AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ, ಎಷ್ಟು ದಪ್ಪವಿದ್ದರೂ ತೆಳ್ಳ ಆಗಬಹುದು

ಅಂಜೂರವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದಿರುವ ವಿಚಾರ. ಆದರೆ ತಜ್ಞರು ಹೇಳುವ ಪ್ರಕಾರ ಇದನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಅವುಗಳ ಪ್ರಯೋಜನ ಸಿಗುತ್ತದೆ. ಹಾಗಾಗಿ ಅವುಗಳಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯುವುದರ ಜೊತೆಗೆ ಯಾವಾಗ? ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವನೆ ಮಾಡಬಹುದೇ? ಯಾವ ಸಮಯದಲ್ಲಿ ಸೇವನೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ, ಎಷ್ಟು ದಪ್ಪವಿದ್ದರೂ ತೆಳ್ಳ ಆಗಬಹುದು
Anjeer Benefits
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 26, 2025 | 7:23 AM

Share

ಅಂಜೂರದ (Anjeer) ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ತಜ್ಞರು ಹೇಳುವ ಪ್ರಕಾರ ಇವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಅವುಗಳಲ್ಲಿರುವ ಆರೋಗ್ಯ (Health) ಪ್ರಯೋಜನಗಳು ಸಿಗುತ್ತದೆ. ಈ ಅಂಜೂರವು ಆರೋಗ್ಯಕ್ಕೆ ತುಂಬಾ ಒಳ್ಳೆಯದಾದರೂ ಅವುಗಳನ್ನು ಯಾವ ರೀತಿಯಲ್ಲಿ ಸೇವನೆ ಮಾಡಬೇಕು ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ. ಆದರೆ ಇವುಗಳನ್ನು ಯಾವ ಸಮಯದಲ್ಲಿ ಸೇವನೆ ಮಾಡುತ್ತೇವೆ ಎಂಬುದರ ಮೇಲೆ ಇವುಗಳಿಂದ ಸಿಗುವ ಪ್ರಯೋಜನಗಳು ಅವಲಂಬಿತವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು. ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವನೆ ಮಾಡಬಹುದೇ? ಯಾವ ಸಮಯದಲ್ಲಿ ಸೇವನೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಅಂಜೂರವನ್ನು ಯಾವಾಗ ಸೇವನೆ ಮಾಡಬೇಕು?

ಊಟದ ನಂತರ ನಿಮ್ಮ ಫೈಬರ್ ಸೇವನೆಯ ಭಾಗವಾಗಿ ನೀವು ಒಂದು ಅಥವಾ ಎರಡು ಅಂಜೂರವನ್ನು ತಿನ್ನಬಹುದು. ಇದು ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ, ಈ ಅಭ್ಯಾಸವನ್ನು ತಪ್ಪದೆ ರೂಢಿಸಿಕೊಂಡರೆ ಕಿಣ್ವಗಳು ಬಿಡುಗಡೆಯಾಗುತ್ತವೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ. ಇದಕ್ಕಿಂತ ಹೆಚ್ಚಿನ ಪ್ರಯೋಜನಗಳು ಬೇಕಾದರೆ, ಎರಡು ಅಥವಾ ಮೂರು ಅಂಜೂರವನ್ನು ಅರ್ಧ ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಎದ್ದು ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವನೆ ಮಾಡಿ. ಇವುಗಳನ್ನು ನಿಯಮಿತವಾಗಿ ಮಾಡಿದರೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ ನಿಮ್ಮ ತೂಕ ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನ ತಪ್ಪದೆ ಮಾಡಿ; ಯಾವ ರೋಗವೂ ಬರಲ್ಲ

ಇದನ್ನೂ ಓದಿ
Image
ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಮಾಯ
Image
ನೆನೆಸಿಟ್ಟ ವಾಲ್ನಟ್ಸ್ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸ್ಟೋರಿ ಓದಿ
Image
ಪ್ರತಿನಿತ್ಯ  ಒಂದು ಲವಂಗ ಸೇವನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ!
Image
ಮೆದುಳು ಚುರುಕಾಗಿ ಕೆಲಸ ಮಾಡಲು ತಪ್ಪದೆ ಈ ಆಹಾರಗಳನ್ನು ಸೇವನೆ ಮಾಡಿ

ಇದರ ನೀರು ಕೂಡ ಆರೋಗ್ಯಕ್ಕೆ ಒಳ್ಳೆಯದು:

ಅಂಜೂರವನ್ನು ನೆನೆಸಿ ಆ ನೀರನ್ನು ಕುಡಿಯುವುದರಿಂದಲೂ ಕೂಡ ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಹೊಟ್ಟೆ ನೋವು ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾತ್ರವಲ್ಲ ಅಂಜೂರ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ನಿವಾರಿಸಿ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ರಾತ್ರಿ ಸಮಯದಲ್ಲಿ ಎರಡು ಅಂಜೂರವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಕೂಡ ಸೇವಿಸಬಹುದು. ಊಟದ ನಂತರ, ಈ ರೀತಿ ಮಾಡುವುದರಿಂದ ಆಯಾಸ, ಸುಸ್ತು ಎಲ್ಲವೂ ಕಡಿಮೆಯಾಗುತ್ತದೆ. ಮಾತ್ರವಲ್ಲ ಶಕ್ತಿಯನ್ನು ಹೆಚ್ಚಿಸುತ್ತದೆ. ತಜ್ಞರು ದಿನಕ್ಕೆ ಎರಡು ಅಥವಾ ಮೂರು ಅಂಜೂರ ಸೇವನೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಏಕೆಂದರೆ ಇದನ್ನು ಅತಿಯಾಗಿ ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ