AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆಯಾದವಳು ಹೀಗಿದ್ದರೆ ಅತ್ತೆಯ ಜೊತೆ ಜಗಳವೇ ಏರ್ಪಡಲ್ಲವಂತೆ

ಎಲ್ಲರ ಮನೆ ದೋಸೆ ತೂತು ಎಂಬ ಗಾದೆ ಮಾತಿನಂತೆ ಪ್ರತಿ ಮನೆಯಲ್ಲೂ ಕೂಡಾ ಅತ್ತೆ-ಸೊಸೆ ಜಗಳ ಎನ್ನುವಂತಹದ್ದು ಇದ್ದೇ ಇರುತ್ತದೆ. ಅಡುಗೆಯ ವಿಚಾರದಿಂದ ಹಿಡಿದು ಹಣಕಾಸಿನ ವಿಚಾರದವರೆಗೆ ಒಂದಷ್ಟು ಮನಸ್ತಾಪ, ಜಗಳಗಳು ಅತ್ತೆ ಸೊಸೆ ಮಧ್ಯೆ ಏರ್ಪಡುತ್ತಲೇ ಇರುತ್ತದೆ. ಈ ರೀತಿ ಜಗಳಗಳು ನಡೆಯಬಾರದು ಎಂದ್ರೆ ಮುಖ್ಯವಾಗಿ ಸೊಸೆಯಾದವಳು ಈ ಕೆಲವು ಸಲಹೆಗಳನ್ನು ಪಾಲಿಸಬೇಕಂತೆ.

ಸೊಸೆಯಾದವಳು ಹೀಗಿದ್ದರೆ ಅತ್ತೆಯ ಜೊತೆ ಜಗಳವೇ ಏರ್ಪಡಲ್ಲವಂತೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 16, 2025 | 7:57 PM

Share

ಅತ್ತೆ-ಸೊಸೆ (daughter-in-law  mother-in-law) ಜಗಳ ಕಾಮನ್.‌ ಪ್ರತಿಯೊಂದು ಮನೆಯಲ್ಲೂ ಕೂಡಾ ಹೆಚ್ಚಾಗಿ ಅತ್ತೆ ಸೊಸೆಯ ನಡುವೆ ಜಟಾಪಟಿಗಳು ನಡೆಯುತ್ತಲೇ ಇರುತ್ತವೆ. ಅತ್ತೆಯ ಮಾತುಗಳು, ನಡವಳಿಕೆ ಸೊಸೆಗೆ ಕಿರಿಕಿರಿ ಉಂಟು ಮಾಡಿದ್ರೆ, ಸೊಸೆಯ ವರ್ತನೆ ಅತ್ತೆಗೆ ಕೋಪ ತರಿಸುತ್ತದೆ. ಹೀಗೆ ಅಡುಗೆ, ಮನೆ ಕೆಲಸ ಸೇರಿದಂತೆ ಸಣ್ಣಪುಟ್ಟ ವಿಷಯಗಳಿಗೂ ಅತ್ತೆ ಸೊಸೆಯಂದಿರ ನಡುವೆ ಮನಸ್ತಾಪ, ಜಗಳಗಳು (quarrel) ನಡೆಯುತ್ತಲೇ ಇರುತ್ತವೆ. ಕೆಲವೊಂದು ಬಾರಿ ಈ ಸಣ್ಣ ಜಗಳಗಳು ಬೀದಿ ರಂಪ ಆಗೋದು ಕೂಡ ಇದೆ. ಹೀಗಿರುವಾಗ ಸೊಸೆಯಾದವಳು ಈ ಒಂದಷ್ಟು ಸಲಹೆಗಳನ್ನು ಪಾಲಿಸಿದ್ರೆ ಜಗಳಗಳು ಕೂಡಾ ಏರ್ಪಡುವುದಿಲ್ಲ ಜೊತೆಗೆ ಮನೆಯಲ್ಲಿ ಶಾಂತಿ ಎನ್ನುವಂತಹದ್ದು ನೆಲೆಸುತ್ತದೆ. ಹಾಗಿದ್ರೆ ಅತ್ತೆಯೊಂದಿಗೆ ಜಗಳವಾಗಬಾರದೆಂದರೆ ಸೊಸೆಯಾದವಳು ಹೇಗಿರಬೇಕು ಎಂಬುದನ್ನು ನೋಡೋಣ ಬನ್ನಿ.

ಸೊಸೆಯಾದವಳು ಹೀಗಿದ್ದರೆ ಅತ್ತೆಯ ಜೊತೆ ಜಗಳವೇ ಏರ್ಪಡಲ್ಲ:

ತಪ್ಪುಗಳನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ: ಸೊಸೆ ಏನಾದ್ರೂ ತಪ್ಪು ಮಾಡಿದ್ರೆ  ಖಂಡಿತವಾಗಿಯೂ ಅತ್ತೆ ಕೋಪ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ನಿಮ್ಮ ತಪ್ಪುಗಳಿಗೆ ಅತ್ತೆ ಕೋಪ ಮಾಡಿಕೊಂಡಿದ್ದರೆ, ಆ ತಪ್ಪು ಹಾಗೂ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವ ಬದಲು, ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ ಜೊತೆಗೆ ಸಮಸ್ಯೆಗೆ ಇಬ್ಬರೂ ಕುಳಿತು ಪರಿಹಾರ ಕಂಡುಕೊಳ್ಳಿ.

ಪ್ರತಿ ಸಣ್ಣ ವಿಷಯವನ್ನೂ ಗಂಡನ ಬಳಿ ಹೇಳಬೇಡಿ: ಕೆಲವರು ಅತ್ತೆಯ ದೂರುಗಳನ್ನು, ಮನೆಯಲ್ಲಿ ನಡೆಯುವ ಸಣ್ಣಪುಟ್ಟ ವಿಚಾರಗಳ ಬಗ್ಗೆಯೂ ಗಂಡನ ಬಳಿ ಚಾಡಿ ಹೇಳುತ್ತಾರೆ. ಹೀಗೆ ನೀವು ಪ್ರತಿನಿತ್ಯವೂ ಚಾಡಿ ಹೇಳಿದರೆ, ಅಮ್ಮ ಮಗನ ನಡುವೆಯೇ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಜೊತೆಗೆ ಅಮ್ಮ ಮಗನನ್ನು ದೂರ ಮಾಡಿದ ಆರೋಪವೂ ನಿಮ್ಮ ಮೇಲೆ ಬರುತ್ತದೆ. ಹಾಗಾಗಿ ಅತ್ತೆ ಸೊಸೆ ನೀವು ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಇದನ್ನೂ ಓದಿ
Image
ತಂದೆ ತನ್ನ ಮಗಳ ಮುಂದೆ ತಪ್ಪಿಯೂ ಈ ರೀತಿ ವರ್ತಿಸಬಾರದು
Image
ಈ ನಾಲ್ಕು ಜನರನ್ನು ತಂದೆಯಂತೆಯೇ ಗೌರವಿಸಬೇಕು ಎನ್ನುತ್ತಾರೆ ಚಾಣಕ್ಯರು
Image
ಯುವ ಜನತೆ ಕಲಿಯಲೇಬೇಕಾದ ಪ್ರಮುಖ ಜೀವನ ಪಾಠಗಳಿವು
Image
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ

ಎಲ್ಲದಕ್ಕೂ ಕೋಪ ಮಾಡಿಕೊಳ್ಳಬೇಡಿ: ಕೆಲವರು ಅತ್ತೆ ಏನೇ ಹೇಳಿದ್ರೂ ಕೋಪ ಮಾಡಿಕೊಳ್ಳುತ್ತಾರೆ. ಹಿರಿಯರು ನಿಮ್ಮ ಒಳ್ಳೆಯದಕ್ಕಾಗಿಯೇ  ಎಲ್ಲವನನ್ನು ಹೇಳುತ್ತಾರೆ. ಆದರೆ ಅವರು ಹೇಳುವ ರೀತಿ ಸ್ಪಲ್ಪ ಕಠಿಣವಾಗಿರಬಹುದು. ಅದಕ್ಕೆಲ್ಲಾ ನೀವು ಕೋಪ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಹೀಗೆ ಅತ್ತೆ ಹೇಳಿದ ಪ್ರತಿಯೊಂದು ವಿಷಯಕ್ಕೂ ಕೋಪ ಮಾಡಿಕೊಂಡರೆ ನಿಮ್ಮ ಹಾಗೂ ಅತ್ತೆಯ ನಡುವಿನ ಅಂತಹ ಇನ್ನಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ತಂದೆಯಾದವನು ತನ್ನ ಮಗಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ

ಕೋಪದಲ್ಲಿ ಮಾತನಾಡಬೇಡಿ: ಅತ್ತೆ ಏನಾದ್ರೂ ಹೇಳಿದ್ರೆ ಅದಕ್ಕೆಲ್ಲಾ ಕೋಪ ಮಾಡಿಕೊಳ್ಳಬೇಡಿ ಅಥವಾ ಕೋಪದಲ್ಲಿ ಅವರ ಮೇಲೆ ರೇಗಾಡಬೇಡಿ. ಹೀಗೆ ಮಾಡುವುದರಿಂದ ಜಗಳ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅತ್ತೆ-ಮಾವ ಏನೇ ಹೇಳಿದರೂ ಕೋಪ ಮಾಡಿಕೊಳ್ಳಬೇಡಿ. ಇದು ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಅತ್ತೆ-ಮಾವನನ್ನು ಹೆತ್ತವರಂತೆ ನೋಡಿಕೊಳ್ಳಿ: ಮೊದಲು ನೀವು ನಿಮ್ಮ ಅತ್ತೆ ಮಾವನನ್ನು ನಿಮ್ಮ ಹೆತ್ತವರಂತೆ ನೋಡಿಕೊಳ್ಳಲು ಪ್ರಾರಂಭಿಸಿ. ಅತ್ತೆ ಮಾವನನ್ನು ನಿಮ್ಮ ತಂದೆ ತಾಯಿಯಂತೆ ನೋಡಿಕೊಳ್ಳಲು ಪ್ರಾರಂಭಿಸಿದಾಗ ಅರ್ಧದಷ್ಟು ಜಗಳಗಳು ಕೊನೆಗೊಳ್ಳುತ್ತವೆ. ಹೀಗಿದ್ದರೆ ನಿಮ್ಮ ಕುಟುಂಬದಲ್ಲಿ  ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು