AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆದುಳು ಚುರುಕಾಗಿರಬೇಕು ಅಂದ್ರೆ ಈ ಆಹಾರಗಳ ಸೇವನೆ ಮಾಡುವುದನ್ನು ಮರೆಯಬೇಡಿ

ಮೆದುಳು ಆರೋಗ್ಯವಾಗಿರಲು ಸರಿಯಾದ ಪೋಷಕಾಂಶಗಳು ಅತ್ಯಗತ್ಯ. ನಾವು ಸೇವಿಸುವ ಆಹಾರವು ಮೆದುಳಿನ ಸಾಮರ್ಥ್ಯ, ಸ್ಮರಣಶಕ್ತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೆದುಳು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿ ಕೆಲಸ ಮಾಡುತ್ತದೆ. ಹಾಗಾದರೆ ನಾವು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು? ಯಾಕೆ ಇದು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.

ಮೆದುಳು ಚುರುಕಾಗಿರಬೇಕು ಅಂದ್ರೆ ಈ ಆಹಾರಗಳ ಸೇವನೆ ಮಾಡುವುದನ್ನು ಮರೆಯಬೇಡಿ
Brain Health
ಪ್ರೀತಿ ಭಟ್​, ಗುಣವಂತೆ
|

Updated on: Jul 15, 2025 | 3:33 PM

Share

ನಮ್ಮ ದೇಹದಲ್ಲಿ ಮೆದುಳು (Brain) ಅತ್ಯಂತ ಮುಖ್ಯವಾದ ಅಂಗ ಎಂಬುದು ತಿಳಿದ ವಿಚಾರ. ಅದು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ಬೇಕಾಗುತ್ತವೆ. ನಿಮಗೆ ತಿಳಿದಿರಬಹುದು, ನಾವು ಸೇವಿಸುವ ಆಹಾರವು ಮೆದುಳಿನ ಸಾಮರ್ಥ್ಯ, ಸ್ಮರಣಶಕ್ತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮೆದುಳನ್ನು ಸಕ್ರಿಯವಾಗಿಡಲು ಮತ್ತು ಅದರ ಆರೋಗ್ಯವನ್ನು ಸುಧಾರಿಸಲು ನಮ್ಮ ಆಹಾರ ಯಾವ ರೀತಿ ಇರುತ್ತದೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಮೆದುಳಿನ ಆರೋಗ್ಯ (Brain Health) ಕಾಪಾಡಿಕೊಳ್ಳಲು ಅಗತ್ಯವಿರುವಂತಹ ಕೆಲವು ಅದ್ಭುತ ಆಹಾರಗಳ ಬಗ್ಗೆ ತಿಳಿದುಕೊಂಡು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಮ್ಮ ಬುದ್ಧಿಶಕ್ತಿ ಚೆನ್ನಾಗಿರುತ್ತದೆ ಮಾತ್ರವಲ್ಲ, ಸಣ್ಣ ವಯಸ್ಸಿನಲ್ಲಿಯೇ ಕಾಡುವ ಮರೆಗುಳಿತನವನ್ನು ಹೋಗಲಾಡಿಸುತ್ತದೆ. ಹಾಗಾದರೆ ನಾವು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು? ಯಾಕೆ ಇದು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.

ಒಮೆಗಾ-3 ಕೊಬ್ಬಿನಾಮ್ಲಗಳು

ನಿರ್ದಿಷ್ಟವಾಗಿ ಹೇಳುವುದಾದರೆ, ಒಮೆಗಾ-3 ಕೊಬ್ಬಿನಾಮ್ಲಗಳು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. ಅವು ಮೆದುಳಿನ ಕೋಶಗಳ ರಚನೆ ಮತ್ತು ಕಾರ್ಯಕ್ಕೆ ಸಹಾಯ ಮಾಡುತ್ತವೆ. ಅಗಸೆ ಬೀಜಗಳು, ಚಿಯಾ ಬೀಜಗಳು ಮತ್ತು ವಾಲ್ನಟ್‌ಗಳಂತಹ ಆಹಾರಗಳಲ್ಲಿ ಒಮೆಗಾ- 3 ಹೇರಳವಾಗಿವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಮರಣಶಕ್ತಿ ಮತ್ತು ಏಕಾಗ್ರತೆ ಸುಧಾರಿಸುತ್ತದೆ.

ಉತ್ಕರ್ಷಣ ನಿರೋಧಕಗಳು

ನಿಮಗೆ ತಿಳಿದಿರಲಿ, ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಮೆದುಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಬ್ಲೂಬೆರ್ರಿಗಳು, ಕಪ್ಪು ದ್ರಾಕ್ಷಿಗಳು, ಪಾಲಕ್ ಮತ್ತು ಬ್ರೊಕೊಲಿ ಮೆದುಳಿಗೆ ತುಂಬಾ ಒಳ್ಳೆಯದು. ಅವುಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಮೆದುಳಿನ ಕೋಶಗಳಿಗೆ ರಕ್ಷಣೆ ನೀಡುತ್ತವೆ. ಡಾರ್ಕ್ ಚಾಕೊಲೇಟ್ ಸಹ ಮೆದುಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ
Image
ಕೇವಲ 5 ಮುನ್ನೆಚ್ಚರಿಕೆಗಳನ್ನು ಅನುಸರಿಸಿ, ಹೃದಯಾಘಾತ ಸಂಭವಿಸುವುದಿಲ್ಲ
Image
ಮಧುಮೇಹಿಗಳು ಯಾವ ತರಕಾರಿ ತಿನ್ನಬಾರದು ಗೊತ್ತಾ?
Image
ಪೇರಳೆ ಹಣ್ಣು ಇಷ್ಟನಾ? ಆದ್ರೆ ನಿಮಗೆ ಈ ಖಾಯಿಲೆ ಇದ್ರೆ ತಿನ್ನಬೇಡಿ
Image
ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಅರಿಶಿನ

ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ.

ಕುಂಬಳಕಾಯಿ ಬೀಜಗಳು

ಇವು ಸತು, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅಗತ್ಯ ಖನಿಜಗಳನ್ನು ಒದಗಿಸುತ್ತವೆ. ಜೊತೆಗೆ ನಮ್ಮ ಮೆದುಳಿನ ಕಾರ್ಯಕ್ಕೆ ಕೊಡುಗೆ ನೀಡುತ್ತವೆ.

ಇದನ್ನೂ ಓದಿ: ಈ ಆಹಾರ ಸೇವನೆ ಮಾಡಿದರೆ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತೆ

ಮೊಟ್ಟೆ

ಇವು ಕೋಲೀನ್, ವಿಟಮಿನ್ ಬಿ 6 ಮತ್ತು ಬಿ 12 ನಂತಹ ಪೋಷಕಾಂಶಗಳನ್ನು ಪೂರೈಸುತ್ತವೆ, ಇವು ಸ್ಮರಣೆ ಮತ್ತು ಮೆದುಳಿನ ಕೋಶಗಳ ಬೆಳವಣಿಗೆಗೆ ಅವಶ್ಯಕ. ಇವುಗಳ ಜೊತೆಗೆ, ಹಸಿರು ತರಕಾರಿಗಳು, ಬೀಜಗಳು, ಕೊಬ್ಬಿನ ಮೀನು ಮತ್ತು ಧಾನ್ಯಗಳು ಮೆದುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ- ಮುಕ್ತ ಜೀವನದ ಜೊತೆಗೆ ಸರಿಯಾದ ಆಹಾರವು ಮೆದುಳನ್ನು ಸಕ್ರಿಯವಾಗಿರಿಸುತ್ತದೆ. ಈ ಆಹಾರಗಳನ್ನು ದೈನಂದಿನ ಜೀವನದಲ್ಲಿ ಸೇರಿಸಿಕೊಳ್ಳುವ ಮೂಲಕ, ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ