AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ರಸಭರಿತ ತಾಜಾ ಕಲ್ಲಂಗಡಿ ಹಣ್ಣನ್ನು ಗುರುತಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ಮಾರುಕಟ್ಟೆಗೆ ಹೋದಾಗ ಹಣ್ಣು ಹಾಗೂ ತರಕಾರಿಗಳನ್ನು ಖರೀದಿಸುವಾಗ ನೀವು ಕೂಡ ಈ ಕೆಲವು ಟ್ರಿಕ್ಸ್‌ಗಳನ್ನು ತಿಳಿದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ ತಾಜಾ, ರಸಭರಿತ ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನೀವೇನಾದ್ರೂ ಕಲ್ಲಂಗಡಿ ಹಣ್ಣು ಖರೀದಿ ಮಾಡ್ತೀರಾ ಅಂತಾದ್ರೆ ಈ ಮೂರು ಅಂಶಗಳನ್ನು ಗಮನದಲ್ಲಿಡಬೇಕು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಿಹಿಯಾದ ಪ್ರೆಶ್ ಕಲ್ಲಂಗಡಿ ಹಣ್ಣನ್ನು ಆರಿಸೋದು ಹೇಗೆ ಎನ್ನುವ ಬಗೆಗಿನ ಟಿಪ್ಸ್ ಹಂಚಿಕೊಳ್ಳಲಾಗಿದೆ, ಈ ಕುರಿತಾದ ವಿಡಿಯೋ ಇಲ್ಲಿದೆ.

Video : ರಸಭರಿತ ತಾಜಾ ಕಲ್ಲಂಗಡಿ ಹಣ್ಣನ್ನು ಗುರುತಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್
ತಾಜಾ ಕಲ್ಲಂಗಡಿ ಖರೀದಿಸುವ ಟ್ರಿಕ್ಸ್Image Credit source: Twitter/ Aflo Images/Getty Images
ಸಾಯಿನಂದಾ
|

Updated on: Jul 03, 2025 | 4:49 PM

Share

ರಸಭರಿತ ಕಲ್ಲಂಗಡಿ (Watermelon) ಹಣ್ಣು ಕೊಟ್ಟರೆ ಯಾರು ತಾನೇ ಬೇಡ ಹೇಳ್ತಾರೆ. ಈ ಹಣ್ಣಿನಲ್ಲಿ ನೀರಿನಾಂಶ, ವಿಟಮಿನ್‌ ಸೇರಿದಂತೆ ಇನ್ನಿತ್ತರ ಪೋಷಕಾಂಶಗಳು ಹೇರಳವಾಗಿದೆ. ಇದರ ನಿಯಮಿತ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನೀವು ಮಾರುಕಟ್ಟೆಯಲ್ಲಿ ಕಡಿಮೆ ಹಾಗೂ ಅಗ್ಗದ ಬೆಲೆಗೆ ಕಲ್ಲಂಗಡಿ ಸಿಗುತ್ತದೆ ಎಂದಾದರೆ ಖರೀದಿ ಮಾಡೋದಕ್ಕೂ ಮುನ್ನ ಈ ವಿಷಯಗಳು ನಿಮಗೆ ತಿಳಿದಿರುವುದು ಬಹಳ. ಈ ಹಣ್ಣನ್ನು ಖರೀದಿ ಮಾಡುವ ಮುನ್ನ ಸಿಹಿಯಾಗಿದೆಯೇ ಎಂದು ತಿಳಿಯುವುದು ಬಹಳ ಮುಖ್ಯ. ಆದ್ರೆ ಈ ಕೆಲವು ಟ್ರಿಕ್ಸ್‌ಗಳು (tricks) ಈ ಹಣ್ಣನ್ನು ಖರೀದಿಸುವಾಗ ನಿಮ್ಮ ಉಪಯೋಗಕ್ಕೆ ಬರಬಹುದು. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗೆಗಿನ ವಿಡಿಯೋವನ್ನು ಶೇರ್‌ ಮಾಡಿಕೊಳ್ಳಲಾಗಿದೆ

@gunsnrosesgirl3 ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಲ್ಲಂಗಡಿ ಹಣ್ಣನ್ನು ಖರೀದಿ ಮಾಡುವಾಗ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ಹೈಲೈಟ್ ಮಾಡಲಾಗಿದೆ.

ಇದನ್ನೂ ಓದಿ
Image
ಮಹಿಳೆಯರನ್ನು ಮೆಚ್ಚಿಸಲು ಈ ಪುರುಷರು ಮಾಡ್ತಾರೆ ವಿಶೇಷ ನೃತ್ಯ
Image
ಬೆಡ್‌ರೂಮಿನ ಕರ್ಟನ್ ಮೇಲೆ ಹೆಡೆಯೆತ್ತಿ ಕುಳಿತ ಬುಸ್ ನಾಗಪ್ಪ
Image
20 ವರ್ಷದ ನಂತರ ತಂದೆಯ ಧ್ವನಿ ಕೇಳಿದ ಬೆಂಗಳೂರಿನ ಯುವತಿ
Image
ಕೆಲಸ ಕಳೆದುಕೊಂಡ ಬೆಂಗಳೂರಿನ ಇಂಜಿನಿಯರ್ ಕಥೆಯಿದು
  •  ಆಕಾರ ನೋಡಿ ಖರೀದಿ ಮಾಡಿ : ಕಲ್ಲಂಗಡಿ ಹಣ್ಣು ಯಾವ ಆಕಾರದಲ್ಲಿದೆ ಎನ್ನುವುದು ಅದು ಸಿಹಿಯಾಗಿದೆ ಇಲ್ಲವೇ ಎಂದು ತಿಳಿಸುತ್ತದೆ, ಮೊಟ್ಟೆಯ ಆಕಾರದ ಕಲ್ಲಂಗಡಿಗಳು ಹೆಚ್ಚು ರಸಭರಿತವಾಗಿರುತ್ತದೆ. ಕಲ್ಲಂಗಡಿ ಹಣ್ಣು ವೃತ್ತಾಕಾರದಲ್ಲಿದ್ರೆ ಹೆಚ್ಚು ಸಿಹಿಯಾಗಿದೆ ಎಂದರ್ಥ.
  •  ಹಣ್ಣಿನ ಹೊರಭಾಗ ಗಮನಿಸಿ : ಕಲ್ಲಂಗಡಿ ಹಣ್ಣಿನ ಹೊರಭಾಗವು ಹಳದಿ ಬಣ್ಣದಲ್ಲಿದ್ದರೆ ಸಿಹಿಯಾಗಿದೆ ಎಂದರ್ಥ, ಬಿಳಿ ಬಣ್ಣದಲ್ಲಿದ್ದರೆ ಸಿಹಿಯಾಗಿಲ್ಲ ಎಂದು ಅರ್ಥಮಾಡಿಕೊಳ್ಳಿ.
  • ಹಣ್ಣಿನ ಮೇಲಿನ ಭಾಗದಲ್ಲಿರುವ ಗಾಢ ಹಸಿರು ಬಣ್ಣದ ಗೆರೆಯನ್ನು ಗಮನಿಸಿ : ಕಲ್ಲಂಗಡಿ ಹಣ್ಣಿನ ಮೇಲ್ಭಾಗದಲ್ಲಿ ಹಸಿರು ಬಣ್ಣದ ಗೆರೆಗಳಿರುತ್ತದೆ. ಈ ಗೆರೆಗಳು ಹತ್ತಿರವಾಗಿದ್ದರೆ ಸಿಹಿಯಾಗಿದೆ. ಇಲ್ಲದಿದ್ದರೆ ರುಚಿಕರ ಹಾಗೂ ಸಿಹಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಇದನ್ನೂ ಓದಿ : Video : ಮಕ್ಕಳಿಗೆ ಊಟ ಮಾಡಲು ತಾಯಂದಿರು ತರಬೇತಿ ನೀಡುವುದು ಹೀಗೆ, ಟೀಕೆಗೆ ಕಾರಣವಾಯ್ತು ಪೌಷ್ಟಿಕ ತಜ್ಞೆಯ ವಿಡಿಯೋ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಜೂನ್ 3 ರಂದು ಶೇರ್ ಮಾಡಲಾದ ಈ ವಿಡಿಯೋ ಈವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರೊಬ್ಬರು, ಈ ಕೆಲವು ವಿಷಯಗಳು ಆಸಕ್ತಿದಾಯಕವಾಗಿದೆ. ಈ ಮಹತ್ವದ ಮಾಹಿತಿಗಾಗಿ ಧನ್ಯವಾದಗಳು ಎಂದಿದ್ದಾರೆ. ಮತ್ತೊಬ್ಬರು, ಕಲ್ಲಂಗಡಿ ಹಣ್ಣುಗಳನ್ನು ಆಯ್ಕೆ ಮಾಡಲು ಇದೊಂದು ಉತ್ತಮ ಮಾರ್ಗ ಎಂದಿದ್ದಾರೆ. ಇನ್ನೊಬ್ಬರು, ಈ ವಿಷಯಗಳು ನನಗೆ ತಿಳಿದಿರಲಿಲ್ಲ, ಈ ಕೆಲವು ಟ್ರಿಕ್ಸ್‌ಗಳನ್ನು ಬಳಸಿ ಹಣ್ಣು ಖರೀದಿಸಿ ನೋಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ