AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು

ಇತ್ತೀಚಿಗಷ್ಟೇ ಅಮೆರಿಕದ ಟೆಕ್‌ ಕಂಪನಿ ಅಸ್ಟ್ರೊನೊಮರ್‌ ಸಿಇಒ ಆಂಡಿ ಬೇರಾನ್‌ ತಮ್ಮ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯ ಜೊತೆ ಕೋಲ್ಡ್‌ ಪ್ಲೇ ಕಾರ್ಯಕ್ರಮದಲ್ಲಿ ಸರಸವಾಗಿ ಜಾಗತಿಕವಾಗಿ ಸುದ್ದಿಯಾಗಿದ್ದರು. ಅಷ್ಟಕ್ಕೂ ಮದುವೆಯಾದ ಪುರುಷರು ಮನೆಯಲ್ಲಿ ಹೆಂಡತಿಯಿದ್ದರೂ ಇನ್ನೊಬ್ಬಳ ಮೋಹಕ್ಕೆ ಬೀಳುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು
ಸಾಂದರ್ಭಿಕ ಚಿತ್ರ Image Credit source: Google
ಮಾಲಾಶ್ರೀ ಅಂಚನ್​
|

Updated on: Jul 23, 2025 | 5:11 PM

Share

ಪ್ರೀತಿ ಮತ್ತು ನಂಬಿಕೆಯ ಮೇಲೆ ಸಂಸಾರ ಎನ್ನುವಂತಹದ್ದು ನಿಂತಿರುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ (extramarital affairs) ಪ್ರಕರಣಗಳು ತೀರಾ ಹೆಚ್ಚಾಗಿ ಕೇಳಿ ಬರುತ್ತಿವೆ. ಹೆಂಡತಿಯು ಗಂಡ-ಮಕ್ಕಳು ಇದ್ರೂ ಪರ ಪುರುಷನತ್ರ ಆಕರ್ಷಿತಳಾದ್ರೆ, ಗಂಡನಾದವನು ಮನೆಯಲ್ಲಿ ಹೆಂಡತಿಯಿದ್ದರೂ ಇನ್ನೊಬ್ಬಳ ಮೋಹಕ್ಕೆ ಬೀಳುತ್ತಾನೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚಿಗಷ್ಟೇ ಅಮೆರಿಕದ ಟೆಕ್‌ ಕಂಪನಿ  ಅಸ್ಟ್ರೊನೊಮರ್‌ ಸಿಇಒ ಆಂಡಿ ಬೇರಾನ್‌ ತಮಗೆ ಹೆಂಡತಿ ಮಕ್ಕಳಿದ್ರೂ ತಮ್ಮ ಕಂಪನಿಯ ಹೆಚ್‌.ಆರ್ ಜೊತೆ ಕೋಲ್ಡ್‌ ಪ್ಲೇ ಕಾರ್ಯಕ್ರಮದಲ್ಲಿ ಸರಸವಾಗಿ ಜಾಗತಿಕವಾಗಿ ಸುದ್ದಿಯಾಗಿದ್ದರು.‌ ಅಷ್ಟಕ್ಕೂ ವಿವಾಹಿತ ಪುರುಷರು ಹೆಂಡತಿಯಿದ್ದರೂ ಅನ್ಯ ಮಹಿಳೆಯರತ್ತ ಆಕರ್ಷಿತರಾಗೋದು ಏಕೆ ಗೊತ್ತಾ? ಈ ಬಗ್ಗೆ ಚಾಣಕ್ಯರು (Chanakya) ಕೂಡ ತಮ್ಮ ನೀತಿ ಶಾಸ್ತ್ರದಲ್ಲಿ ವಿವರಿಸಿದ್ದಾರೆ. ಅದೇನೆಂಬುದನ್ನು ನೋಡೋಣ ಬನ್ನಿ.

ವಿವಾಹಿತ ಪುರುಷರು ಅನ್ಯ ಮಹಿಳೆಯತ್ತ ಆಕರ್ಷಿತರಾಗೋದೇಕೆ?

ವಿವಾಹಿತ ಪುರುಷರು ತಮ್ಮ ಹೆಂಡತಿಯರನ್ನು ಬಿಟ್ಟು ಇತರ ಮಹಿಳೆಯರತ್ತ ಆಕರ್ಷಿತರಾಗಲು ಅಥವಾ ವಿವಾಹೇತರ ಸಂಬಂಧವನ್ನು ಹೊಂದಲು ಸಾಕಷ್ಟು ಕಾರಣವಿದೆಯಂತೆ. ಅವುಗಳ ಬಗ್ಗೆ ಚಾಣಕ್ಯರ ನೀತಿ ಶಾಸ್ತ್ರದಲ್ಲೂ ಉಲ್ಲೇಖಿಸಲಾಗಿದೆ. ಹಾಗಿದ್ರೆ ಚಾಣಕ್ಯರ ಪ್ರಕಾರ ವಿವಾಹಿತ ಪುರುಷರು ಇನ್ನೊಬ್ಬಳತ್ತ ಆಕರ್ಷಿತರಾಗುವುದು ಏಕೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಣ್ಣ ವಯಸ್ಸಿನಲ್ಲಿ ಮದುವೆ: ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಕೆಲವೊಮ್ಮೆ ಸಂಬಂಧಕ್ಕೆ ಹಾನಿಕಾರಕವಾಗಬಹುದು. ಈ ವಯಸ್ಸಿನಲ್ಲಿ ಅರಿವಿನ ಕೊರತೆಯೂ ಇರುತ್ತದೆ. ಆದರೆ ಒಂದು ಹಂತವನ್ನು ತಲುಪಿದ ಬಳಿಕ ಆಸೆಗಳು ಬದಲಾಗುತ್ತದೆ, ಇನ್ನಿಚ್ಛೆಯ ಇತರರ ಕಡೆಗೆ ಆಕರ್ಷಣೆ ಹೆಚ್ಚಾಗುತ್ತದೆ. ಹಾಗಾಗಿ ತಡವಾಗಿ ಮದುವೆಯಾದರೂ ಪರವಾಗಿಲ್ಲ, ನಿಮಗೆ ಬೇಕಾಗಿರುವ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

ಇದನ್ನೂ ಓದಿ
Image
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ
Image
ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ
Image
ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
Image
ಗಂಡನ ಕೋಪವನ್ನು ಈ ರೀತಿ ಕಮ್ಮಿ ಮಾಡಿ

ಅತೃಪ್ತಿ: ಒಬ್ಬ ಪುರುಷನು ಹೆಂಡತಿಯ ಜಗಳ, ಸಂಸಾರದ ಗೋಳು ಸೇರಿದಂತೆ ತನ್ನ ವೈವಾಹಿಕ ಜೀವನದಲ್ಲಿ ಅತೃಪ್ತನಾದಾಗ, ಅವನು ಭಾವನಾತ್ಮಕ ಬೆಂಬಲಕ್ಕಾಗಿ ಅನ್ಯ ಮಹಿಳೆಯ ಮೋಹಕ್ಕೆ ಸಿಲುಕಿವ ಸಾಧ್ಯತೆ ಇರುತ್ತದೆ.  ಇದು ಸಾಮಾನ್ಯವಾಗಿ ಪತಿ ಮತ್ತು ಪತ್ನಿಯ ನಡುವೆ ಸಂವಹನ ಮತ್ತು ತಿಳುವಳಿಕೆಯ ಕೊರತೆಯಿದ್ದಾಗ ಸಂಭವಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.

ದೈಹಿಕ ಸಂಬಂಧದಲ್ಲಿ ಅತೃಪ್ತಿ: ಗಂಡ ಹೆಂಡತಿಯ ನಡುವಿನ ದೈಹಿಕ ಸಂಬಂಧ ತೃಪ್ತಿಕರವಾಗಿಲ್ಲದಿದ್ದರೂ, ಗಂಡನಿಗೆ ಸಂಬಂಧದಲ್ಲಿನ ಆಕರ್ಷಣೆ ಕಡಿಮೆಯಾಗುತ್ತದೆ. ಇದರಿಂದಾಗಿ ಅವನು ಅನ್ಯ ಮಹಿಳೆಯತ್ತ ಆಕರ್ಷಿತನಾಗುತ್ತಾನೆ. ಕೊನೆಗೆ  ಇದು ವೈವಾಹಿಕ ಜೀವನದಲ್ಲಿ ಅಡಚಣೆ ಉಂಟು ಮಾಡುತ್ತದೆ.

ಮಕ್ಕಳ ಕಾರಣ: ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳಾದ ಬಳಿಕ ಪುರುಷರು ಹೆಂಡತಿಯಿಂದ ದೂರವಾಗಿ ಇನ್ನೊಬ್ಬ ಮಹಿಳೆಯತ್ತ ಆಕರ್ಷಿತರಾಗುತ್ತಾರೆ.  ಏಕೆಂದರೆ ಹೆಂಡತಿ ತನ್ನೆಲ್ಲಾ ಗಮನವನ್ನು ಮಗುವಿನ ಮೇಲೆ ಕೇಂದ್ರೀಕರಿಸುತ್ತಾಳೆ. ಇದರಿಂದಾಗಿ ಗಂಡ ಇನ್ನೊಬ್ಬಳ ಮೋಹಕ್ಕೆ ಬೀಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಈ ತಪ್ಪುಗಳಿಂದ ಸುಂದರ ಸಂಬಂಧ ಹಾಳಾಗುತ್ತಂತೆ

ಇತರರೊಂದಿಗೆ ಹೋಲಿಕೆ: ಅನೇಕ ಪುರುಷರು ತಮ್ಮ ಹೆಂಡತಿಯನ್ನು ಇತರ ಮಹಿಳೆಯೊಂದಿಗೆ ಹೋಲಿಕೆ ಮಾಡುತ್ತಾರೆ. ಅವಳು ಸಣ್ಣಗಾಗಿ ತುಂಬಾ ಸುಂದರವಾಗಿದ್ದಾಳೆ, ಆದ್ರೆ ನನ್ನ ಹೆಂಡತಿ ಸುಂದರವಾಗಿಲ್ಲ. ಈ ರೀತಿಯ ಬಾಹ್ಯ ಆಕರ್ಷಣೆಯೂ ಕೂಡಾ ವಿವಾಹಿತ ಪುರುಷ ಇನ್ನೊಬ್ಬಳ ಮೋಹಕ್ಕೆ ಬೀಳಲು ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ.

ಪ್ರೀತಿ ಸಿಗದೆ ಹೋದಾಗ: ಹೆಂಡತಿಯ ಕಡೆಯಿಂದ ಯಾವುದೇ ಪ್ರೀತಿ ಸಿಗದೆ ಹೋದರೆ, ವಿವಾಹಿತ ಪುರುಷರು ಇನ್ನೊಬ್ಬಳ ಮೋಹಕ್ಕೆ ಬೀಳುತ್ತಾರಂತೆ. ಹೌದು ವೈವಾಹಿಕ ಜೀವನದಲ್ಲಿ ಭಾವನಾತ್ಮಕವಾಗಿ, ದೈಹಿಕವಾಗಿ ಪ್ರೀತಿ-ಸಂತೋಷ ಸಿಗದೆ ಹೋದರೆ, ಆ ಸಂತೋಷವನ್ನು ಹೊರಗೆ ಹುಡುಕುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯ ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ