Shopping Tips: ಶಾಪಿಂಗ್ ಮಾಡುವಾಗ ಹಣ ಹೆಚ್ಚು ಖರ್ಚು ಆಗ್ಬಾರ್ದು ಎಂದ್ರೆ ಈ ಸಲಹೆ ಪಾಲಿಸಿ
ಶಾಪಿಂಗ್ ಅಂದ್ರೆ ಬಹುತೇಕ ಎಲ್ಲರಿಗೂ ಸಖತ್ ಇಷ್ಟ. ಹೀಗೆ ಶಾಪಿಂಗ್‌ಗೆ ಹೋದಾಗ ದುಂದುವೆಚ್ಚ ಆಗೋದು ಕೂಡಾ ಸಹಜ. ನೀವು ಕೂಡ ಶಾಪಿಂಗ್‌ಗೆ ಹೋದಾಗ ಸಿಕ್ಕಾಪಟ್ಟೆ ಖರ್ಚು ಮಾಡ್ತೀರಾ? ಹಾಗಿದ್ರೆ ಹೊರಗಡೆ ಶಾಪಿಂಗ್ ಹೋದಾಗ ಅತಿಯಾದ ಖರ್ಚು ಆಗ್ಬಾರ್ದು ಎಂದಾದ್ರೆ ಈ ಒಂದಷ್ಟು ಸಲಹೆಗಳನ್ನು ಪಾಲಿಸಿ.

ಬಹುತೇಕ ಎಲ್ಲರಿಗೂ ಶಾಪಿಂಗ್ (shopping) ಅಂದ್ರೆ ಇಷ್ಟ. ವಿಶೇಷವಾಗಿ ಹೆಂಗಳೆಯರ ನೆಚ್ಚಿನ ಕೆಲಸವೇ ಶಾಪಿಂಗ್ ಮಾಡೋದು. ಒಂದು ಬಾರಿ ಶಾಪಿಂಗ್ ಅಂತ ಹೊರಗಡೆ ಹೋದ್ರೆ ಸೀರೆ, ಬಟ್ಟೆಯಿಂದ ಹಿಡಿದು ಗೃಹೋಪಯೋಗಿ ವಸ್ತು, ಅಗತ್ಯ ವಸ್ತುಗಳವರೆ ಎಲ್ಲವನ್ನೂ ಖರೀದಿ ಮಾಡ್ತಾರೆ. ಅಷ್ಟೇ ಯಾಕೆ ಅನಗತ್ಯ ವಸ್ತುಗಳನ್ನು ಖರೀದಿ ಮಾಡುವವರೂ ಇದ್ದಾರೆ. ಹೀಗೆ ಬೇಕಾಬಿಟ್ಟಿ ಶಾಪಿಂಗ್ ಮಾಡಿದ್ರೆ ಹಣ ಕೂಡ ವೇಸ್ಟ್ ಆಗುತ್ತೆ. ಹೀಗಿರುವಾಗ ಶಾಪಿಂಗ್ ಮಾಡುವಾಗ ಹೆಚ್ಚು ಹಣ ಖರ್ಚು ಆಗ್ಬಾರ್ದು (tips to avoid overspending while shopping) ಅಂದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸಿ.
ಶಾಪಿಂಗ್ ಮಾಡುವಾಗ ಹಣ ಉಳಿಸಲು ಈ ಸಲಹೆ ಪಾಲಿಸಿ:
ಪಟ್ಟಿ ಮಾಡಿ: ಶಾಪಿಂಗ್‌ಗೆ ಹೋಗುವ ಮೊದಲು ನೀವು ಖರೀದಿಸಬೇಕಾದ ವಸ್ತುಗಳನ್ನು ಪಟ್ಟಿಯಲ್ಲಿ ಬರೆಯಿರಿ. ಈ ವಿಧಾನವನ್ನು ದಿನಸಿ ಶಾಪಿಂಗ್‌ಗೆ ಮಾತ್ರವಲ್ಲದೆ ಬಟ್ಟೆ ಇತ್ಯಾದಿ ಶಾಪಿಂಗೂ ಬಳಸಿ. ಹೀಗೆ ಪಟ್ಟಿಯಲ್ಲಿರುವ ವಸ್ತುಗಳನ್ನು ಮಾತ್ರ ಖರೀದಿಸಿ. ಈ ಸಲಹೆ ಶಾಪಿಂಗ್ ಮಾಡುವಾಗ ಅನಗತ್ಯ ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
ನಗದು ಹಣ: ಈಗೆಲ್ಲಾ ಪ್ರತಿಯೊಬ್ಬರೂ, ಕ್ರೆಡಿಟ್ ಕಾರ್ಡ್ ಅಥವಾ ಡಿಜಿಟಲ್ ಪಾವತಿಗಳ ಮೂಲಕವೇ ಹಣವನ್ನು ಪಾವತಿ ಮಾಡುತ್ತಾರೆ, ವ್ಯವಹಾರ ನಡೆಸುತ್ತಾರೆ. ಹೀಗೆ ಡಿಜಿಟಲ್ ಪಾವತಿಯಿಂದ ಜಾಸ್ತಿ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಬಜೆಟ್‌ಗೆ ಸೀಮಿತವಾಗುವಷ್ಟು ಮಾತ್ರ ನಗದು ಹಣವನ್ನು ಒಯ್ಯಿರಿ. ಮತ್ತು ಅಷ್ಟು ಹಣದಲ್ಲಿ ಮಾತ್ರ ಶಾಪಿಂಗ್ ಮಾಡಿ.
ಖರೀದಿಸುವ ಮೊದಲು ಯೋಚಿಸಿ: ಕೆಲವರು ಶಾಪಿಂಗ್‌ಗೆ ಹೋದ ಸಂದರ್ಭದಲ್ಲಿ ಅಗತ್ಯವಿರುವ ವಸ್ತುಗಳನ್ನು ಮಾತ್ರವಲ್ಲದೆ, ತಮಗೆ ಇಷ್ಟವಾಗುವ ಅನಗತ್ಯ ವಸ್ತುಗಳನ್ನು ಸಹ ಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಹಣ ಕೂಡಾ ಹೆಚ್ಚು ಖರ್ಚಾಗುತ್ತದೆ. ಹಾಗಾಗಿ ಹತ್ತು ಬಾರಿ ಯೋಚಿಸಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಿ.
ಆಫರ್‌ಗಳ ಆಮೀಷಕ್ಕೆ ಒಳಗಾಗಬೇಡಿ: ಹೆಚ್ಚಿನವರು ಈ ಆಫರ್‌ಗಳ ಆಮೀಷಕ್ಕೆ ಒಳಗಾಗುತ್ತಾರೆ. ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತೆ ಎನ್ನುವ ಕಾರಣಕ್ಕೆ ಅಗತ್ಯವಿಲ್ಲದಿದ್ದರೂ, ಆಫರ್‌ಗಳು ಲಭ್ಯವಿರುವ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಹೀಗೆ ಮಾಡುವುದರಿಂದ ಹಣವೂ ವ್ಯರ್ಥವಾಗುತ್ತದೆ. ಹಾಗಾಗಿ ಆಫರ್‌ಗಳ ಆಮೀಷಕ್ಕೆ ಒಳಗಾಗಬೇಡಿ.
ಬಜೆಟ್ ನಿಗದಿ ಪಡಿಸಿ: ಕೆಲವರಂತೂ ಹಣ ಇದ್ರೆ ಬೇಕಾಬಿಟ್ಟಿ ಶಾಪಿಂಗ್ ಮಾಡಿ ಬಿಡುತ್ತಾರೆ. ಹೀಗೆ ಮಾಡುವುದರಿಂದ ಹಣ ಸುಖಾಸುಮ್ಮನೆ ವ್ಯರ್ಥವಾಗುತ್ತದೆ. ಹಾಗಾಗಿ ಪ್ರತಿ ಖರೀದಿಗೂ ಒಂದು ನಿರ್ದಿಷ್ಟ ಬಜೆಟ್ ನಿಗದಿ ಪಡಿಸಿ. ಆ ಬಜೆಟ್ ಪ್ರಕಾರ ಶಾಪಿಂಗ್ ಮಾಡಿ. ಹೀಗೆ ಮಾಡುವುದರಿಂದ ಹಣ ಉಳಿತಾಯವಾಗುತ್ತದೆ.
ಇದನ್ನೂ ಓದಿ: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?
ಆನ್‌ಲೈನ್-ಆಫ್‌ಲೈನ್ ಬೆಲೆ ಹೋಲಿಕೆ: ನೀವು ಏನನ್ನಾದರೂ ಖರೀದಿಸಿದಾಗ, ಅದರ ಬೆಲೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಪರಿಶೀಲಿಸಿ. ಕೆಲವೊಮ್ಮೆ ಬೆಲೆಯಲ್ಲಿ ಭಾರಿ ವ್ಯತ್ಯಾಸವಿರುತ್ತದೆ. ಆನ್‌ಲೈನ್‌ನಲ್ಲಿ ಆ ವಸ್ತುವಿನ ಬೆಲೆ ಕಮ್ಮಿಯಿದ್ದರೇ ಅಲ್ಲೇ ಅದನ್ನು ಖರೀದಿಸಿ, ಆಫ್‌ಲೈನ್‌ನಲ್ಲಿ ಬೆಲೆ ಕಮ್ಮಿ ಇದ್ದರೇ ಇಲ್ಲೇ ಖರೀದಿಸಿ. ಹೀಗೆ ಮಾಡುವುದರಿಂದ ಹಣ ಉಳಿತಾಯ ಮಾಡಬಹುದು.
ಸ್ಮಾರ್ಟ್ ಆಗಿ ಶಾಪಿಂಗ್ ಮಾಡಿ: ನೀವು ಏನನ್ನಾದರೂ ಖರೀದಿಸಲು ಹೋದಾಗಲೆಲ್ಲಾ, ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಿ. ನೀವು ಆತುರದಿಂದ ಏನನ್ನೂ ಖರೀದಿಸಬಾರದು. ನೀವು ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿದ್ದರೆ, ನೀವು ಬಹಳಷ್ಟು ಹಣವನ್ನು ಉಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ