AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಜನತೆ ಕಲಿಯಲೇಬೇಕಾದ ಪ್ರಮುಖ ಜೀವನ ಪಾಠಗಳಿವು

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಬಯಸುತ್ತಾನೆ. ಅದರಲ್ಲೂ ಯುವಜನರಂತೂ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಹಪಹಪಿಸುತ್ತಿರುತ್ತಾರೆ. ಹೀಗಿರುವಾಗ ಸಾಧನೆಯ ಮೆಟ್ಟಿಲೇರಲು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಯುವ ಜನರು ಈ ಒಂದಷ್ಟು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಂತೆ. ಆ ವಿಚಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಯುವ ಜನತೆ ಕಲಿಯಲೇಬೇಕಾದ ಪ್ರಮುಖ ಜೀವನ ಪಾಠಗಳಿವು
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on:Jul 08, 2025 | 9:07 PM

Share

ಯುವಕರು (Young stars) ಕಲಿಯಬೇಕಾದ ಜೀವನಪಾಠಗಳು ಬಹಳಷ್ಟಿದೆ. ಈ ಪಾಠಗಳು, ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಒಬ್ಬ ಉತ್ತಮ, ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ಆರೋಗ್ಯವನ್ನು ನೋಡಿಕೊಳ್ಳುವುದರಿಂದ ಹಿಡಿದು ಹಿರಿಯರನ್ನು ಗೌರವಿಸುವುದು, ಸೋಲುಗಳಿಗೆ ಹೆದರದೆ ಮುನ್ನಡೆಯುವವರೆಗೆ ಒಂದಷ್ಟು ಜೀವನ ಪಾಠಗಳನ್ನು (Life lessons) ಯುವ ಜನರು ಅಳವಡಿಸಿಕೊಳ್ಳಲೇಬೇಕು. ಹಾಗಿದ್ರೆ ಯುವ ಜನರು ಯಾವೆಲ್ಲಾ ಪಾಠಗಳನ್ನು ತಿಳಿದುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.

ಯುವ ಜನತೆ ತಿಳಿದುಕೊಳ್ಳಲೇಬೇಕಾದ ಪ್ರಮುಖ ವಿಷಯಗಳಿವು:

ಆರೋಗ್ಯದ ಬಗ್ಗೆ ಕಾಳಜಿ: ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಆರೋಗ್ಯವಿಲ್ಲದೆ ಏನೂ ಸಾಧ್ಯವಿಲ್ಲ. ಆರೋಗ್ಯಗಾಗಿದ್ದರೆ ಮಾತ್ರ ನಾವು ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ. ಅದಕ್ಕಾಗಿ ಉತ್ತಮ ಆಹಾರ ಸೇವಿಸುವುದು, ವ್ಯಾಯಾಮ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ನಿದ್ರೆ ಮಾಡುವುದು ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಗಮನ ನೀಡಬೇಕು.

ಸಮಯಕ್ಕೆ ಮೌಲ್ಯ ನೀಡುವುದು: ಕಳೆದು ಹೋದ ಸಮಯ ಎಂದಿಗೂ ಮರಳಿ ಬರಲು ಸಾಧ್ಯವಿಲ್ಲ. ಹಾಗಾಗಿ ಯುವಕರು ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಮೋಜು ಮಸ್ತಿ ಅಂತೆಲ್ಲಾ ಸಮಯವನ್ನು ವ್ಯರ್ಥ ಮಾಡದೆ, ಆ ಅಮೂಲ್ಯ ಸಮಯವನ್ನು ಉಪಯೋಗಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

ಇದನ್ನೂ ಓದಿ
Image
ಇಂತಹವರಿಗೆ ಯಾವತ್ತಿಗೂ ಸಾಲ ಕೊಡಬಾರದಂತೆ
Image
ಕೆಲಸದ ಹೊರತಾಗಿ ಹೆಚ್ಚುವರಿ ಹಣ ಗಳಿಸೋದು ಹೇಗೆ? ಇಲ್ಲಿವೆ ನೋಡಿ ಅದ್ಭುತ ಸಲಹೆ
Image
ಶಾಪಿಂಗ್‌ ಮಾಡುವಾಗ ಹಣ ಉಳಿಸಲು ಈ ಸಲಹೆ ಪಾಲಿಸಿ
Image
ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ

ನಿರಂತರ ಕಲಿಕೆ: ಕಲಿಕೆ ಅನ್ನುವಂತಹದ್ದು ನಿರಂತರವಾದ್ದು, ಹಾಗಿರುವಾಗ ಪುಸ್ತಕ ಮಾತ್ರವಲ್ಲದೆ ಹೊಸ ಕೌಶಲ್ಯಗಳು, ಉತ್ತಮ ವಿಷಯಗಳನ್ನು ಕಲಿಯುತ್ತಲೇ ಇರಬೇಕು. ಆಗ ನಾವು ಉತ್ತಮ ರೀತಿಯಲ್ಲಿ ಮುಂದುವರೆಯಲು ಸಾಧ್ಯ.

ಗುರಿ ಇರಬೇಕು: ಜೀವನದಲ್ಲಿ ಗುರಿ ಎನ್ನುವಂತಹದ್ದು ಇರಬೇಕು. ನಾನು ಏನಾಗಬೇಕು, ಏನು ಸಾಧಿಸಬೇಕು, ಎಂಬ ಗುರಿಯನ್ನು ಇಟ್ಟುಕೊಳ್ಳಬೇಕು.  ಮತ್ತು ಆ ಗುರಿಯನ್ನು ತಲುಪಲು ನಿರಂತರವಾಗಿ ಶ್ರಮಿಸಬೇಕು.

ಉತ್ತಮ ಸ್ನೇಹ: ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿದೆ. ಈ ಮಾತಿನಂತೆ ಉತ್ತಮರ ಸ್ನೇಹವನ್ನು ಮಾಡಬೇಕು. ಹೌದು ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡದೆ ಪ್ರೋತ್ಸಾಹಿಸುವ, ಕಷ್ಟದಲ್ಲಿ ಜೊತೆಯಾಗಿ ನಿಲ್ಲುವವರ ಸ್ನೇಹವನ್ನು ಮಾಡಿ.

ಹಿರಿಯರಿಗೆ ಗೌರವ: ಹಿರಿಯರಿಗೆ ಗೌರವವನ್ನು ನೀಡುವುದನ್ನು ಕಲಿಯಬೇಕು. ಅಷ್ಟೇ ಅಲ್ಲದೆ ಹಿರಿಯರ ಮಾರ್ಗದರ್ಶನವನ್ನೂ ಪಾಲಿಸಬೇಕು. ಇದು ನೀವು ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಹಣಕಾಸಿನ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಹಣದ ಮೌಲ್ಯ: ಹಣದ ಮೌಲ್ಯದ ಬಗ್ಗೆಯೂ ಪ್ರತಿಯೊಬ್ಬರೂ ತಿಳಿದಿರಬೇಕು. ಹೌದು ದುಂದುವೆಚ್ಚ ಮಾಡಬಾರದು, ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯ ಮಾಡುವುದು ಹೇಗೆ ಎಂಬೆಲ್ಲಾ ವಿಚಾರದ ಬಗ್ಗೆಯೂ ತಿಳಿಯಬೇಕು.

ಸೋಲಿನ ಪಾಠ: ಕೆಲವರು ಸೋತರೆ ಜೀವನವೇ ಮುಗಿದು ಹೋಯಿತು ಎಂದುಕೊಳ್ಳುತ್ತಾರೆ. ಹೀಗೆ ಸೋತರೆ ಹೇಡಿಯಂತೆ ಓಡಿ ಹೋಗದೆ, ಅದನ್ನೇ ಸಾಧನೆಯ ಮೊದಲ ಮೆಟ್ಟಿಲನ್ನಾಗಿ ಮಾಡಿಕೊಂಡು ಯಶಸ್ಸಿನತ್ತ ಹೆಜ್ಜೆಯಿಡಬೇಕು.

 ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Tue, 8 July 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!