AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?

ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಆಟಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ಟೈ ಪಾಸ್‌ಗಾಗಿ ಇರುವ ಒಗಟಿನ ಆಟ ಮಾತ್ರವಲ್ಲದೆ ಇವುಗಳು ನಮ್ಮ ಬುದ್ಧಿವಂತಿಕೆ ಮತ್ತು ವೀಕ್ಷಣಾ ಕೌಶಲ್ಯವನ್ನು ಸಹ ಹೆಚ್ಚು ಮಾಡುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಇದರಲ್ಲಿ ಕಾಡಿನ ಮಧ್ಯೆ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.

Optical Illusion: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Jul 03, 2025 | 3:43 PM

Share

ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಕಣ್ಣಿಗೆ ಭ್ರಮೆಯನ್ನುಂಟು ಮಾಡುವ ಒಗಟಿನ ಆಟಗಳನ್ನು ಆಡಲು ತುಂಬಾನೇ ಮಜಾವಾಗಿರುತ್ತದೆ. ಕಣ್ಣಿಗೆ, ಬುದ್ಧಿವಂತಿಕೆಗೆ ಚಾಲೆಂಜ್‌ ಮಾಡುವಂತಹ ಇಂತಹ ಆಟಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಮೋಜಿನ ಆಟಗಳು ನಮ್ಮ ಬುದ್ಧಿವಂತಿಕೆ ಮತ್ತು ವೀಕ್ಷಣಾ ಕೌಶಲ್ಯವನ್ನು ಸಹ ಹೆಚ್ಚಿಸುತ್ತವೆ. ಇದೀಗ ಇಲ್ಲೊಂದು ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಆಪ್ಟಿಕಲ್ ಇಲ್ಯೂಷನ್‌ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಲು ಸವಾಲನ್ನು (find the dog hiding in the forest) ನೀಡಲಾಗಿದೆ. ಕೇವಲ 7 ಸೆಕೆಂಡುಗಳಲ್ಲಿ ಆ ನಾಯಿಯನ್ನು ಪತ್ತೆ ಹಚ್ಚುವ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿ.

ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಬಲ್ಲಿರಾ?

Optical Illusion (2)

ಮೇಲೆ ಹಂಚಿಕೊಂಡಿರುವ ಚಿತ್ರದಲ್ಲಿ, ನೀವು ಕಾಡಿನ ದೃಶ್ಯವನ್ನು ನೋಡಬಹುದು. ಮೇಲ್ನೋಟಕ್ಕೆ ಬರೀ ಕಾಡು ಮಾತ್ರ ಕಂಡರೂ, ಕಾಡಿನ ಮಧ್ಯೆ ಎಲ್ಲೋ ಒಂದು ಕಡೆ ನಾಯಿಯೊಂದು ಅಡಗಿ ಕುಳಿತಿದೆ. ಆ ನಾಯಿಯನ್ನು ಬರೀ 7 ಸೆಕೆಂಡುಗಳಲ್ಲಿ ನೀವು ಪತ್ತೆ ಹಚ್ಚಬೇಕು. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಈ ಆಪ್ಟಿಕಲ್ ಇಲ್ಯೂಷನ್ ಸವಾಲು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ
Image
ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿಸುವ ಚಿತ್ರವಿದು
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಬಲ್ಲಿರಾ?
Image
ನಿಮ್ಮ ಪ್ರೀತಿಯ ಜೀವನ ಹೇಗಿರುತ್ತೆ ಎಂದು ತಿಳಿಸುವ ಚಿತ್ರವಿದು

ಸವಾಲನ್ನು ಸ್ವೀಕರಿಸಲು ಸಿದ್ಧರೇ?

ಕಾಡಿನಲ್ಲಿ ಅಡಗಿರುವ ಶ್ವಾನವನ್ನು ಕೇವಲ 7 ಸೆಕೆಂಡುಗಳಲ್ಲಿ ಹುಡುಕಲು ಸವಾಲು ನೀಡಲಾಗಿದೆ.  ಅತ್ಯುತ್ತಮ ವೀಕ್ಷಣಾ ಕೌಶಲ್ಯ, ಏಕಾಗ್ರತೆಯನ್ನು ಹೊಂದಿರುವವರಿಗೆ ಮಾತ್ರ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯ.  ಹಾಗಿದ್ದರೆ, ಏಕಾಗ್ರತೆ ವಹಿಸಿ ಕಾಡಿನಲ್ಲಿ ಅಡಗಿ ಕುಳಿತ ಶ್ವಾನವನ್ನು ಪತ್ತೆ ಹಚ್ಚಿ. ಚಿತ್ರವನ್ನು ಜೂಮ್ ಇನ್ ಮತ್ತು ಜೂಮ್‌  ಔಟ್ ಮಾಡುವ ಮೂಲಕ ಚಿತ್ರದ ಎಲ್ಲಾ ಪ್ರದೇಶಗಳನ್ನು ಎಚ್ಚರಿಕೆಯಿಂದ ಗಮನಿಸಿ. ಆಗ ನೀವು ನಾಯಿಯನ್ನು ಗುರುತಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಜಸ್ಟ್‌ 9 ಸೆಕೆಂಡುಗಳಲ್ಲಿ ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಿ

ಇಲ್ಲಿದೆ ಉತ್ತರ:

ಕಾಡಿನಲ್ಲಿ ಅಡಗಿರುವ ನಾಯಿಯನ್ನು ಹುಡುಕುವಲ್ಲಿ ಯಶಸ್ವಿಯಾದವರಿಗೆ  ಅಭಿನಂದನೆಗಳು. ನೀವು ಎಲ್ಲರಿಗಿಂತ ಅತ್ಯುತ್ತಮ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಿ ಎಂದರ್ಥ.

ನೀವೇನಾದರೂ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗದೆ  ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ ಉತ್ತರ ಇಲ್ಲಿದೆ ನೋಡಿ… ಚಿತ್ರದ ಎಡಭಾಗದಲ್ಲಿ ನೀವು ನಾಯಿಯನ್ನು ಕಾಣಬಹುದು, ಬಿಳಿ ಬಣ್ಣದ ಈ ಶ್ವಾನ ಕಾಡಿನ ಮರಗಳಿಂದ ಬಿದ್ದ ಎಲೆಗಳೊಂದಿಗೆ ಬೆರೆತಿರುವ ಕಾರಣ ಅದನ್ನು ಗುರುತಿಸಲು ಕಷ್ಟಸಾಧ್ಯ.

Optical Illusion (1)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ