ತಾಜಾ ತೆಂಗಿನಕಾಯಿ ನಿಜಕ್ಕೂ ಆರೋಗ್ಯಕ್ಕೆ ಪ್ರಯೋಜನಕಾರಿಯೇ?
ಪೂಜಾ ಕಾರ್ಯಗಳಿಂದ ಹಿಡಿದು ತರಹೇವಾರಿ ಅಡುಗೆಯವರೆಗೆ ಹಸಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಇದರಿಂದ ತಯಾರಿಸಿದಂತಹ ಬಗೆಬಗೆಯ ಖಾದ್ಯ, ಭಕ್ಷ್ಯಗಳನ್ನು ನೀವು ಸಹ ಸವಿದಿರುತ್ತೀರಿ ಅಲ್ವಾ. ಆದ್ರೆ ಈ ಹಸಿ ತೆಂಗಿನಕಾಯಿ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ, ಇದನ್ನು ತಿನ್ನುವುದರಿಂದ ಲಭಿಸುವ ಪ್ರಯೋಜನಗಳಾದರೂ ಏನು ಎಂಬುದನ್ನು ತಿಳಿಯಿರಿ.

ಸೀಯಾಳ ಅಥವಾ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ನೈಸರ್ಗಿಕ ಪಾನೀಯ ಚರ್ಮದಿಂದ ಹಿಡಿದು ಕೂದಲ ಆರೋಗ್ಯವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಇದರಂತೆಯೇ ಹಸಿ ತೆಂಗಿನಕಾಯಿಯೂ ಪ್ರಯೋಜನಕಾರಿಯೇ? ಪೂಜಾ ಕಾರ್ಯಗಳಿಂದ ಹಿಡಿದು ತರಹೇವಾರಿ ಅಡುಗೆಯವರೆಗೆ ಬಳಕೆಯಾಗುವ ಬಹುಪಯೋಗಿ ತೆಂಗಿನಕಾಯಿ (fresh coconut) ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ? ಈ ಬಗ್ಗೆ ಡಾ. ಸುನೀತಾ ಸಾಯಮ್ಮಗಾರು (Sunita Sayammagaru) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ವಿವರಣೆಯನ್ನು ನೀಡಿದ್ದಾರೆ. ಇವರು ಹೇಳಿರುವ ಪ್ರಕಾರ ತಾಜಾ ತೆಂಗಿನಕಾಯಿ ಸೇವನೆ ಒಳ್ಳೇದೋ ಅಥವಾ ಕೆಟ್ಟದ್ದೋ ಎಂಬುದನ್ನು ನೋಡೋಣ ಬನ್ನಿ.
ತಾಜಾ ತೆಂಗಿನಕಾಯಿ ನಿಜಕ್ಕೂ ಆರೋಗ್ಯಕ್ಕೆ ಪ್ರಯೋಜನಕಾರಿಯೇ?
ವಿವಿಧ ಭಕ್ಷ್ಯ, ಖಾದ್ಯಗಳ ತಯಾರಿಯಿಂದ ಹಿಡಿದು ಪೂಜಾ ಕಾರ್ಯಗಳವರೆಗೆ ಬಹುಪಯೋಗಿಯಾಗಿರುವ ತಾಜಾ ತೆಂಗಿನಕಾಯಿ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಮಾಹಿತಿಯನ್ನು ಡಾ. ಸುನೀತಾ ಸಾಯಮ್ಮಗಾರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಅವರು ಹೇಳುವಂತೆ, ಇದರ ಪೌಷ್ಠಿಕಾಂಶದ ಬಗ್ಗೆ ನೋಡುವುದಾದರೆ, 100 ಗ್ರಾಂ ತಾಜಾ ತೆಂಗಿನಕಾಯಿಯಲ್ಲಿ 354 ಕ್ಯಾಲೋರಿ, 15 ಗ್ರಾಂ ಕಾರ್ಬೋಹೈಡ್ರೇಟ್, 9 ಗ್ರಾಂ ಫೈಬರ್ 9, ಪ್ರೋಟೀನ್ 3.3 ಗ್ರಾಂ (100 ಮಿಲಿ ಲಿ ಹಾಲಿಗೆ ಸಮ), ಕೊಬ್ಬು 33 ಗ್ರಾಂ ಮತ್ತು ಮೀಡಿಯಂ ಚೈನ್ ಟ್ರೈಗ್ಲಿಸರೈಡ್ (MTC) 30 ಗ್ರಾಂ ಇದೆ. ಈ MCT ಕೊಬ್ಬು ನಷ್ಟ ಮತ್ತು ತೂಕ ನಷ್ಟಕ್ಕೆ ಸಹಕಾರಿ ಎಂಬುದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದು ಬಂದಿದೆ ಎಂಬುದನ್ನು ಅವರು ಹೇಳಿದ್ದಾರೆ. ಇನ್ನೂ ತಾಜಾ ತೆಂಗಿನಕಾಯಿಯಲ್ಲಿ ಖನಿಜಗಳು ಮತ್ತು ಜೀವಸತ್ವಗಳು ಎಷ್ಟಿದೆ ಎಂಬುದನ್ನು ನೋಡುವುದುದಾರೆ, ತಾಜಾ ತೆಂಗಿನಕಾಯಿಯಲ್ಲಿ ತಾಮ್ರ, ಸೆಲೆನಿಯಮ್, ಸತು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಇದೆ. ಇನ್ನೂ ವಿಟಮಿನ್ ಬಿ 12, 2, 3, 6, 9 ಮತ್ತು ವಿಟಮಿನ್ ಸಿ ಮತ್ತು ಇ ಕೂಡ ಇದೆ.
ಇಷ್ಟೆಲ್ಲಾ ಪೋಷಕಾಂಶಗಳಿಂದ ಕೂಡಿರುವ ತಾಜಾ ತೆಂಗಿನಕಾಯಿಯನ್ನು ಸೇವನೆ ಮಾಡುವುದು ಉತ್ತಮ. ಆದರೆ, ಇದನ್ನು ದಿನಕ್ಕೆ 100 ಗ್ರಾಂ ಸೇವಿಸುವ ಬದಲು ದಿನಕ್ಕೆ 30 ರಿಂದ 40 ಗ್ರಾಂ ಸೇವಿಸಬೇಕು. ಊಟದ ಭಾಗವಾಗಿ ಅಥವಾ ತಿಂಡಿಯ ರೂಪದಲ್ಲೂ ಇದನ್ನು ಸೇವನೆ ಮಾಡಬಹುದು. ಇದರ ಸೇವನೆ ಹೊಟ್ಟೆಗೆ ತೃಪ್ತಿಯನ್ನು ನೀಡುವುದು ಮಾತ್ರವಲ್ಲದೆ, ಇದು ಜಂಕ್ ಫುಡ್ ಹಾಗೂ ಹೆಚ್ಚಿನ ಕಾರ್ಬ್ ಆಹಾರಗಳ ಅತಿಯಾದ ಸೇವನೆಯನ್ನು ಕೂಡಾ ತಪ್ಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪೋಸ್ಟ್ ಇಲ್ಲಿದೆ ನೋಡಿ:
Fresh coconut: Is it good or bad?
Let us look at the Nutrition facts first:
100 gms of fresh coconut has:
– Calories: 354
– Carbs: 15 gms, of which fibre is 9 gms.
– Protein: 3.3 gms (almost equivalent to 100 ml milk)
– Fat: 33 gms, of which saturated fat is 30 gms, and… pic.twitter.com/Ow3t0n4lx8
— Sunita Sayammagaru 🇮🇳🇬🇧 (@drsunita02) July 26, 2025
ಹಸಿ ತೆಂಗಿನಕಾಯಿಯ ಆರೋಗ್ಯ ಪ್ರಯೋಜನಗಳು:
ರೋಗನಿರೋಧಕ ಶಕ್ತಿ: ಹಸಿ ತೆಂಗಿನಕಾಯಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ತೆಂಗಿನಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಅಂಶಗಳು ಇರುವುದರಿಂದ ಇದು ನಿಮ್ಮನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಬೊಜ್ಜು ಕಡಿಮೆ ಮಾಡುತ್ತದೆ: ಹಸಿ ತೆಂಗಿನಕಾಯಿ ತೂಕ ಇಳಿಸಿಕೊಳ್ಳಲು ಸಹಕಾರಿ. ತೆಂಗಿನಕಾಯಿಯಲ್ಲಿರುವ ಟ್ರೈಗ್ಲಿಸರೈಡ್‌ಗಳು ದೇಹದಲ್ಲಿನ ಕೊಬ್ಬನ್ನು ವೇಗವಾಗಿ ಸುಡಲು ಮತ್ತು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ತೂಕವನ್ನು ನಿಯಂತ್ರಿಸಬಹುದು.
ಮೆದುಳನ್ನು ಚುರುಕುಗೊಳಿಸಲು ಸಹಕಾರಿ: ಹಸಿ ತೆಂಗಿನಕಾಯಿ ದೇಹಕ್ಕೆ ಮಾತ್ರವಲ್ಲದೆ ಮೆದುಳಿಗೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತುಂಬಾನೇ ಸಹಕಾರಿ. ಇದರಲ್ಲಿ ಕಬ್ಬಿಣ ಮತ್ತು ವಿಟಮಿನ್ ಬಿ6 ಇದ್ದು, ಇದು ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ, ಎಷ್ಟು ದಪ್ಪವಿದ್ದರೂ ತೆಳ್ಳ ಆಗಬಹುದು
ಚರ್ಮ ಹಾಗೂ ಕೂದಲಿಗೆ ಪ್ರಯೋಜನಕಾರಿ: ಹಸಿ ತೆಂಗಿನಕಾಯಿಯಲ್ಲಿ ಜೀವಸತ್ವಗಳ ಜೊತೆಗೆ, ಬಹಳಷ್ಟು ಉತ್ಕರ್ಷಣ ನಿರೋಧಕ ಅಂಶಗಳಿವೆ.ಇದು ಚರ್ಮಕ್ಕೆ ಮತ್ತು ಕೂದಲಿಗೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ. ಇದರಲ್ಲಿ ಕಂಡುಬರುವ ವಿಟಮಿನ್ ಇ ಚರ್ಮವನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ. ಮತ್ತು ಹಸಿ ತೆಂಗಿನಕಾಯಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್‌ಗಳನ್ನು ತಡೆಯುವ ಮೂಲಕ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತವೆ.
ಜೀರ್ಣಕ್ರಿಯೆಗೆ ಸಹಕಾರಿ: ಹಸಿ ತೆಂಗಿನಕಾಯಿ ಪೋಷಕಾಂಶಗಳು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಆರೋಗ್ಯ ಮತ್ತು ಕರುಳಿನ ಚಲನೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಕೂಡಾ ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








