ಈ ಮಾರ್ಗಗಳನ್ನು ಅನುಸರಿಸಿದರೆ ಕೆಲಸದೊಂದಿಗೆ ನೀವು ಹೆಚ್ಚುವರಿ ಆದಾಯ ಗಳಿಸಬಹುದು
ಕುಟುಂಬ, ಭವಿಷ್ಯದ ದೃಷ್ಟಿಯಿಂದ ಒಂದಷ್ಟು ಸೇವಿಂಗ್ ಮಾಡ್ಬೇಕು, ಹೆಚ್ಚು ಹಣ ಗಳಿಸಬೇಕು ಎಂದು ಸಹಜವಾಗಿ ಎಲ್ಲರೂ ಬಯಸುತ್ತಾರೆ. ಕೆಲಸದ ಹೊರತಾಗಿ ಹೆಚ್ಚುವರಿ ಹೇಗೆ ಗಳಿಸಬೇಕು ಎಂಬ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ನಿಮಗೂ ಸಹ ಹೆಚ್ಚುವರಿ ಆದಾಯ ಗಳಿಸೋ ಬಯಕೆ ಇದ್ಯಾ? ಹಾಗಿದ್ರೆ ಕೆಲಸದ ಜೊತೆ ಜೊತೆಗೆ ಈ ವಿಧಾನಗಳ ಮೂಲಕ ನೀವು ಹೆಚ್ಚುವರಿ ಆದಾಯ ಗಳಿಸಬಹುದು.

ಇಂದಿನ ಈ ಕಾಲದಲ್ಲಿ ದುಡ್ಡು (money) ಇಲ್ಲದಿದ್ರೆ, ಜೀವನ ಸಾಗಿಸುವುದೇ ಕಷ್ಟಸಾಧ್ಯ ಎಂಬಂತಾಗಿದೆ. ಇದಕ್ಕಾಗಿಯೇ ಹೆಚ್ಚಿನವರು ತಮಗಿರುವ ಕೆಲಸದ ಹೊರತಾಗಿ ಇನ್ನೂ ಬೇರೆ ಬೇರೆ ಮೂಲಗಳಿಂದ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಕೆಲಸದಿಂಬ ಬರೋ ಸಂಬಳ ಸಾಲುತ್ತಿಲ್ಲ. ಕುಟುಂಬ, ಭವಿಷ್ಯಕ್ಕಾಗಿ ಒಂದಷ್ಟು ಹಣ ಸೇವಿಂಗ್ ಮಾಡ್ಬೇಕು ಎಂದು ಅನೇಕರು ಬಯಸುತ್ತಾರೆ. ಆದ್ರೆ ಕೆಲಸದ ಹೊರತಾಗಿ ಸೈಡ್ ಇನ್ಕಮ್ (side income) ಗಳಿಸುವುದು ಹೇಗೆ ಎಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ನಿಮ್ಮ ಕೆಲಸದ ಜೊತೆ ಜೊತೆಗೆ ನಿಮ್ಮ ಟ್ಯಾಲೆಂಟ್ ಬಳಸಿಕೊಂಡು ಈ ಒಂದಷ್ಟು ವಿಧಾನಗಳ ಮೂಲಕ ಬಹಳ ಸುಲಭವಾಗಿ ನೀವು ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೆಲಸದ ಹೊರತಾಗಿ ಹೆಚ್ಚುವರಿ ಆದಾಯ ಗಳಿಸುವ ಮಾರ್ಗ:
ಯೂಟ್ಯೂಬ್ ಚಾನೆಲ್: ನೀವು ಒಳ್ಳೆಯ ಮಾತುಗಾರರಾಗಿದ್ದರೆ, ಕ್ಯಾಮೆರಾದ ಮುಂದೆ ಹೇಗೆ ಮಾತನಾಡುವ ಕಲೆ ಗೊತ್ತಿದ್ದರೆ, ನೀವು ನಿಮ್ಮದೇ ಯೂಟ್ಯೂಬ್ ಚಾನೆಲ್ ತೆರೆಯಬಹುದು. ಅಡುಗೆ, ಟ್ರಾವೆಲ್, ಲೈಫ್‌ಸ್ಟೈಲ್ ಇತ್ಯಾದಿ ವ್ಲಾಗ್‌ಗಳನ್ನು ಮಾಡುವ ಮೂಲಕ ನೀವು ಸುಲಭ ರೀತಿಯಲ್ಲಿ ಹಣ ಗಳಿಸಬಹುದು.
ಸ್ಟಾಕ್ ಫೋಟೋಗ್ರಫಿ: ನೀವು ಛಾಯಾಗ್ರಹಣದಲ್ಲಿ ಉತ್ತಮರಾಗಿದ್ದರೆ, ನೀವು ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು ಮತ್ತು ಅವುಗಳನ್ನು ಶಟರ್‌ಸ್ಟಾಕ್ ಅಥವಾ ಅಡೋಬ್ ಸ್ಟಾಕ್‌ನಂತಹ ಸ್ಟಾಕ್ ಫೋಟೋ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು. ಅದ್ಭುತ ಛಾಯಾಗ್ರಹಣ ಕೌಶಲ್ಯ ಹೊಂದಿರುವವರಿಗೆ ಹಣ ಗಳಿಸಲು ಇದೊಂದು ಉತ್ತಮ ಮಾರ್ಗವಾಗಿದೆ.
ಫಿಕ್ಸ್‌ಡ್ ಡೆಪಾಸಿಟ್: ಬ್ಯಾಂಕ್ ಸ್ಥಿರ ಠೇವಣಿಗಳ ಮೂಲಕ ನೀವು ಬಡ್ಡಿಯ ರೂಪದಲ್ಲಿ ಮಾಸಿಕ ಆದಾಯವನ್ನು ಗಳಿಸಬಹುದು. ಸ್ಥಿರ ಠೇವಣಿಗಳಲ್ಲಿ ಹಣವನ್ನು ಠೇವಣಿ ಇಡುವುದರಿಂದ ನಿಮ್ಮ ಹಣಕ್ಕೆ ಸುರಕ್ಷತೆಯೂ ಸಿಗುತ್ತದೆ.
ಸ್ಟಾಕ್ ಪ್ರಾಫಿಟ್: ನೀವು ಲಾಭದಾಯಕ ಕಂಪೆನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ, ನೀವು ಪ್ರತಿ ವರ್ಷ ಲಾಭಾಂಶದ ರೂಪದಲ್ಲಿ ಹಣವನ್ನು ಗಳಿಸಬಹುದು. ಮಾರುಕಟ್ಟೆ ಪ್ರವೃತ್ತಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡುವುದು ಉತ್ತಮ.
ಮ್ಯೂಚುವಲ್ ಫಂಡ್: ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತ ಸಿಗುತ್ತದೆ. ನೀವು ಸ್ವಲ್ಪ ಹಣವನ್ನು ಹೂಡಿಕೆ ಮಾಡಿ, ಪ್ರತಿ ತಿಂಗಳು ಸ್ವಲ್ಪ ಹಣವನ್ನು ಲಾಭದ ರೂಪದಲ್ಲಿ ಪಡೆಯಬಹುದು.
ಬ್ಲಾಗಿಂಗ್: ನಿಮಗೆ ಬರವಣಿಗೆಯ ಕೌಶಲ್ಯವಿದ್ದರೆ, ಬರವಣಿಗೆ ಮೂಲಕ ನೀವು ಬ್ಲಾಗ್ ನಡೆಸಬಹುದು. ಮತ್ತು ಅದರಿಂದ ಹಣ ಗಳಿಸಬಹುದು. ಪ್ರಾಯೋಜಿತ ವಿಷಯದ ಮೂಲಕ ಆದಾಯವನ್ನು ಗಳಿಸಬಹುದು.
ಟ್ಯೂಷನ್: ಹಣ ಗಳಿಸಲು ಇನ್ನೊಂದು ಸುಲಭ ಮಾರ್ಗವೆಂದರೆ, ಮಕ್ಕಳಿಗೆ ಟ್ಯೂಷನ್ ನೀಡುವುದು. ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಣ ಗಳಿಸಲು ಇದೊಂದು ಉತ್ತಮ ಮಾರ್ಗವಾಗಿದೆ. ಪುಟ್ಟ ಮಕ್ಕಳಿಗೆ ಟ್ಯೂಷನ್ ನಡೆಸುವ ಮೂಲಕ ನೀವು ಇಂತಿಷ್ಟು ಹಣವನ್ನು ಗಳಿಸಬಹುದು.
ಆನ್‌ಲೈನ್ ಕೋರ್ಸ್: ನಿಮಗೆ ಕಲಿಕೆಯ ಬಗ್ಗೆ ತಿಳಿದಿದ್ದರೆ, ಉಡೆಮಿ, ಟೀಚಬಲ್ ಅಥವಾ ಸ್ಕಿಲ್‌ಶೇರ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಕೌಶಲ್ಯದ ಆಧಾರದ ಮೇಲೆ ನಿಮ್ಮ ಸ್ವಂತ ಆನ್‌ಲೈನ್ ಕೋರ್ಸ್‌ಗಳನ್ನು ನೀವು ರಚಿಸಬಹುದು.
ಇದನ್ನೂ ಓದಿ: ಶಾಪಿಂಗ್ ಮಾಡುವಾಗ ಹಣ ಹೆಚ್ಚು ಖರ್ಚು ಆಗ್ಬಾರ್ದು ಎಂದ್ರೆ ಈ ಸಲಹೆ ಪಾಲಿಸಿ
ರಿಯಲ್ ಎಸ್ಟೇಟ್ ಕ್ರೌಡ್‌ಫಂಡಿಂಗ್: ಫಂಡ್‌ರೈಸ್ ಅಥವಾ ರಿಯಾಲ್ಟಿಮೊಗಲ್‌ನಂತಹ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚುವರಿ ಆದಾಯವನ್ನು ಗಳಿಸಬಹುದು.
ಇ-ಕಾಮರ್ಸ್: ನಿಮಗೆ ಕ್ರಾಫ್ಟಿಂಗ್, ಟೈಲರಿಂಗ್ ಇವುಗಳಲ್ಲಿ ಆಸಕ್ತಿ ಇದ್ದರೆ, ಬಟ್ಟೆ, ಕ್ರಾಫ್ಟ್ ವಸ್ತುಗಳನ್ನು ತಯಾರಿಸಿ ನೀವು ಶಾಪಿಫೈ ಅಥವಾ ಎಟ್ಸಿ ನಂತಹ ವೇದಿಕೆಯನ್ನು ಬಳಸಿಕೊಂಡು ಆನ್‌ಲೈನ್ ಮಾರಾಟ ಮಾಡಬಹುದು. ಇಲ್ಲವೇ, ಸೋಷಿಯಲ್ ಮೀಡಿಯಾದ ಮೂಲಕವೂ ನಿಮ್ಮ ಉತ್ಪನ್ನಗಳನ್ನು ನೀವು ಮಾರಾಟ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ