುವಕರೇ… ಬ್ರೇಕಪ್ ನಂತರ ಈ ಕೆಲಸ ಮಾಡಿದ್ರೆ ನೀವು ಹ್ಯಾಪಿಯಾಗಿರ್ತೀರಿ
ಗಂಡಾಗಲಿ ಅಥವಾ ಹೆಣ್ಣಾಗಲಿ ಪ್ರೀತಿಸಿ ಒಮ್ಮೆಲೆ ದೂರವಾಗುವ ನಿರ್ಧಾರ ತೆಗೆದುಕೊಂಡಾಗ ಅಂದ್ರೆ ಬ್ರೇಕಪ್ ಆದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಇನ್ನೂ ಈ ನೋವಿನಿಂದ ಹೊರ ಬರಲಾರದೆ ಕುಡಿತದಂತಹ ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಂಡವರು ಹಲವರಿದ್ದಾರೆ. ಹೀಗಿರುವಾಗ ಜೀವನವನ್ನು ಹಾಳು ಮಾಡಿಕೊಳ್ಳದೆ ನೋವಿನಿಂದ ಹೊರ ಬಂದು ಹ್ಯಾಪಿ ಆಗಿರ್ಬೇಕು ಅಂದ್ರೆ ಈ ಕೆಲವೊಂದು ಟಿಪ್ಸ್ಗಳನ್ನು ಪಾಲಿಸಿ.
- Malashree anchan
- Updated on: Jul 26, 2025
- 8:06 pm
ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ
ಗಂಡ ಹೆಂಡ್ತಿಯ ನಡುವೆ ಎಷ್ಟೇ ಪ್ರೀತಿ ಇದ್ದರೂ ಕೆಲವೊಂದು ಬಾರಿ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ತಲೆದೋರುತ್ತಿರುತ್ತವೆ. ಅದರಲ್ಲೂ ಕೆಲವು ಬಾರಿ ಕೆಲಸ, ಮನೆ ಅಂತೆಲ್ಲಾ ಒತ್ತಡದ ಕಾರಣದಿಂದಾಗಿ ಹೆಂಡತಿಯರಿಗಿಂತ ಗಂಡಂದಿರೇ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಂಡತಿಯಾದವಳು ಬಹಳ ಜಾಣ್ಮೆಯಿಂದ ಗಂಡನ ಕೋಪವನ್ನು ಕಂಟ್ರೋಲ್ಗೆ ತರಬೇಕು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Jun 23, 2025
- 5:39 pm