AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದೇಶದ ಪಾಸ್‌ಪೋರ್ಟ್​ಗೆ ಎಷ್ಟು ಬೆಲೆಯಿದೆ ನೋಡಿ, ಭಾರತದ ಪಾಸ್‌ಪೋರ್ಟ್ ನೋಡಿ‌ ಚಿಕ್ಕ ರೂಮ್​​​ ನೀಡಿದ ವಿಮಾನ ಸಂಸ್ಥೆ

ಒಂದು ದೇಶದ ಪಾಸ್‌ಪೋರ್ಟ್​ಗೆ ಎಷ್ಟು ಬೆಲೆಯಿದೆ ಎಂಬುದನ್ನು ಈ ವಿಡಿಯೋದಿಂದ ನೋಡಬಹುದು. ಈ ವಿಡಿಯೋವನ್ನು ಅಮೆರಿಕದಲ್ಲಿರುವ ಭಾರತೀಯ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ, ಭಾರತ ಪಾಸ್‌ಪೋರ್ಟ್​ ಹಾಗೂ ಅಮೆರಿಕದ ಪಾಸ್‌ಪೋರ್ಟ್​ಗೆ ಇರುವ ವ್ಯತ್ಯಾಸವನ್ನು ಇಲ್ಲಿ ಹೇಳಿದ್ದಾರೆ. ಪಾಸ್‌ಪೋರ್ಟ್​​ನಿಂದ ತಾನು ಯಾವ ರೂಮ್​​​ನಲ್ಲಿ ಉಳಿಯಬೇಕು ಎಂಬುದನ್ನು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ ಎಂಬ ದುಃಖದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಒಂದು ದೇಶದ ಪಾಸ್‌ಪೋರ್ಟ್​ಗೆ ಎಷ್ಟು ಬೆಲೆಯಿದೆ ನೋಡಿ, ಭಾರತದ ಪಾಸ್‌ಪೋರ್ಟ್ ನೋಡಿ‌ ಚಿಕ್ಕ ರೂಮ್​​​ ನೀಡಿದ ವಿಮಾನ ಸಂಸ್ಥೆ
ವೈರಲ್​ ವಿಡಿಯೋ
ಸಾಯಿನಂದಾ
| Edited By: |

Updated on: Jul 01, 2025 | 12:59 PM

Share

ಒಂದು ದೇಶದ ಪಾಸ್‌ಪೋರ್ಟ್​ಗೆ (Indian passport) ಎಷ್ಟು ಬೆಲೆ ಇರುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ನೋಡಿ. ಕೆಲವೊಂದು ದೇಶದ ಪಾಸ್‌ಪೋರ್ಟ್​ಗೆ ಎಷ್ಟೊಂದು ಶಕ್ತಿ, ಮೌಲ್ಯ ಇದೆ ಎಂಬುದು ಇದರಿಂದಲ್ಲೇ ತಿಳಿಯುತ್ತದೆ. ಮತ್ತು ಆ ದೇಶದ ವಿಮಾನಯಾನದ ಮೌಲ್ಯ ಏನು ಎಂಬದನ್ನು ಸಹ ಪಾಸ್‌ಪೋರ್ಟ್‌ ತೋರಿಸುತ್ತದೆ. ಈ ಬಗ್ಗೆ ಮಹಿಳೆಯೊಬ್ಬರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿರುವ ಭಾರತ ಮೂಲದ ಮಹಿಳೆಯೊಬ್ಬರು ವಿಮಾನ ನಿಲ್ದಾಣದಲ್ಲಿ ಆಗಿರುವ ಘಟನೆಯ ಬಗ್ಗೆ ಇನ್‌ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಅನಿಶಾ ಅರೋರಾ ಎಂಬುವವರು ಅಮೆರಿಕದಿಂದ  ಜರ್ಮನ್​​​ಗೆ ಪ್ರಯಾಣ ಮಾಡಬೇಕಿತ್ತು. ಈ ವೇಳೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕನೆಕ್ಟಿಂಗ್ ಫ್ಲೈಟ್ ಮಿಸ್​​​​ ಆಗಿದೆ. ಇವರ ಜತೆಗೆ ಇತರ ಕೆಲವೊಂದು ಪ್ರಯಾಣಿಕರಿಗೂ ಈ ವಿಮಾನ ತಪ್ಪಿದೆ. ಈ ಕಾರಣಕ್ಕೆ ಮುಂದಿನ ವಿಮಾನದಲ್ಲಿ ಹೋಗಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿತ್ತು. ಹಾಗಾಗಿ ಅವರಿಗೆ ಉಳಿದುಕೊಳ್ಳಲು ವಿಮಾನಯಾನ ಸಂಸ್ಥೆಯೇ ಹೋಟೆಲ್​​​​​​ ಬುಕ್​ ಮಾಡಿತ್ತು. ಈ ಹೋಟೆಲ್​​​ ರೂಮ್ ನೀಡುವಾಗ ಪಾಸ್‌ಪೋರ್ಟ್‌ ಆಧಾರದ ಮೇಲೆ ನೀಡಿದ್ದಾರೆ ಎಂದು ಅನಿಶಾ ಅರೋರಾ ಹೇಳಿಕೊಂಡಿದ್ದಾರೆ.

ಅನಿಶಾ ಅರೋರಾ ಅವರಿಗೆ ಚಿಕ್ಕ ರೂಮ್​​​ ನೀಡಿದ್ದು, ತನ್ನ ಜತೆಗೆ ಇದ್ದ ಇತರ ಅಮೇರಿಕನ್ ಪಾಸ್‌ಪೋರ್ಟ್‌ ಹೊಂದಿರುವವರಿಗೆ ಫೈವ್ ಸ್ಟಾರ್​​ ಹೋಟೆಲ್​​​​​ನಲ್ಲಿ ರೂಮ್​​ ನೀಡಲಾಗಿದೆ ಎಂದು ಹೇಳಿದ್ದಾರೆ. ತಮಗೆ ನೀಡಿದ ಚಿಕ್ಕ ರೂಮಿನ ವಿಡಿಯೋವನ್ನು ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಪಾಸ್‌ಪೋರ್ಟ್​​​ನಿಂದ ಏನೆಲ್ಲಾ ಬದಲಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಹೇಳಿದ್ದಾರೆ. ಇನ್ನು  ವಿಡಿಯೋದಲ್ಲಿ ಅವರು ಏನು ಹೇಳಿದ್ರು ಎಂಬುದು ಇಲ್ಲಿದೆ ನೋಡಿ. “ನಾನು ಇಲ್ಲಿಯವರೆಗೆ ನನ್ನ ಪಾಸ್‌ಪೋರ್ಟ್ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸಲಿಲ್ಲ, ಕನೆಕ್ಟಿಂಗ್ ಫ್ಲೈಟ್ ವಿಳಂಬವಾದ ಕಾರಣ ಫ್ರಾಂಕ್‌ಫರ್ಟ್​​​ನಲ್ಲಿ ವಿಮಾನ ಮಿಸ್​​​ ಆಗಿದೆ. ಇತರ ಪ್ರಯಾಣಿಕರಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ಉಚಿತ ವಾಸ್ತವ್ಯ ಮತ್ತು ಉಚಿತ ಉಪಹಾರ ಮತ್ತು ಭೋಜನ ಸಿಗುತ್ತಿರುವಾಗ ನಾನು ಮಾತ್ರ ವಿಮಾನ ನಿಲ್ದಾಣದ ಚಿಕ್ಕ ರೂಮ್​​ನಲ್ಲಿ ಉಳಿಯಬೇಕಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ನಿಮ್ಮ ಶಾಲೆಯ ಸಹವಾಸ ಸಾಕು ಎಂದು ಬ್ಯಾಗ್​​ ಹಿಡಿದುಕೊಂಡು ಓಡಿದ ಪುಟ್ಟ ಬಾಲಕ
Image
ಅಮೆರಿಕಾಕ್ಕಿಂತ ಇಂಡಿಯಾನೇ ಬೆಸ್ಟ್ : ಈ ವಿದೇಶಿ ಮಹಿಳೆ ಕೊಟ್ಟ ಕಾರಣ ನೋಡಿ
Image
ಸೈಕಲ್ ತುಳಿಯುತ್ತಾ ತನ್ನ ಮುದ್ದಿನ ಶ್ವಾನದೊಂದಿಗೆ ದೇಶ ಸುತ್ತುತ್ತಿರುವ ಯುವಕ
Image
ಈ ಬ್ರಿಟಿಷ್ ಪ್ರಜೆ ಧೈರ್ಯ ಮೆಚ್ಚಲೇಬೇಕು, ಪಾಕ್​​​ನಲ್ಲಿ ಭಾರತದ ಹಾವ

ವೈರಲ್​​ ವಿಡಿಯೋ ಇಲ್ಲಿದೆ ನೊಡಿ:

View this post on Instagram

A post shared by Anisha Arora (@anishaaa1102)

ಅರೋರಾ ರೂಮ್​​​​​​​​ನ  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಕೋಣೆಯ ಉದ್ದ ಮತ್ತು ಅಗಲದಿಂದ ಶುರು ಮಾಡಿ ಎಲ್ಲವನ್ನು ತೋರಿಸಿದ್ದಾರೆ. ಈ ವೇಳೆ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಬಗ್ಗೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪಾಸ್‌ಪೋರ್ಟ್ ಹೊಂದಿರುವವರು ಹೊರಗೆ ಹೋಗಿ ಜರ್ಮನಿಯ ಸಂಪರ್ಕ ಸಾಧಿಸಲು 20 ಗಂಟೆಗಳ ಕಾಲಾವಕಾಶವಿದೆ. ಮತ್ತೊಂದೆಡೆ ನನ್ನಲ್ಲಿ ಷೆಂಗೆನ್ ವೀಸಾ ಇಲ್ಲದ ಕಾರಣ ಈ ಚಿಕ್ಕ ರೂಮ್​​​ನಲ್ಲಿ ಉಳಿಯಬೇಕಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಶಾಲೆಯ ಸಹವಾಸ ಸಾಕು ಎಂದು ಬ್ಯಾಗ್​​ ಹಿಡಿದುಕೊಂಡು ಓಡಿದ ಪುಟ್ಟ ಬಾಲಕ, ಮನವೊಲಿಸಲು ಶಿಕ್ಷಕರು ಮಾಡಿದ್ದೇನು?

ನ್ಯೂಯಾರ್ಕ್​​ನಲ್ಲಿ ನೆಲೆಸಿರುವ ಅನಿಶಾ ಅರೋರಾ, ತನ್ನ ಪ್ರದೇಶದಲ್ಲಿ ಉಳಿದಿರುವ ಇತರ ಅಮೆರಿಕನ್​​ ಜನರು ತುಂಬಾ ಖುಷಿಯಲ್ಲಿದ್ದರು. ಏಕೆಂದರೆ ಅವರಿಗೆ ಎಲ್ಲವೂ ಉಚಿತವಾಗಿ ಸಿಕ್ಕಿದೆ. ಆದರೆ ನನ್ನ ಬಳಿ ಭಾರತೀಯ ಪಾಸ್‌ಪೋರ್ಟ್ ಇರುವುದರಿಂದ ನನಗೆ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತವು 82 ನೇ ಸ್ಥಾನದಲ್ಲಿದೆ ಮತ್ತು 10 ನೇ ಸ್ಥಾನದಲ್ಲಿ ಅಮೆರಿಕ ಇದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?