AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರನ್ನು ಮೆಚ್ಚಿಸಲು ಈ ಪುರುಷರು ಮಾಡ್ತಾರೆ ವಿಶೇಷ ನೃತ್ಯ, ಏನಿದು ವಿಶಿಷ್ಟ ಆಚರಣೆ?

ಗಂಡು ಮಕ್ಕಳ ಮನಸ್ಸನ್ನು ಹೇಗೆ ಬೇಕಾದ್ರು ಗೆಲ್ಲಬಹುದು, ಆದ್ರೆ ಈ ಹೆಣ್ಣು ಮಕ್ಕಳ ಮನಸ್ಸನ್ನು ಗೆಲ್ಲೋದು ಅಷ್ಟು ಸುಲಭವಲ್ಲ ಬಿಡಿ. ಹೀಗಾಗಿ ಹುಡುಗಿಯರ ಗಮನ ಸೆಳೆಯಲು ಪ್ರಾಯಕ್ಕೆ ಬಂದ ಗಂಡು ಮಕ್ಕಳು ಮಾಡೋ ಸರ್ಕಸ್‌ಗಳು ಒಂದೆರಡಲ್ಲ. ಆದರೆ ಈ ಬುಡಕಟ್ಟು ಜನಾಂಗದ ಪುರುಷರು ಮಾತ್ರ ಮಹಿಳೆಯರ ಗಮನ ಸೆಳೆಯಲು ವಿಶಿಷ್ಟ ನೃತ್ಯ ಮಾಡ್ತಾರೆಯಂತೆ. ಈ ನೃತ್ಯವನ್ನು ಯಾವಾಗ ಮಾಡಲಾಗುತ್ತದೆ. ಏನಿದರ ವಿಶೇಷತೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರನ್ನು ಮೆಚ್ಚಿಸಲು ಈ ಪುರುಷರು ಮಾಡ್ತಾರೆ ವಿಶೇಷ ನೃತ್ಯ, ಏನಿದು ವಿಶಿಷ್ಟ ಆಚರಣೆ?
ವುಡಾಬೆ ಬುಡಕಟ್ಟು ಪುರುಷರ ವಿಶೇಷ ಯಾಕಿ ಡಾನ್ಸ್Image Credit source: Michael Kappeler/picture alliance via Getty Images
ಸಾಯಿನಂದಾ
|

Updated on: Jul 02, 2025 | 6:21 PM

Share

ಕೆಲವು ಬುಡಕಟ್ಟು ಜನಾಂಗದವರು (Tribal people) ಬದುಕುವ ರೀತಿ, ಅವರ ಆಚಾರ ವಿಚಾರಗಳನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಆಧುನಿಕ ಜಗತ್ತಿನಿಂದ ದೂರ ಉಳಿದು ತಮ್ಮದೇ ವಿಚಿತ್ರವಾದ ಪದ್ಧತಿ ಹಾಗೂ ಆಚರಣೆಗಳಿಂದ ಗಮನ ಸೆಳೆಯುತ್ತಾರೆ ಈ ಜನರು. ಆದರೆ ಈ ಬುಡಕಟ್ಟಿನ ಪುರುಷರು ಮಹಿಳೆಯರನ್ನು ವರಿಸಲು ಮಾಡುವ ಸರ್ಕಸ್ ತಿಳಿದ್ರೆ ನೀವು ಅಚ್ಚರಿ ಪಡ್ತೀರಾ. ಗೆರೆವಾಲ್ ಹಬ್ಬವನ್ನು ಆಚರಿಸಿ ಇಲ್ಲಿ ವಿಶೇಷ ಯಾಕಿ ನೃತ್ಯದ (Yaki Dance) ಮೂಲಕ ಮಹಿಳೆಯನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುತ್ತಾರೆ.

ಹೌದು ಈ ರೀತಿಯ ವಿಚಿತ್ರ ಆಚರಣೆಯಿರುವುದು ಆಫ್ರಿಕನ್ ಬುಡಕಟ್ಟು ಜನಾಂಗದಲ್ಲಿಯಂತೆ. ವುಡಾಬೆ ಎಂಬ ಆಫ್ರಿಕನ್ ಬುಡಕಟ್ಟು ಜನಾಂಗದಲ್ಲಿ ಬೇರೆಯವರ ಪತಿಯ ಮನಸ್ಸನ್ನು ಕದಿಯುತ್ತಾರೆಯಂತೆ ಪುರುಷರು. ಇದಕ್ಕಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಂತ ದೊಡ್ಡ ಹಬ್ಬವನ್ನು ಆಯೋಜಿಸಲಾಗುತ್ತದೆ. ಬೇರೆ ಬೇರೆ ಕಡೆಗೆ ವಲಸೆ ಹೋಗುವ ಈ ಬುಡಕಟ್ಟಿನ ಜನರು ಎಲ್ಲೇ ಹೋದ್ರೂ ಕೂಡ ತಮ್ಮ ಮೂಲ ನೆಲೆ ಅಥವಾ ಮನೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಮರಳುತ್ತಾರೆ.

ಏನಿದು ಗೆರೆವಾಲ್ ಹಬ್ಬ?

ಇದನ್ನೂ ಓದಿ
Image
Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತವಾಗಿಲ್ಲ
Image
ಒಂದು ತಿಂಗಳಿನಿಂದ ಜೀವಂತ ಹುಳುಗಳನ್ನು ವಾಂತಿ ಮಾಡುತ್ತಿರುವ ಬಾಲಕಿ
Image
ಶಾಲೆಯ ಮೆಟ್ಟಿಲ ಮೇಲೆ ಕುಳಿತು ತೂಕಡಿಸಿದ ಪುಟಾಣಿ
Image
ಭಾರತದ ಪಾಸ್‌ಪೋರ್ಟ್ ನೋಡಿ ರೂಮ್​​​ ನೀಡಿದ ವಿಮಾನ ಸಂಸ್ಥೆ

ವುಡಾಬೆ ಎಂಬ ಆಫ್ರಿಕನ್ ಬುಡಕಟ್ಟು ಜನಾಂಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗೆರೆವಾಲ್ ಎಂಬ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪ್ರಮುಖ ಆಕರ್ಷಣೆಯೇ ಯಾಕಿ ನೃತ್ಯ. ವಿಶೇಷವಾಗಿ ಈ ನೃತ್ಯವನ್ನು ಈ ಬುಡಕಟ್ಟಿನ ಪುರುಷ ಮಂದಿ ಮಾಡುವುದು ವಾಡಿಕೆ. ಪುರುಷರೇ ಮಾಡುವುದರ ಹಿಂದೆ ಕಾರಣವಿದೆ. ಸರಿಸುಮಾರು ಏಳು ದಿನಗಳ ಕಾಲ ನಡೆಯುವ ಈ ಹಬ್ಬ ಆಚರಣೆಯೂ ಬಹಳ ವಿಶಿಷ್ಟವಾಗಿರುತ್ತದೆ. ಆದರೆ ಈ ಆಚರಣೆ ಎಲ್ಲಿ ನಡೆಯುತ್ತದೆ ಎನ್ನುವ ಬಗ್ಗೆ ಯಾರಿಗೂ ಕೂಡ ಬಹಿರಂಗಪಡಿಸಲಾಗುವುದಿಲ್ಲ, ರಹಸ್ಯವಾಗಿಯೇ ಇಡಲಾಗುತ್ತದೆ. ಈ ಹಬ್ಬದ ಆಚರಣೆ ಶುರುವಾಗುವ ಕೆಲವೇ ಕೆಲವು ದಿನಗಳ ಮುಂಚಿತವಾಗಿ ಸ್ಥಳವನ್ನು ತಿಳಿಸಲಾಗುತ್ತದೆ.

ಇದನ್ನೂ ಓದಿ : ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?

ಯಾಕಿ ನೃತ್ಯ ಮಾಡುವುದರ ಹಿಂದಿದೆ ಈ ಕಾರಣ

ಗೆರೆವಾಲ್ ಹಬ್ಬದಲ್ಲಿ ಯಾಕಿ ನೃತ್ಯವು ಬಹಳ ಮುಖ್ಯವಾದದ್ದು. ಈ ನೃತ್ಯವನ್ನು ಸರಿಸುಮಾರು ಆರು ಗಂಟೆಗಳ ಕಾಲ ಮಾಡಲಾಗುತ್ತದೆ. ಪುರುಷರು ಮಾತ್ರ ಈ ನೃತ್ಯ ಮಾಡುವುದು ಇನ್ನೊಂದು ವಿಶೇಷ. ಮದುವೆಯಾದ ಹಾಗೂ ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳು ಪುರುಷರ ಈ ನೃತ್ಯವನ್ನು ನೋಡಲು ಸೇರುತ್ತಾರೆ. ಯಾಕಿ ನೃತ್ಯದ ವೇಳೆ ಯಾವ ಪುರುಷ ಅತ್ಯಂತ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾನೋ ಅವರನ್ನು ಮದುವೆಯಾಗಲು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗಿದೆ. ಹೀಗಾಗಿ ಪುರುಷರು ತಮ್ಮ ನೃತ್ಯದ ಮೂಲಕವೇ ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಮಹಿಳೆಯರನ್ನೇ ಮೆಚ್ಚಿಸುವುದೇ ಈ ನೃತ್ಯದ ಮುಖ್ಯ ಉದ್ದೇಶವಾಗಿದ್ದು, ತನ್ನನ್ನು ಮೆಚ್ಚಿದ ಮಹಿಳೆಯೊಂದಿಗೆ ಸಂಸಾರ ಮಾಡಬಹುದು. ಮದುವೆಯಾದ ಹೆಣ್ಣು ಮಕ್ಕಳಿಗೂ ಕೂಡ ಪರಪುರುಷರನ್ನು ಆಯ್ಕೆ ಮಾಡಿ ಸಂಸಾರ ನಡೆಸುವ ಸ್ವಾತಂತ್ರ್ಯ ಇದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ