AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ರಿಕ್ಷಾ ಅನ್ಕೊಂಡ್ರಾ… ಅಲ್ಲ ಅಲ್ಲ ಇದು ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್‌ ಕಣ್ರೀ

ಲೂಯಿ ವಿಟಾನ್‌ ಜಾಗತಿಕ ಐಷಾರಾಮಿ ಬ್ರ್ಯಾಂಡ್‌ಗಳಲ್ಲಿ ಒಂದು. ಫ್ರೆಂಚ್‌ನ ಲಕ್ಸುರಿ ಬ್ರ್ಯಾಂಡ್‌ ಆಗಿರುವ ಲೂಯಿ ವಿಟಾನ್‌ ಇದೀಗ ವಿಶಿಷ್ಟ ಷ್ಯಾಶನ್‌ ಯೋಜನೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು, ಲೂಯಿ ವಿಟಾನ್‌ ಭಾರತೀಯ ಆಟೋ ರಿಕ್ಷಾ ಥೀಮ್‌ನ ಹೊಸ ಹ್ಯಾಂಡ್‌ ಬ್ಯಾಗ್‌ ಒಂದನ್ನು ಪರಿಚಯಿಸಿದ್ದು, ಫ್ಯಾಶನ್‌ ಮತ್ತು ಸಂಸ್ಕೃತಿಯ ಈ ವಿಶಿಷ್ಟ ಸಂಯೋಜನೆಯ ಬ್ಯಾಗ್‌ ಕಂಡು ಫ್ಯಾಶನ್‌ ಪ್ರಿಯರು ಫುಲ್‌ ಫಿದಾ ಆಗಿದ್ದಾರೆ.

ಆಟೋ ರಿಕ್ಷಾ ಅನ್ಕೊಂಡ್ರಾ… ಅಲ್ಲ ಅಲ್ಲ  ಇದು ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್‌ ಕಣ್ರೀ
ಲೂಯಿ ವಿಟಾನ್‌ ಹ್ಯಾಂಡ್‌ ಬ್ಯಾಗ್‌ Image Credit source: Social Media
ಮಾಲಾಶ್ರೀ ಅಂಚನ್​
|

Updated on: Jul 02, 2025 | 6:31 PM

Share

ಹ್ಯಾಂಡ್‌ ಬ್ಯಾಗ್‌ಗಳೆಂದರೆ  (hand bag) ಹೆಂಗಳೆಯರಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಅನೇಕರಿಗೆ ಲೂಯಿ ವಿಟಾನ್‌ನಂತಹ ಲಕ್ಸುರಿ ಬ್ಯಾಗ್‌ಗಳೆಂದರೆ ಪಂಚಪ್ರಾಣ. ಲಕ್ಷಾಂತರ ರೂಪಾಯಿಕೊಟ್ಟು ಈ ಬ್ರ್ಯಾಂಡೆಡ್‌ ಬ್ಯಾಗ್‌ಗಳನ್ನು ಖರೀದಿಸುವವರಿದ್ದಾರೆ. ಫ್ರೆಂಚ್‌ನ ಲಕ್ಸುರಿ ಬ್ರ್ಯಾಂಡ್‌ ಆಗಿರುವ ಲೂಯಿ ವಿಟಾನ್‌ (Louis Vuitton) ತನ್ನ ವಿಶಿಷ್ಟ ಬ್ಯಾಗ್‌ಗಳಿಗೆಯೇ ಹೆಸರುವಾಸಿಯಾಗಿದೆ. ಈ ಹಿಂದೆ ಈ ಬ್ರ್ಯಾಂಡ್‌ ಜಗತ್ತಿನ ಅತ್ಯಂತ ಪುಟಾಣಿ ಮೈಕ್ರೋಸ್ಕೋಪಿಕ್‌ ಹ್ಯಾಂಡ್‌ ಬ್ಯಾಗನ್ನು ತಯಾರಿಸಿ ಸುದ್ದಿಯಾಗಿದ್ದು, ಇದೀಗ LV ಭಾರತೀಯ ಆಟೋ ರಿಕ್ಷಾ ಥೀಮ್‌ನ ವಿಭಿನ್ನ ಹ್ಯಾಂಡ್‌ ಬ್ಯಾಗನ್ನು ಪರಿಚಯಿಸಿದೆ. ನೋಡಲು ಥೇಟ್‌ ರಿಯಲ್‌ ಆಗಿರುವ ಪುಟಾಣಿ ಆಟೋ ರಿಕ್ಷಾದಂತಿರುವ ಈ ಬ್ಯಾಗ್‌ನ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಆಟೋ ರಿಕ್ಷಾ ಥೀಮ್‌ ಬ್ಯಾಗ್:‌

ಲೂಯಿ ವಿಟಾನ್‌ ಬ್ರ್ಯಾಂಡ್‌ ಈ ಹಿಂದೆ ಜಗತ್ತಿನ ಅತ್ಯಂತ ಚಿಕ್ಕ ಹ್ಯಾಂಡ್‌ ಬ್ಯಾಗನ್ನು ತಯಾರಿಸುವ ಮೂಲಕ ಸುದ್ದಿಯಲ್ಲಿತ್ತು. ಇದೀಗ ಈ ಐಷಾರಾಮಿ ಕಂಪನಿ, ಭಾರತೀಯ ಆಟೋ ರಿಕ್ಷಾ ಥೀಮ್‌ನ ಬ್ಯಾಗನ್ನು ತಯಾರಿಸಿ ಸುದ್ದಿಯಲ್ಲಿದೆ. ಫ್ಯಾಶನ್‌ ಮತ್ತು ಸಂಸ್ಕೃತಿಯ ಈ ವಿಶಿಷ್ಟ ಸಂಯೋಜನೆಯ ಬ್ಯಾಗ್‌ ಕಂಡು ಫ್ಯಾಶನ್‌ ಪ್ರಿಯರು ಫುಲ್‌ ಫಿದಾ ಆಗಿದ್ದಾರೆ.

ಇದನ್ನೂ ಓದಿ
Image
ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಔಷಧ ಇಲಾಖೆ ಸಮರ: ಪರೀಕ್ಷೆಗೆ ಸೂಚನೆ
Image
ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
Image
ನೀವು ಸ್ಲಿಮ್‌ ಆಗಿ ಕಾಣಬಾರದೆಂದರೆ ಈ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
Image
ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ

ಈ ಬ್ಯಾಗ್‌ ವಿಶೇಷತೆ ಏನು?

ಲೂಯಿ ವಿಟಾನ್‌ ವಿನ್ಯಾಸಕರು LV ಯ ಸಿಗ್ನೇಚರ್‌ ಕ್ಲಾಸಿಕ್‌ ಕಂದು ಮತ್ತು ಗೋಲ್ಡನ್‌ ಮೊನೋಗ್ರಾಮ್‌ ಮುದ್ರಣದೊಂದಿಗೆ  ಆಟೋ ರಿಕ್ಷಾ ಥೀಮ್‌ನ ಈ ಹೊಸ ಬ್ಯಾಗ್‌ ರಚಿಸಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Diet Paratha (@diet_paratha)

ಈ ಕುರಿತ ವಿಡಿಯೋವನ್ನು diet_paratha ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮೂರು ಚಕ್ರಗಳನ್ನು ಹೊಂದಿರುವ ರಿಕ್ಷಾ ಥೀಮ್‌ನ ಹ್ಯಾಂಡ್‌ ಬ್ಯಾಗನ್ನು ಕಾಣಬಹುದು. ಈ ವಿಭಿನ್ನ ಹ್ಯಾಂಡ್‌ ಬ್ಯಾಗ್‌ಗೆ ಫ್ಯಾಷನ್‌ ಪ್ರಿಯರು ಫುಲ್‌ ಫಿದಾ ಆಗಿದ್ದಾರೆ.

ಇದನ್ನೂ ಓದಿ: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?

ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ  1.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇತ್ತೀಚಿಗಷ್ಟೆ ಪ್ರಾಡಾ ಬ್ರ್ಯಾಂಡ್‌ ಕೊಲ್ಹಾಪುರಿ  ಚಪ್ಪಲಿಯಂತಹ ತನ್ನ ಚಪ್ಪಲಿ ಮೂಲಕ ಸುದ್ದಿಯಲ್ಲಿತ್ತು, ಈಗ LV ಆಟೋವನ್ನೇ ತಯಾರು ಮಾಡಿದ್ದಾರೆʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದನ್ನು ಖರೀದಿಸುವವರೂ ಇದ್ದಾರಾʼ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಟೋಗಿಂತ ಈ ಬ್ಯಾಗ್‌ ತುಂಬಾನೇ ದುಬಾರಿಯಾಗಿದೆʼ ಎಂದಿದ್ದಾರೆ.

 ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ