ಯುವಕರೇ… ಬ್ರೇಕಪ್ ನಂತರ ಈ ಕೆಲಸ ಮಾಡಿದ್ರೆ ನೀವು ಹ್ಯಾಪಿಯಾಗಿರ್ತೀರಿ
ಗಂಡಾಗಲಿ ಅಥವಾ ಹೆಣ್ಣಾಗಲಿ ಪ್ರೀತಿಸಿ ಒಮ್ಮೆಲೆ ದೂರವಾಗುವ ನಿರ್ಧಾರ ತೆಗೆದುಕೊಂಡಾಗ ಅಂದ್ರೆ ಬ್ರೇಕಪ್ ಆದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಇನ್ನೂ ಈ ನೋವಿನಿಂದ ಹೊರ ಬರಲಾರದೆ ಕುಡಿತದಂತಹ ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಂಡವರು ಹಲವರಿದ್ದಾರೆ. ಹೀಗಿರುವಾಗ ಜೀವನವನ್ನು ಹಾಳು ಮಾಡಿಕೊಳ್ಳದೆ ನೋವಿನಿಂದ ಹೊರ ಬಂದು ಹ್ಯಾಪಿ ಆಗಿರ್ಬೇಕು ಅಂದ್ರೆ ಈ ಕೆಲವೊಂದು ಟಿಪ್ಸ್‌ಗಳನ್ನು ಪಾಲಿಸಿ.

ಜಾತಿ-ಧರ್ಮ, ಆಸ್ತಿ-ಅಂತಸ್ತು, ಮುನಿಸು-ಅಹಂ ಇಂತಹ ಒಂದಷ್ಟು ಕಾರಣಗಳಿಂದ ಅದೆಷ್ಟೋ ಪ್ರೇಮಿಗಳು ದೂರವಾಗಿದ್ದಾರೆ, ಅದೆಷ್ಟೋ ಪ್ರೇಮ ಕಥೆಗಳು ಅಂತ್ಯವಾಗಿದೆ. ಎರಡು ದೇಹ ಒಂದೇ ಜೀವದಂತಿದ್ದ ಪ್ರೇಮಿಗಳು ಇದ್ದಕ್ಕಿದ್ದಂತೆ ದೂರವಾದಾಗ ಅಥವಾ ಬ್ರೇಕಪ್ (Breakup) ಮಾಡಿಕೊಂಡಾಗ ಮನಸ್ಸಿಗಾಗುವ ನೋವು ಅಷ್ಟಿಷ್ಟಲ್ಲ. ಈ ನೋವಿನಿಂದ ಹೊರಬರಲಾರದೆ ಜೀವವನ್ನೇ ಅಂತ್ಯ ಮಾಡಿಕೊಂಡವರು ಒಂದು ಕಡೆಯಾದರೆ, ಈ ನೋವಿನಿಂದ ಹೊರಬರಲು ಕುಡಿತದಂತಹ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಂಡಿರುವ ಹುಡುಗರು ಇನ್ನೊಂದು ಕಡೆ. ಹೀಗಿರುವಾಗ ಬ್ರೇಕಪ್ ಆಯ್ತು ಎಂಬ ಕಾರಣಕ್ಕೆ ಜೀವನ ಹಾಳು ಮಾಡಿಕೊಳ್ಳುವ ಬದಲು ನೋವನ್ನೆಲ್ಲಾ ಮರೆತು ಹ್ಯಾಪಿಯಾಗಿರಲು ನೀವು ಈ ಒಂದಷ್ಟು ಕೆಲಸಗಳನ್ನು ಮಾಡಬೇಕು. ಅದೇನೆಂಬುದನ್ನು ನೋಡೋಣ ಬನ್ನಿ.
ಬ್ರೇಕಪ್ ನಂತರ ಹ್ಯಾಪಿ ಆಗಿರ್ಬೇಕು ಅಂದ್ರೆ ಈ ಕೆಲಸಗಳನ್ನು ಮಾಡಿ:
ನಿಮ್ಮನ್ನು ನೀವು ದೂಷಿಸುವುದನ್ನು ನಿಲ್ಲಿಸಿ: ಬ್ರೇಕಪ್ ಆದ ಬಳಿಕ ಕೆಲವರು ತಮ್ಮ ಬಗ್ಗೆಯೇ ನಕಾರಾತ್ಮಕ ಯೋಚನೆಗಳನ್ನು ಮಾಡುತ್ತಾ, ತಮ್ಮ ಬಗ್ಗೆ ದೂಷಿಸುತ್ತಾ ಮನಸ್ಸಿಗೆ ನೋವು ಮಾಡಿಕೊಳ್ಳುತ್ತಿರುತ್ತಾರೆ. ಈ ಸಂಬಂಧ ಹಾಳಾಗಲು ನಾನೇ ಕಾರಣ ಹಾಗೇ ಹೀಗೆ ಎನ್ನುತ್ತಾ ನಿಮಗೆ ನೀವು ನೋವು ಕೊಡುತ್ತಾ ಕುಳಿತುಕೊಳ್ಳುವ ಬದಲು ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಂಡು ಖುಷಿ ಖುಷಿಯಾಗಿ ನಿಮ್ಮ ಜೀವನವನ್ನು ಮುನ್ನಡೆಸಿ.
ನಿಮ್ಮ ಮಾಜಿ ಪ್ರೇಮಿಯ ನಂಬರ್ ಬ್ಲಾಕ್ ಮಾಡಿ: ಕೆಲವರು ಬ್ರೇಕಪ್ ನಂತರವೂ ಮಾಜಿ ಪ್ರೇಮಿಯ ನಂಬರ್, ಫೋಟೋಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಪದೇ ಪದೇ ಅವರ ಫೋಟೋಗಳನ್ನು ನೀವು ನೋಡಿದರೆ, ಅವರನ್ನು ಮರೆಯಲು ನಿಮಗೆ ಕಷ್ಟಸಾಧ್ಯವಾಗುವುದಲ್ಲದೆ, ನಿಮ್ಮ ಮನಸ್ಸಿಗೂ ನೋವಾಗುತ್ತದೆ. ಹಾಗಾಗಿ ಖುಷಿಯಾಗಿರ್ಬೇಕು ಅಂದ್ರೆ ಮೊದಲು ಮಾಜಿ ಪ್ರೇಮಿಯ ಫೋಟೋ, ನಂಬರ್ ಡಿಲಿಟ್ ಮಾಡಿ.
ನಿಮ್ಮನ್ನು ನೀವು ಕಾರ್ಯನಿರತವಾಗಿಟ್ಟುಕೊಳ್ಳಿ: ಬ್ರೇಕಪ್ ನಂತರ ನಿಮ್ಮ ಮುರಿದ ಸಂಬಂಧ ಮತ್ತು ನಿಮ್ಮ ಮಾಜಿ ಸಂಗಾತಿಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ಇದು ಹೇಳಿದಷ್ಟು ಸುಲಭವಲ್ಲ. ಹಾಗಿರುವಾಗಿ ನಿಮ್ಮನ್ನು ನೀವು ಜಿಮ್‌ಗೆ ಹೋಗುವಂತಹದ್ದು, ಡ್ಯಾನ್ಸ್ ಮಾಡುವುದು ಇತ್ಯಾದಿ ನಿಮ್ಮಿಷ್ಟ ಕೆಲಸಗಳನ್ನು ಮಾಡುತ್ತಾ ನಿಮ್ಮನ್ನು ನೀವು ಕಾರ್ಯನಿರತರಾಗಿಟ್ಟುಕೊಳ್ಳುವ ಮೂಲಕ ಖುಷಿಯಾಗಿರಲು ಪ್ರಯತ್ನಿಸಿ.
ಇದನ್ನೂ ಓದಿ: ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು
ಟ್ರಿಪ್ ಹೋಗಿ: ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಒಂದೊಳ್ಳೆ ಸ್ಥಳಕ್ಕೆ ಟ್ರಿಪ್ ಹೋಗಿ. ಹೀಗೆ ಟ್ರಿಪ್ ಹೋಗುತ್ತಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಒಂದೊಳ್ಳೆ ಸಮಯವನ್ನು ಕಳೆದರೆ ನೀವು ನೋವಿನಿಂದ ಹೊರ ಬರಬಹುದು.
ತಪ್ಪು ವಿಷಯಗಳಿಂದ ದೂರವಿರಿ: ಬ್ರೇಕಪ್ ಆದ ತಕ್ಷಣ ಕೆಲವರು ಧೂಮಪಾನ, ಮದ್ಯಪಾನ ಅಂತೆಲ್ಲಾ ದುಶ್ಚಟಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ನಂತರದಲ್ಲಿ ಈ ಅಭ್ಯಾಸ ಅವರ ಜೀವನವನ್ನೇ ಹಾಳು ಮಾಡಿಬಿಡುತ್ತದೆ. ಆದ್ದರಿಂದ ಸಾಕಷ್ಟು ಸಮಯವನ್ನು ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ, ನಿಮ್ಮಿಷ್ಟದ ಚಟುವಟಿಕೆಗಳನ್ನು ಮಾಡುತ್ತಾ ಕಳೆಯಿರಿ. ಆಗ ನೀವು ಈ ದುಶ್ಚಟಗಳ ಬಗ್ಗೆ ಯೋಚನೆಯೂ ಮಾಡುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ