AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು; ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ

ಕುಟುಂಬ ಅಂದ ಮೇಲೆ ಅಲ್ಲಿ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಇದ್ದೇ ಇರುತ್ತದೆ. ಅದರಲ್ಲೂ ಅತ್ತೆ-ಸೊಸೆ ಜಗಳ ಕಾಮನ್.‌ ಹೆಚ್ಚಿನ ಮನೆಗಳಲ್ಲಿ ಅತ್ತೆ ಸೊಸೆ ಜಗಳಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಸೊಸೆಯಾದವಳು ತನ್ನ ಅತ್ತೆಯ ಜೊತೆಗೆ ಈ ಕೆಲವು ಮಾತುಗಳನ್ನಾಡಿದರೆ ಈ ಸಂಬಂಧದಲ್ಲಿ ಬಿರುಕು ಎಂಬುದು ಮೂಡುತ್ತದೆ. ಆ ವಿಷಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು; ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Aug 10, 2025 | 6:59 PM

Share

ಪ್ರತಿಯೊಂದು ಕುಟುಂಬದಲ್ಲೂ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ನಡೆಯುವುದು ಸಾಮಾನ್ಯ. ಅದರಲ್ಲೂ ಅತ್ತೆ ಸೊಸೆ ಜಗಳ ಎನ್ನುವಂತಹದ್ದು ಅನಾದಿ ಕಾಲದಿಂದಲೂ ಇದೆ. ಅತ್ತೆಯ ಕಾಟಕ್ಕೆ ಸೊಸೆ ಮನೆ ಬಿಟ್ಟು ಹೋದಂತಹ, ಸೊಸೆ ತನ್ನ ಅತ್ತೆಯನ್ನು ಮನೆಯಿಂದ ಹೊರ ಹಾಕಿದಂತಹ ಘಟನೆಗಳು ಕೂಡಾ ನಡೆದಿದ್ದುಂಟು. ಈ ಮನಸ್ತಾಪಗಳು ಅತ್ತೆ ಹಾಗೂ ಸೊಸೆಯ ನಡುವಿನ ಒಂದಷ್ಟು ಮಾತುಗಳಂತೆ. ಸೊಸೆಯ ಮಾತುಗಳು ಅತ್ತೆಗೆ ಇಷ್ಟವಾಗುವುದಿಲ್ಲ, ಅತ್ತೆಯ ಮಾತುಗಳು ಸೊಸೆಯಾದವಳಿಗೆ ಕೋಪ ತರಿಸುತ್ತದೆ. ಹೀಗೆ ಮಾತುಗಳಿಂದಲೇ ಅತ್ತೆ ಸೊಸೆ ಸಂಬಂಧದಲ್ಲಿ (mother in law daughter in law relationship) ಬಿರುಕು ಮೂಡಲು ಆರಂಭವಾಗುತ್ತದೆ. ಆದ್ದರಿಂದ ಸೊಸೆಯಾದವಳು ಈ ಕೆಲವು ಮಾತುಗಳನ್ನು ಅತ್ತೆಯ ಮುಂದೆ ಮಾತನಾಡದಿದ್ದರೆ, ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲವಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು:

ನನ್ನ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ: ನಿಮ್ಮ ಅತ್ತೆ ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ಅದನ್ನು ಪ್ರೀತಿಯಿಂದ ಆಲಿಸಿ, ನೀವು ಅದನ್ನು ಸ್ವೀಕರಿಸುತ್ತೀರೋ ಇಲ್ಲವೋ ಎಂಬುದು ನಿಮಗೆ ಬಿಟ್ಟದ್ದು. ಆದರೆ ನಿಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಎಂದಿಗೂ ಹೇಳಬೇಡಿ. ಇದು ಅವರ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ. ಈ ಮಾತು ನಂತರದಲ್ಲಿ ನಿಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಲು ಕಾರಣವಾಗಬಹುದು.

ನಿಮ್ಮ ಉಡುಗೊರೆ ನನಗೆ ಇಷ್ಟವಿಲ್ಲ: ಒಂದು ಉಡುಗೊರೆಯ ಹಿಂದೆ ಹಲವು ಭಾವನೆಗಳಿರುತ್ತವೆ. ನಿಮಗೇನಾದರೂ ನಿಮ್ಮ ಅತ್ತೆ ಉಡುಗೊರೆಯನ್ನು ನೀಡದರೆ, ಅದನ್ನು ನೀವು ಪ್ರೀತಿಯಿಂದ ಸ್ವೀಕರಿಸಿ. ಯಾವುದೇ ಕಾರಣಕ್ಕೂ ಈ ಉಡುಗೊರೆ ನನಗೆ ಇಷ್ಟವಾಗಿಲ್ಲ ಅಥವಾ ನೀವು ತಂದು ಕೊಟ್ಟ ವಸ್ತು ನನಗೆ ಇಷ್ಟವಾಗಿಲ್ಲ ಎಂಬ ಮಾತನ್ನು ಆಡಬೇಡಿ. ಏಕೆಂದರೆ ಇದರಿಂದಲೇ ನಂತರದಲ್ಲಿ ನಿಮ್ಮ ನಡುವೆ ಮನಸ್ತಾಪಗಳು ತಲೆದೋರಬಹುದು.

ಇದನ್ನೂ ಓದಿ
Image
ಮೊಮ್ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಸಮಯ ಕಳೆಯಬೇಕು ಎನ್ನುವುದು ಇದಕ್ಕೆ ನೋಡಿ
Image
ಅತ್ತೆಯೊಂದಿಗೆ ಜಗಳ ಆಗಬಾರದೆಂದರೆ ಸೊಸೆಯಾದವಳು ಹೀಗಿರಬೇಕು
Image
ತಂದೆ ತನ್ನ ಮಗಳ ಮುಂದೆ ತಪ್ಪಿಯೂ ಈ ರೀತಿ ವರ್ತಿಸಬಾರದು
Image
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ

ನೀವು ನನ್ನ ತಾಯಿಯಲ್ಲ: ಕೆಲವು ಸೊಸೆಯಂದಿರು ಕೋಪದಲ್ಲಿ ನೀವು ನನ್ನ ತಾಯಿಯಲ್ಲ, ನಿವ್ಯಾರು ಅದನ್ನೆಲ್ಲಾ ನನಗೆ ಹೇಳಲು ಎಂದು ಗದರಿ ಮಾತನಾಡುತ್ತಾರೆ. ಈ ಕಟು ಮಾತುಗಳು ಖಂಡಿತವಾಗಿಯೂ ಅತ್ತೆಯ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ. ಆದ್ದರಿಂದ ಅತ್ತೆಯ ಬಳಿ ನೀವು ನನ್ನ ತಾಯಿಯಲ್ಲ, ಅವರ ಸಮಾನವೂ ಅಲ್ಲ ಎಂಬ ಚುಚ್ಚು ಮಾತುಗಳನ್ನು ಆಡಲು ಹೋಗಬೇಡಿ.

ನೀವು ನನ್ನನ್ನು ನಿಯಂತ್ರಿಸಬೇಡಿ: ಕೆಲವು ಅತ್ತೆಯಂದಿರೂ ಸೊಸೆ ಏನೇ ಮಾಡಿದರೂ ಎಲ್ಲೇ ಹೋದರೂ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸೊಸೆಯಂದಿರಿಗೆ ತಮ್ಮ ಅತ್ತೆಯ ಈ ಮಾತುಗಳು ಕಿರಿಕಿರಿ ಎಂದೆನಿಸಬಹುದು. ಇದರಿಂದಾಗಿ ನೀವು ನನ್ನನ್ನು ನಿಯಂತ್ರಿಸಲು ಬರಬೇಡಿ, ಇದು ನನ್ನ ಜೀವನ ಅಂತೆಲ್ಲಾ ಮಾತನಾಡುತ್ತಾರೆ. ಆದರೆ ಸೊಸೆಯಾದವಳು ಅತ್ತೆಯ ಮುಂದೆ ಹೀಗೆ ಎದುರು ಮಾತನಾಡಬಾರದು. ಇದುವೇ ನಂತರದಲ್ಲಿ ಅತ್ತೆಸೊಸೆಯ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.

ಇದನ್ನೂ ಓದಿ: ಸೊಸೆಯಾದವಳು ಹೀಗಿದ್ದರೆ ಅತ್ತೆಯ ಜೊತೆ ಜಗಳವೇ ಏರ್ಪಡಲ್ಲವಂತೆ

ನನ್ನ ಮಗುವಿನ ವಿಷಯದಲ್ಲಿ ತಲೆ ಹಾಕಬೇಡಿ: ಅತ್ತೆಯಂದಿರಿಗೆ ಅಂದರೆ ಹಿರಿಯರಿಗೆ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ಅನುಭವವಿದೆ. ಹೀಗಿರುವಾಗ ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಅವರು ನಿಮಗೆ ಸಲಹೆಯನ್ನು ನೀಡಬಹುದು. ಮಕ್ಕಳಿಗೆ ನೀವು ಹೊಡೆದಾಗ ಯಾಕೆ ಮಗುವಿಗೆ ಹೊಡೆಯುತ್ತೀಯಾ ಎಂದು ಗದರಬಹುದು. ಇಂತಹ ಸಂದರ್ಭದಲ್ಲಿ ನಮ್ಮ ವಿಷಯಕ್ಕೆ ತಲೆ ಹಾಕಬೇಡಿ, ನನ್ನ ಮಗುವನ್ನು ನನಗೆ ಹೇಗೆ ನೋಡಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿದೆ ಎಂಬೆಲ್ಲಾ ಕಠಿಣ ಮಾತುಗಳನ್ನಾಡಬೇಡಿ. ಇದು ಅತ್ತೆಯ ಮನಸ್ಸನ್ನು ನೋಯಿಸುವುದು ಮಾತ್ರವಲ್ಲದೆ, ಇದರಿಂದಾಗಿ ಅತ್ತೆ ಸೊಸೆಯ ಒಳ್ಳೆಯ ಸಂಬಂಧವೇ ಹಾಳಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ